ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಗಟ್ಟಿಮೇಳ' ನಟಿ ಶರಣ್ಯ ಶೆಟ್ಟಿ!

Suvarna News   | Asianet News
Published : Oct 12, 2021, 04:09 PM IST

ನನ್ನ ನಟನೆ ನನ್ನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಾರೆ ಅಂದ್ರೆ Goosebumps ಬರುತ್ತೆ. ಆದಷ್ಟು ಬೇಗ ಬಿಡುಗಡೆ ಆಗಲಿ ಎಂದು ಕಾಯುತ್ತಿರುವೆ.

PREV
16
ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಗಟ್ಟಿಮೇಳ' ನಟಿ ಶರಣ್ಯ ಶೆಟ್ಟಿ!

ಜೀ ಕನ್ನಡ (Zee Kannada) ಗಟ್ಟಿಮೇಳ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಮಿಂಚಿರುವ ನಟಿ ಶರಣ್ಯ ಶೆಟ್ಟಿ (Sharanya Shetty) ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 

26

1980 ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ಜೊತೆ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶರಣ್ಯ ಶೆಟ್ಟಿ ಮಾತಿನ ಮಲ್ಲಿ ತುಂಟ ಹುಡುಗಿ  ಮತ್ತು ಫ್ರೆಂಡ್ಲಿ ಟೀನೇಜರ್ (Teenager) ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

36

ಪ್ಯಾರಲಲ್ ಯುನಿವರ್ಸ್‌ನ (Parllel Universe) ಚಿತ್ರಕತೆ ಹೇಳುತ್ತದೆ. ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಹಿರಿಯ ನಟ ಶಂಕರ್ ಅಶ್ವಥ್ (Shankar Ashwath) ಕೂಡ ಇದ್ದಾರೆ. ಶರಣ್ಯ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

46

ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಕಾಯುತ್ತಿರುವೆ. ಧಾರಾವಾಹಿ ಚಿತ್ರೀಕರಣ ನಡೆದ ಒಂದು ವಾರದಲ್ಲಿ ಟಿವಿಯಲ್ಲಿ ನೋಡುತ್ತೇವೆ ಆದರೆ ಸಿನಿಮಾ ಹಾಗಲ್ಲ. ಚಿತ್ರೀಕರಣ ಮುಗಿಸಿ ಒಂದು ವರ್ಷ ಆಗುತ್ತಿದೆ. ಆದರೂ ಹುಮ್ಮಸ್ಸು ಕಡಿಮೆ ಆಗಿಲ್ಲ.

56

ಸಾಲು ಸಾಲು ಪ್ರಾಜೆಕ್ಟ್‌ಗಳು ಪ್ಲಾನ್ ಮಾಡಲಾಗಿದೆ. ಗಟ್ಟಿಮೇಳ (Gattimela) ನಟ ಅಭಿಷೇಕ್ ದಾಸ್‌ (Abhishek das) ಜೊತೆಗೆ ಒಂದು ಸಿನಿಮಾ ಸಿಹಿ ಮಾಡಿರುವೆ ಸಿನಿಮಾ ಕ್ಷೇತ್ರ ನನ್ನ ವೃತ್ತಿ ಜೀವದಲ್ಲಿ ದೊಡ್ಡ ಬ್ರೇಕ್ ತಂದುಕೊಡಲಿ ಎಂದು ಬಯಸುವೆ. 

66

ನನಗೆ ರಾಧಿಕಾ ಪಂಡಿತ್ (Radhika Pandit)ರಂತೆ ನಟನೆಗೆ ಅವಕಾಶ ಇರುವ ಪಾತ್ರ ಮಾಡಲು ಇಷ್ಟ. ನಾನು ಒಪ್ಪಿಕೊಂಡ ಅಷ್ಟೂ ಸಿನಿಮಾಗಳಲ್ಲೂ ಡಿಫರೆಂಟ್ ಪಾತ್ರಗಳಿವೆ. ನನಗೆ ಹೀರೋಯಿನ್‌ಗಿಂತಲೂ ಆರ್ಟಿಸ್ಟ್‌ ಅನಿಸಿಕೊಳ್ಳಬೇಕು ಎಂದಿದ್ದಾರೆ.

click me!

Recommended Stories