ನನ್ನ ಮದುವೆ ಆಯ್ತು. ಆದ ಮೇಲೆ ವರ್ಕೌಟ್ ಆಗಲಿಲ್ಲ. ಜನರಿಗೂ ಗೊತ್ತಾಗಬೇಕು ಮದುವೆ ಜೀವನ ವರ್ಕೌಟ್ ಆಗಲಿಲ್ಲ ಅಂತ. ಇಬ್ಬರು ಮಾತನಾಡಿಕೊಂಡು ಪರಸ್ಪರ ನಿರ್ಧಾರ ಮಾಡಿ ಸಪರೇಟ್ ಆಗಿದ್ದು.
ಇದು ಲವ್ ಮ್ಯಾರೇಜ್ ಆಗಿತ್ತು. ಲೈಫ್‌ನಲ್ಲಿ ನಾವು ಅಂದುಕೊಂಡಂತೆ ಆಗಲ್ಲ ಹೀಗಾಗಿ ಜೀವನವನ್ನು ಒಪ್ಪಿಕೊಂಡು ಚೆನ್ನಾಗಿ ಬದುಕಬೇಕು. ನಿರೀಕ್ಷೆ ಹೆಚ್ಚಿಗೆ ಇದ್ದಷ್ಟು ದುಃಖ ಅಗುತ್ತೆ.
ಮನುಷ್ಯರಾಗಿ ನಾವು ನಿರೀಕ್ಷೆ ಮಾಡುವುದು ಸಹಜ ಆದರೆ ಯೋಗ್ಯತೆಗೂ ಮೀರಿ ನಿರೀಕ್ಷೆ ಮಾಡಬಾರದು. ನಿರೀಕ್ಷೆಗಳು ತುಂಬಾ ನೋವು ಕೊಡುತ್ತದೆ ಎಂದು ಆಶಿತಾ ಹೇಳಿದ್ದಾರೆ.
ನನ್ನ ಜೀವನದಲ್ಲಿ ನಡೆದಿರುವ ಘಟನೆಗಳಿಂದ ನಾನು ಇಂದು ಗಟ್ಟಿಯಾಗಿರುವೆ..ಈಗ ಯಾವುದೇ ಘಟನೆ ಎದುರಾದರೂ ನಾನು ಸ್ಟ್ರಾಂಗ್ ಆಗಿ ನಿಂತುಕೊಳ್ಳುವೆ ಎಂದು ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಕೆಟ್ಟ ಘಟನೆಗಳನ್ನು ಮಾತ್ರ ನೆನಪಿಸಿಕೊಳ್ಳುವುದಿಲ್ಲ ಅದೆಷ್ಟೋ ಒಳ್ಳೆ ಘಟನೆಗಳು ಇದೆ. ಒಬ್ಬ ಗಂಡಸು ಅಥವಾ ವ್ಯಕ್ತಿಯಿಂದ ನನ್ನ ಜೀವನ ಮುಗಿದಿಲ್ಲ. ಏನೇ ಇದ್ದರೂ ಗಟ್ಟಿಯಾಗಿ ಎದುರಿಸಬೇಕು.
ನಾನು ಜೀವನ ಪೂರ್ತಿ ಫೈಟರ್ ಆಗಿರುವೆ. ಆ ಸಮಯದಲ್ಲಿ ನಾನು ಮಾನಸಿಕವಾಗಿ ಕಷ್ಟ ಅನುಭವಿಸಿದ್ದೀನಿ ಅದರಿಂದ ಹೊರ ಬಂದಿದ್ದೀನಿ. ಕೆಲವರಿಗೆ ಧೈರ್ಯ ಇಲ್ಲದೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ.
ನನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ನನಗೆ ಮೆಂಟಲ್ ಹೆಲ್ತ್ ಸಮಸ್ಯೆ ಆಯ್ತು. ಹೇಗೆ ನಾವು ಮ್ಯಾನೇಜ್ ಮಾಡುತ್ತೀವಿ ಅನ್ನೋದು ಮುಖ್ಯವಾಗುತ್ತದೆ. ಹೀಗಾಗಿ ಯಾವುದಕ್ಕೂ ಹೆದರಿಕೊಳ್ಳಬೇಡಿ' ಎಂದಿದ್ದಾರೆ ಆಶಿತಾ.