ಉದ್ಯಮಿ ಜೊತೆ ವಜ್ರಕಾಯ ನಟಿ ಶುಭ್ರಾ ಅಯ್ಯಪ್ಪ ಮದುವೆ ಫಿಕ್ಸ್‌; ಕೂರ್ಗ್‌- ಮೈಸೂರಿನಲ್ಲಿ ಸಿದ್ಧತೆ ಶುರು

Published : Jan 10, 2023, 01:08 PM IST

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮಾಡಲ್ ಕಮ್ ನಟಿ ಶುಭ್ರಾ ಅಯ್ಯಪ್ಪ. ಮದುವೆ ಡೇಟ್‌ ಮತ್ತು ಸ್ಥಳ ಫಿಕ್ಸ್‌....

PREV
18
ಉದ್ಯಮಿ ಜೊತೆ ವಜ್ರಕಾಯ ನಟಿ ಶುಭ್ರಾ ಅಯ್ಯಪ್ಪ ಮದುವೆ ಫಿಕ್ಸ್‌; ಕೂರ್ಗ್‌- ಮೈಸೂರಿನಲ್ಲಿ ಸಿದ್ಧತೆ ಶುರು

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಡಲ್ ಶುಭ್ರಾ ಅಯ್ಯಪ್ಪ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

28

ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಜನವರಿ 18ರಂದು ಕೂರ್ಗ್‌ನಲ್ಲಿ ಮದುವೆ ಆಗಲಿದ್ದಾರೆ. ಮೈಸೂರಿನಲ್ಲಿ ಆಪ್ತರ ಮತ್ತು ಸಿನಿ ಸ್ನೇಹಿತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ. 

38

 'ವಿಶಾಲ್ ಶಿವಪ್ಪ ಮತ್ತು ನಾನು ಮೊದಲು ಭೇಟಿಯಾಗಿದ್ದು 6 ವರ್ಷಗಳ ಹಿಂದೆ. ನನ್ನ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು ಎಂದು ನನ್ನ ಸ್ನೇಹತರ ಬಳಿ ಮಾಹಿತಿಗಾಗಿ ಬೇಡುತ್ತಿದ್ದರು' ಎಂದು ಬೆಂಗಳೂರು ಟೈಮ್ಸ್‌ ಸಂದರ್ಶನದಲ್ಲಿ ಶುಭ್ರಾ ಹೇಳಿದ್ದಾರೆ. 

48

 'ನಾನು ಹುಡುಗರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಪಾರ್ಟಿಯಿಂದ ದೂರ ಉಳಿದಿರುವ ಹುಡುಗಿ ಎಂದು ನನ್ನ ಸ್ನೇಹಿತೆ ಹೇಳಿದ್ದಾಳೆ'

58

'2019ರಿಂದ ಯುಎಸ್‌ನಿಂದ ಬಂದಂತೆ ವಿಶಾಲ್ ಶಿವಪ್ಪ ನನ್ನನ್ನು  ಭೇಟಿ ಮಾಡುವುದಕ್ಕೆ ಕೇಳಿದ್ದರು. ನನ್ನ ಸ್ನೇಹಿತೆ ಆಕೆ ಮನೆಯಲ್ಲಿ ಊಟ ಹಮ್ಮಿಕೊಂಡು ನನ್ನನ್ನು ಆಹ್ವಾನಿಸಿದ್ದರು'

68

'ಅಲ್ಲಿಗೆ ಬಂದ ವಿಶಾಲ್‌ ನೇರವಾಗಿ 'ಕೇಳಿಸಿಕೊಳ್ಳಿ. ನಾನು ನಿಮ್ಮನ್ನು ಮದುವೆ ಆಗುವೆ' ಎಂದು ಹೇಳಿದ್ದರು. ಈ ಹುಡುಗ ಕ್ರೇಜಿ ಎಂದುಕೊಂಡಿದ್ದೆ'

78

'ಮೂರು ವರ್ಷಗಳ ನಂತರ ಖುಷಿಯಾಗಿ ಹೇಳುವೆ ವಿಶಾಲ್‌ನ ಭೇಟಿ ಮಾಡಿರುವುದಕ್ಕೆ ಖುಷಿ ಇದೆ. ಅವರ ಪೋಷಕರು ನನ್ನನ್ನು ತುಂಬಾ ಇಷ್ಟ ಪಡುತ್ತಾರೆ' 

88

'ಜನವರಿ 18ರಂದು ಫ್ಯಾಮಿಲಿ ಜೊತೆ ಕೂರ್ಗ್‌ನ ಮನೆಯಲ್ಲಿ ನಾವು ಸರಳವಾಗಿ ಮದುವೆ ನಡೆಯುತ್ತಿದೆ. ಜನವರಿ 20 ಮತ್ತು 21ರಂದು ಮೈಸೂರಿನಲ್ಲಿ ಸ್ನೇಹಿತರಿಗೆ ಸಣ್ಣ ಸೆಲೆಬ್ರೇಷನ್‌ ಹಮ್ಮಿಕೊಂಡಿದ್ದೀವಿ' ಎಂದು ಶುಭ್ರಾ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories