ಟೋಯೋಟಾ ವೆಲ್‌ಫೈರ್ ಕಾರನ್ನು ಬಹುತೇಕ ಸೆಲೆಬ್ರೆಟಿಗಳು, ರಾಜಕಾರಣಗಳು ಬಳಸುತ್ತಾರೆ. ಇದರ ಸ್ಥಳವಕಾಶ, ಶೂಟಿಂಗ್ ನಡುವೆ ವಿಶ್ರಾಂತಿ ಸೇರಿದಂತೆ ಹಲವು ಕಾರಣಗಳಿಗೆ ಈ ಕಾರು ಅತ್ಯಂತ ಸೂಕ್ತವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್, ಡಾಲಿ ಧನಂಜಯ್, ಅಭಿಷೇಕ್ ಅಂಬರಿಷ್ ಸೇರಿದಂತೆ ಕೆಲವೆ ಕೆಲವು ನಟರು ಈ ಕಾರನ್ನು ಬಳಸುತ್ತಿದ್ದಾರೆ.