2014ರಲ್ಲಿ ಸ್ಯಾಂಡಲ್ವುಡ್ಗೆ (Sandalwood) ಎಂಟ್ರಿ ಕೊಟ್ಟಿರೋ ಶಾನ್ವಿ, `ಚಂದ್ರಲೇಖಾ' ಚಿತ್ರದಲ್ಲಿ ನಟಿಸಿದರು. ಅದಾದ ಬಳಿಕ `ಮಾಸ್ಟರ್ ಪೀಸ್',`ಭಲೇ ಜೋಡಿ', `ಸುಂದರಾಂಗ ಜಾಣ',`ಸಾಹೇಬ',ತಾರಕ್', `ಮಫ್ತಿ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತ್ರಿಶೂಲಂ ಸಿನಿಮಾದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಶಾನ್ವಿ ರಾಟಿ ಸಿನಿಮಾ ಮೂಲಕ ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ರಾಟಿ ಉಗ್ರಂ ಸಿನಿಮಾದ ರಿಮೇಕ್ ಆಗಿದೆ.