30 ಒಳಗೆ ಮದ್ವೆ ಆಗಬೇಡಿ, ಮೊದ್ಲು ಇಲ್ಲ ಅಂದ್ರೂ ಎರಡನೇ ಮದ್ವೆ ವರ್ಕ್‌ ಆಗುತ್ತೆ: ಮಿಲನಾ ನಾಗರಾಜ್

Published : Mar 12, 2024, 02:56 PM IST

ರಿಲೇಷನ್‌ಶಿಪ್‌ ಮತ್ತು ಮದುವೆಯನ್ನು ಹೇಗೆ ಮ್ಯಾನೇಜ್ ಮಾಡಬೇಕು? ಯಾಕೆ ಹೆಚ್ಚಿಗೆ ಡಿವೋರ್ಸ್‌ ಆಗುತ್ತದೆ ಅನ್ನೋ ವಿಚಾರಕ್ಕೆ ಮಿಲನಾ ಮಾತನಾಡಿದ್ದಾರೆ.

PREV
19
30 ಒಳಗೆ ಮದ್ವೆ ಆಗಬೇಡಿ, ಮೊದ್ಲು ಇಲ್ಲ ಅಂದ್ರೂ ಎರಡನೇ ಮದ್ವೆ ವರ್ಕ್‌ ಆಗುತ್ತೆ: ಮಿಲನಾ ನಾಗರಾಜ್

 For Regn ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮಿಲನಾ ನಾಗರಾಜ್ ಮತ್ತು ಪೃಥ್ವಿ ಆಂಬರ್ ಮೊದಲ ಸಲ ಗುಡ್ ಆಂಡ್ ಬ್ಯಾಡ್‌ ಇನ್‌ ರಿಲೇಷನ್‌ಶಿಪ್‌ ಬಗ್ಗೆ ಚರ್ಚೆ ಮಾಡಿದ್ದಾರೆ. 

29

ರಿಲೇಷನ್‌ಶಿಪ್‌ಗಳಲ್ಲಿ ಡಿಫರೆನ್ಸ್‌ಗಳು ಇರುತ್ತೆ ಆದರೆ ಅದನ್ನು ನಾವು ಹೇಗೆ ಡೀಲ್ ಮಾಡ್ತೀವಿ ಅನ್ನೋದು ಮುಖ್ಯ ಆಗುತ್ತೆ. ಡಿಫರೆನ್ಸ್‌ ಬರುತ್ತೆ ಅಂತ ಪ್ರತಿಯೊಂದು ಕಪಲ್‌ಗೂ ಗೊತ್ತಿರುತ್ತದೆ ಎಂದು ಮಿಲನಾ ನಾಗರಾಜ್‌ ಮಾತನಾಡಿದ್ದಾರೆ. 

39

ಈ ವಿಚಾರ ಹೇಳಿದ್ರೆ ನಮ್ಮ ಪಾರ್ಟನರ್‌ಗೆ ಸಿಟ್ಟು ಬರುತ್ತಾ ಇಲ್ವಾ? ಅವರು ನಾನು ಹೇಳುವ ವಿಚಾರ ಒಪ್ಪಿಕೊಳ್ಳುತ್ತಾರಾ ಇಲ್ವಾ ಅನ್ನೋದು ಗೊತ್ತಾಗುತ್ತದೆ. ಅರಲ್ಲೂ ಕೆಲವರು ಬೇಕು ಅಂತ ಕಿತಾಪತಿ ಮಾಡಿಕೊಳ್ಳುತ್ತಾರೆ. 

49

ರಿಲೇಶನ್‌ಶಿಪ್‌ ನಮ್ಮ ಕೈಯಲ್ಲಿ ಇರುತ್ತದೆ. ನಾನು ಸುಮ್ಮನೆ ಹೋಗಿ ಇರಿಟೇಟ್ ಮಾಡಿದ್ರೆ ಜಗಳ ಆಗುತ್ತೆ. ವರ್ಷಗಳು ಕಳೆದ ಮೇಲೆ ಏನು ಇಷ್ಟ ಏನು ಇಷ್ಟ ಇಲ್ಲ ಯಾವುದು ಕೋಪ ಬರ್ಸುತ್ತೆ ಪ್ರತಿಯೊಂದು ಗೊತ್ತಿರುತ್ತದೆ.

59

ತಿಳಿದುಕೊಂಡು ಮೇಲೂ ಅದೇ ಕಿರಿಕಿರಿ ಮಾಡಬಾರದು. ವರ್ಷಗಳು ಬೇಕಾಗಿಲ್ಲ ಒಬ್ಬರನ್ನು ಅರ್ಥ ಮಾಡಿಕೊಳ್ಳಲು. ಅರ್ಧವಾದ ಮೇಲೆ ನೀವು ನೆಮ್ಮದಿಯಿಂದ ಇರಬೇಕು ಅವರೂ ನೆಮ್ಮದಿಯಾಗಿ ಇರಬೇಕು.

69

ನನಗೆ ಇರಿಟೇಟ್ ಮಾಡಿದ್ದಾರೆ ನಾನು ಮಾಡಬೇಕು ಅನ್ನೋದು ಕೆಲವರ ತಲೆಯಲ್ಲಿ ಬರುತ್ತದೆ. ಟೇಕನ್ ಫಾರ್ ಗ್ರಾಂಟ್‌ ಗುಣ ರಿಲೇಶನ್‌ಶಿಪ್‌ನಲ್ಲಿ ವರ್ಕ್‌ ಆಗುವುದಿಲ್ಲ ಎಂದು ಮಿಲನಾ ರೆಡಿಯೋ ಸಿಟಿ ಸಂದರ್ಶನದಲ್ಲಿ ಹೇಳಿದ್ದಾರೆ. 

79

ತಲೆಯಲ್ಲಿ ಮೆಚ್ಯೂರಿಟಿ ಇರುವವರೆಗೂ ಮದುವೆ ಆಗಬೇಡಿ. 25 ವರ್ಷ ಒಳಗೆ ಮೆಚ್ಯೂರಿಟಿ ಇರುವುದಿಲ್ಲ ಹೀಗಾಗಿ 25-30 ಒಳಗೆ ಮದುವೆ ಆಗಲೇ ಬೇಡಿ ಎಂದಿದ್ದಾರೆ ಮಿಲನಾ ನಾಗರಾಜ್.

89

ಆ ಸಮಯದಲ್ಲಿ ಆತುರದಲ್ಲಿ ನಿರ್ಧಾರ ಮಾಡಿ ಜಗಳ ಮಾಡಿಕೊಂಡರೆ ಬೇಗ ಡಿವೋರ್ಸ್‌ ಆಗಿಬಿಡುತ್ತದೆ. ಆಗ ರಿಲೇಷನ್‌ಶಿಪ್‌ ಗ್ರಾಂಟೆಡ್‌ ಆಗುತ್ತದೆ. 

99

25,26,27 ವಯಸ್ಸಿನಲ್ಲಿ ಡಿವೋರ್ಸ್‌ ಆಗಿಬಿಡುತ್ತದೆ. ಆಗ ಮೆಚ್ಯೂರ್ ಆಗಿ ಯೋಚನೆ ಮಾಡಬೇಕು. ಕೆಲವೊಮ್ಮೆ ಮೊದಲನೇ ಮದುವೆ ವರ್ಕ್‌ ಆಗಲ್ಲ ಎರಡನೇ ಮದುವೆ ವರ್ಕೌಟ್ ಆಗುತ್ತದೆ. ಆಗ ಯಾವುದು ಸರಿ ತಪ್ಪು ಅನ್ನೋದು ಅರ್ಥವಾಗುತ್ತದೆ. 

Read more Photos on
click me!

Recommended Stories