ಅಬ್ಬಬ್ಬಾ! ವೀಕೆಂಡ್ ಬಂದ್ರೆ ರಚಿತಾ ರಾಮ್ ಭೇಟಿ ಮಾಡುವ ಅಭಿಮಾನಿಗಳು ದಂಡು ನೋಡಿ!

Published : Mar 16, 2024, 02:13 PM IST

ಮನೆಯಲ್ಲಿ ಇದ್ದಾಗಲೆಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿದ ಡಿಂಪಲ್ ಕ್ವೀನ್. ಫ್ಯಾನ್‌ ಪೇಜ್‌ ಲೆಕ್ಕವಿಲ್ಲ....

PREV
18
ಅಬ್ಬಬ್ಬಾ! ವೀಕೆಂಡ್ ಬಂದ್ರೆ ರಚಿತಾ ರಾಮ್ ಭೇಟಿ ಮಾಡುವ ಅಭಿಮಾನಿಗಳು ದಂಡು ನೋಡಿ!

 ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್, ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್‌ ಪ್ರತಿ ತಿಂಗಳು ಅಭಿಮಾನಿಗಳನ್ನು ತಪ್ಪದೆ ಭೇಟಿ ಮಾಡುತ್ತಾರೆ.

28

ರಾಜರಾಜೇಶ್ವರಿ ನಗರದಲ್ಲಿ ನೆಲೆಸಿರುವ ರಚಿತಾ ರಾಮ್‌ ಚಿತ್ರೀಕರಣ ಇಲ್ಲದ ಸಮಯದಲ್ಲಿ ಮನೆಯಲ್ಲಿಯೇ ಇರುತ್ತಾರೆ. ಆಗ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ.

38

ಒಬ್ಬ ಬರಲಿ ಇಬ್ಬರು ಬರಲಿ, 10 ಜನ ಬರಲಿ ಅಥವಾ ನೂರಾರು ಮಂದಿ ಬರಲಿ...ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ ಅಂತಾರೆ ಫ್ಯಾನ್ಸ್‌.

48

ನೂರಾರು ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿದ್ದು ರಚಿತಾ ರಾಮ್‌ರನ್ನು ಭೇಟಿ ಮಾಡುವ ವಿಡಿಯೋ ಮತ್ತು ಫೋಟೋ ಸಖತ್ ವೈಲರ್ ಆಗುತ್ತಿದೆ. 

58

ವಿಶೇಷ ಚೇತನ ಅಭಿಮಾನಿಗಳು ಬಂದರೆ ಯಾರೇ ಇರಲಿ ಏನೇ ಕೆಲಸವಿರಲಿ ಅದನ್ನು ಬದಿಗಿಟ್ಟು ಅವರನ್ನು ಮಾತನಾಡಿಸಲು ರಚ್ಚು ಓಡೋಡಿ ಹೋಗುತ್ತಾರೆ.

68

ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಚಿತಾ ರಾಮ್ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.

78

ಸದ್ಯ ಮಾರ್ಟಿನ್‌, ಶಬರಿ ಸರ್ಚಿಂಗ್ ಫಾರ್ ರಾವಣ ಮತ್ತು ಲವ್ ಮಿ ಆರ್ ಹೇಟ್‌ ಮಿ ಸಿನಿಮಾಗಳ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಕಾಯುತ್ತಿದ್ದಾರೆ.

88

ಈ ನಡುವೆ ಸಂಜು ವೆಡ್ಸ್‌ ಗೀತಾ 2 ಸಿನಿಮಾ ಚಿತ್ರೀಕರಣ ಮಾಡಿಕೊಂಡು ಕನ್ನಡ ಕಿರುತೆರೆ ರಿಯಾಲಿಟಿ ಶೋಗಳಾದ ಡ್ರಾಮಾ ಜ್ಯೂನಿಯರ್ಸ್‌, ಸೂಪರ್ ಕ್ವೀನ್ ಮತ್ತು ಭರ್ಜರಿ ಬ್ಯಾಚುಲರ್ಸ್‌ ಜಡ್ಜ್‌ ಆಗಿದ್ದರು. 

Read more Photos on
click me!

Recommended Stories