ಚಿತ್ರರಂಗದಲ್ಲಿ ಬಕೆಟ್‌ ಹಿಡಿಬೇಕು...ತಿನ್ಸ್‌ಬೇಕು..ಕುಡ್ಸ್ಬೇಕು: ಮಯೂರ್ ಪಟೇಲ್

Published : Mar 15, 2024, 01:05 PM IST

ಮಣಿ ಸಿನಿಮಾ ರಿಲೀಸ್ ಸಮಯದಲ್ಲಿ ಏನೆಲ್ಲಾ ಸಮಸ್ಯೆ ಆಯ್ತು ಎಂದು ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ ಹಂಚಿಕೊಂಡಿದ್ದಾರೆ. 

PREV
18
ಚಿತ್ರರಂಗದಲ್ಲಿ ಬಕೆಟ್‌ ಹಿಡಿಬೇಕು...ತಿನ್ಸ್‌ಬೇಕು..ಕುಡ್ಸ್ಬೇಕು: ಮಯೂರ್ ಪಟೇಲ್

2003ರಲ್ಲಿ ಮಣಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಯೂರ್ ಪಟೇಲ್‌ ಸಿನಿಮಾ ಬ್ಯುಸಿನೆಸ್‌ ಹೇಗಿ ನಡೆಯುತ್ತದೆ ಎಂದು ರಿವೀಲ್ ಮಾಡಿದ್ದಾರೆ.

28

ಮಣಿ ಸಿನಿಮಾ ರಿಲೀಸ್‌ ಸಮಯದಲ್ಲಿ ತುಂಬಾ ಕಷ್ಟವಾಯ್ತು. ಆಗ ಟೀ-ಜಂಕ್ಷನ್‌ನಲ್ಲಿ ಹೋರ್ಡಿಂಗ್ ಹಾಕಿಸುವುದು ಅಂದ್ರೆ ದೊಡ್ಡ ಸಿನಿಮಾ ರೀತಿ. ಒಂದು ವಾರಕ್ಕೆ 20 ಸಾವರಿ ಹಣ ಕೊಡಬೇಕಿತ್ತು. ಒಂದು ತಿಂಗಳು ಅಲ್ಲಿ ಹೋರ್ಡಿಂಗ್ ಮಾಡಿಸಬೇಕು ಅಂದ್ರೆ 1 ಲಕ್ಷ ಬೇಕು. 

38

ಪೋಸ್ಟರ್ ಹಾಕ್ಸಿ ಅಂತ ಹೇಳುವುದು ತುಂಬಾನೇ ಸುಲಭ. ನನ್ನ ಮೊದಲ ಸಿನಿಮಾ ಅಲ್ಲಿ ಹೋರ್ಡಿಂಗ್ ಹಾಕಿಸಬೇಕು ಯಾರನ್ನ ಕೇಳಬೇಕು ಹೇಗೆ ಮಾಡಬೇಕು ಗೊತ್ತಿಲ್ಲ. 

48

ನಿಜ ಹೇಳಬೇಕು ಅಂದ್ರೆ ಸಿನಿಮಾ ಇಂಡಸ್ಟ್ರಿಗೆ ಬರಲು ಆಕ್ಟಿಂಗ್ ಬೇಕು ಅನ್ನೋದು ಅಷ್ಟೇ ಗೊತ್ತಿತ್ತು ಹೇಗೆ ಅಂದ್ರೆ ಆಕ್ಟಿಂಗ್ ಇದ್ರೆ ಎಲ್ಲಾ ನಡೆಯುತ್ತದೆ ಟ್ಯಾಲೆಂಟ್‌ ಇದ್ರೆ ಅದೇ investment ಅಂದುಕೊಂಡಿದ್ದೆ. ಇಲ್ಲ ಅದು ಸುಳ್ಳು. ನಮ್ಮ ಬಳಿ ಎಲ್ಲಾ ಇರಬೇಕು. 

58

 ಬ್ಯುಸಿನೆಸ್‌ ತಲೆಯಲ್ಲಿ ಇರಬೇಕು, ಒಂದಷ್ಟು ಜನರಿಗೆ ಬಕೆಟ್ ಹಿಡಿಯಬೇಕು...ಈ ವಿಚಾರದ ಬಗ್ಗೆ ನಾನು ಬಹಿರಂಗವಾಗಿ ಸತ್ಯ ಹೇಳುತ್ತಿರುವೆ. ಒಂದಷ್ಟು ಜನರಿಗೆ ತಿನ್ನಿಸಬೇಕು ಕುಡಿಸಬೇಕು...ಮಜಾ ಮಾಡಿಸಬೇಕು ಇದು ನಮಗೆ ಏನೂ ಗೊತ್ತಿಲ್ಲ.

68

ಅಭ್ಯಾಸ ನಮಗೂ ಇದೆ ಆದರೆ ಇದನ್ನು ಬಂಡವಾಳ ಮಾಡಿಕೊಂಡು ಜೀವನ ನಡೆಸುವವರು ಒಂದಷ್ಟು ಜನರಿದಾರೆ ಅದು ತಪ್ಪು' ಎಂದು ರಘುರಾಮ್ ನಡೆಸುವ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಮಯೂರ್ ಮಾತನಾಡಿದ್ದಾರೆ. 

78

ನನ್ನ ಮೊದಲ ಸಿನಿಮಾ ಬಗ್ಗೆ ಒಬ್ಬರು ಬರೆಯಬೇಕು ನನ್ನ ಜೊತೆ ಮಾತನಾಡಬೇಕು ಅಂದ್ರೆ ದುಡ್ಡು ಕೊಡಬೇಕು. ಅದು ನನಗೆ ಗೊತ್ತಿಲ್ಲ ಜರ್ನಿ ಸಾಗುತ್ತಾ ಸಾಗುತ್ತಾ ಎಲ್ಲಿ ಹೇಗೆ ಯಾರನ್ನು ಹೇಗೆ ಬಳಸಿಕೊಳ್ಳಬೇಕು ಜೊತೆ ನಾವು ಹೇಗೆ ನಡೆದುಕೊಳ್ಳಬೇಕು ಅನ್ನೋದು ತಿಳಿದುಕೊಂಡೆ.

88

ಆ ಸಮಯದಲ್ಲಿ ಕಲಿಸುವವರು ಯಾರೂ ಇರಲಿಲ್ಲ. ಎಲ್ಲರೂ ಅಂದುಕೊಳ್ಳುತ್ತಾರೆ ತಂದೆ ಇದ್ದಾರೆ ಬಿಡು ಅಂತ ಆದರೆ ನನ್ನ ತಂದೆ ಏನೂ ಹೇಳಿಕೊಟ್ಟಿಲ್ಲ. ನಿನ್ನಲ್ಲಿ ನಿಜವಾದ ಕಲೆ ಇದ್ರೆ ಭಗವಂತ ನಿನ್ನ ಕೈ ಹಿಡಿಯುತ್ತಾನೆ ಅಂತ ಪ್ರ್ಯಾಕ್ಟಿಕಲ್ ಆಗಿ ಹೇಳುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories