ಮಕ್ಕಳ ಜೊತೆ ಜಮ್ಮು- ಕಾಶ್ಮೀರದ ವೈಷ್ಣೋ ದೇವಿ ದರ್ಶನ ಪಡೆದ ನಟ ಅನಿರುದ್ಧ

First Published | Oct 10, 2021, 11:41 AM IST

ವೈಷ್ಣೋದೇವಿ ದರ್ಶನ ಪಡೆದ 'ಜೊತೆ ಜೊತೆಯಲಿ' ಅರ್ಯವರ್ಧನ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯ ಪ್ರಮುಖ ಪಾತ್ರಧಾರಿ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ ಮಕ್ಕಳ ಜೊತೆ ಪ್ರವಾಸ ಮಾಡುತ್ತಿದ್ದಾರೆ. 

ಕೆಲವು ದಿನಗಳಿಂದ ಕಾತ್ರಾ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಯಾತ್ರೆ ಮಾಡಿರುವುದಾಗಿ ಫೋಟೋ ಹಂಚಿಕೊಂಡಿದ್ದಾರೆ. 

Tap to resize

'ನಾವು ವೈಷ್ಣೋದೇವಿಗೆ ಹೋಗಿ ಬಂದೆವು. ಕೀರ್ತಿಯವರು ಕೆಲವು ವರ್ಷಗಳ ಹಿಂದೆ ಹೋಗಿ ಬಂದಿದ್ದಾರೆ. ಈ ಬಾರಿ ನಮ್ಮ ಜೊತೆ ಬಂದಿಲ್ಲ. ಸರ್ವೇ ಜನಃ ಸುಖಿನೋ ಭವಂತು. ತಾಯಿಯ ಅನುಗ್ರಹ ನಮ್ಮೆಲ್ಲರ ಮೇಲೂ ಇರಲಿ' ಎಂದು ಅನಿರುದ್ಧ ಬರೆದುಕೊಂಡಿದ್ದಾರೆ. 

ಜಮ್ಮು ವಿಮಾನ ನಿಲ್ದಾಣದಿಂದ ಹಿಡಿದು ಸಂಪೂರ್ಣ ಜರ್ನಿ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೀರ್ತಿ ಮೇಡಂ ಇರ್ಬೇಕಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

 ಅನಿರುದ್ಧ, ಪುತ್ರಿ ಶ್ಲೋಕ, ಪುತ್ರ ಜೇಷ್ಠವರ್ಧನ್ ಜೊತೆ ಮೂರ್ನಾಲ್ಕು ಮಂದಿ ಸ್ನೇಹಿತರು ಕೂಡ ಹೋಗಿರುವುದನ್ನು ನಾವು ಫೋಟೋದಲ್ಲಿ ನೋಡಬಹುದು.

ಸಮಯ ಸಿಕ್ಕಾಗೆಲ್ಲ ಮಕ್ಕಳೊಂದಿಗೆ ಸಮಯ ಕಳೆಯುವ ಅನಿರುದ್ಧ ಪ್ರವಾಸ ಮಾಡುತ್ತಾರೆ, ಇಲ್ಲವಾದರೆ ಹುಮ್ಮಸಿನಿಂದ ಟ್ರೆಂಡ್ ಆಗುತ್ತಿರುವ ಹಾಡಿಗೆ ಹೆಜ್ಜೆ ಹಾಕುವ ವಿಡಿಯೋ ಹಂಚಿಕೊಳ್ಳುತ್ತಾರೆ.

Latest Videos

click me!