ಮಹಾರಾಣಿ ರೀತಿ ಅಲಂಕರಿಸಿ ಚಿರು ಪೋಟೋ ಪೇಂಟಿಂಗ್ ಮಾಡಿದ ಮೇಘನಾ ರಾಜ್!

First Published | Oct 17, 2021, 11:17 AM IST

ಮೊದಲ ಬಾರಿ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ ಮೇಘನಾ ರಾಜ್(Meghana Raj). ಸೋಷಿಯಲ್ ಮೀಡಿಯಾದಲ್ಲಿದೆ ಮಹಾರಾಣಿ ಮೇಘನಾ ರಾಜ್ ಫೋಟೋ....

ರಾಯನ್(Rayaan Raj Sarja) ಆಗಮನದ ಬಳಿಕ ಮೇಘನಾ ಯಾವುದೇ ರೀತಿ ಫೋಟೋಶೂಟ್ ಅಥವಾ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ ಹೊಸ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 

ಮಹಾರಾಣಿ ರೀತಿ  ಕೆಂಪು ಮತ್ತು ಹಸಿರು ಬಣ್ಣದ ಸೀರೆ ಧರಿಸಿದ ಚಿರಂಜೀವಿ ಸರ್ಜಾ(Chiranjeevi Sarja) ಅವರ ಮುಖ ಪೇಂಟಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 

Tap to resize

ಮಹಾರಾಣಿ (Maharani) ಸಿಂಹಾಸನದ ಮೇಲೆ ಕುಳಿತು ಮೇಘನಾ ನಗುತ್ತಿರುವ ಫೋಟೋ ನೋಡಿ ಅಭಿಮಾನಿಗಳು(Fans) ಸಂತಸ ವ್ಯಕ್ತಪಡಿಸಿದ್ದಾರೆ. 

ಪ್ರಿಯಾಂಕಾ ಹರೀಶ್ ಮೇಕಪ್,  ಬಿಂದು ರೆಡ್ಡಿ ವಸ್ತ್ರ ವಿನ್ಯಾಸ ಹಾಗೂ ಮಂಜು ಕ್ಲಿಕ್ ತಂಡದ ಜೊತೆ ಮೇಘನಾ ಕೆಲಸ ಮಾಡಿದ್ದಾರೆ. 

ಬೇಬಿ ಪಿಂಕ್(Baby pink) ಸೀರೆ, ಮುತ್ತಿನ ಸರ ಧರಿಸಿ ಪುಸ್ತಕ ಓದುತ್ತಿರುವ ಫೋಟೋ ಅಪ್ಲೋಡ್ ಮಾಡಿ 'Lets make memories'ಎಂದು ಬರೆದುಕೊಂಡಿದ್ದಾರೆ. 

'ಜೀವ ಪೂರ್ತಿ ಈ ಫೋಟೋ ನೋಡುತ್ತಿರಬಹುದು.  ಸಂಭ್ರಮ ಶುರುವಾಗಲಿ. ಈ ಫೋಟೋಶೂಟ್ ಮಾಡಲು ನನ್ನನ್ನು ಒಪ್ಪಿಸಿದ್ದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

Latest Videos

click me!