ರಾಧಿಕಾ ಪಂಡಿತ್‌ಗೆ ರೇಶ್ಮೆ ಸೀರೆ ಗಿಫ್ಟ್‌ ಕೊಟ್ಟ ಫ್ಯಾನ್ಸ್‌; ಫೋಟೋ ವೈರಲ್!

First Published | Mar 11, 2024, 11:39 AM IST

ಹಲವು ವರ್ಷಗಳ ನಂತರ ಅಭಿಮಾನಿಗಳ ಜೊತೆ ಕಾಣಿಸಿಕೊಂಡ ರಾಧಿಕಾ ಪಂಡಿತ್. ಫೋಟೋ ವೈರಲ್... 
 

ಕನ್ನಡ ಚಿತ್ರರಂಗದ ಸಿಂಡ್ರೆಲಾ ರಾಧಿಕಾ ಪಂಡಿತ್ ಹಲವು ವರ್ಷಗಳ ನಂತರ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ.

ಮನೆ ಬಳಿ ಆಗಮಿಸಿರುವ ಪ್ರತಿಯೊಬ್ಬ ಅಭಿಮಾನಿಯನ್ನು ಭೇಟಿ ಮಾಡಿ ಕೇಕ್ ಕಟ್ ಮಾಡಿದ್ದಾರೆ. ಪ್ರೀತಿಯಿಂದ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

Tap to resize

ಅಲ್ಲದೆ ಅಭಿಮಾನಿಯೊಬ್ಬ ಕೊಟ್ಟಿರುವ ಕ್ರೀಮ್ ಬಣ್ಣದ ರೇಶ್ಮೆ ಸೀರಿಯನ್ನು ಗಿಫ್ಟ್‌ ಕೊಟ್ಟಿದ್ದಾರೆ. ಸೀರೆಯನ್ನು ಕೈಯಲ್ಲಿ ಹಿಡಿದು ರಾಧು ಖುಷಿ ಪಟ್ಟಿದ್ದಾರೆ.

ರಾಧಿಕಾ ಪಂಡಿತ್ ನಟಿಸಿರುವ ಅಷ್ಟೂ ಸಿನಿಮಾಗಳ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ಬಳಸಿ ಗ್ರೀಟಿಂಗ್ ಕಾರ್ಡ್‌ ಮಾಡಿ ಗಿಫ್ಟ್‌ ಕೊಟ್ಟಿದ್ದಾರೆ.

ಆಗಮಿಸಿರುವ ಪ್ರತಿಯೊಬ್ಬ ಅಭಿಮಾನಿಗೂ ರಾಧಿಕಾ ಪಂಡಿತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಮ್ಮ ನಟಿ ಎಂದಿಗೂ ಸಿಂಪಲ್‌ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಐರಾ ಮತ್ತು ಅಥರ್ವ್‌ ಹುಟ್ಟಿದ ಮೇಲೆ ಅದರಲೂ ಕೊರೋನಾ ವೈರಸ್‌ ಹಾವಳಿ ಹೆಚ್ಚಿದ ಮೇಲೆ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. 

Latest Videos

click me!