ಚಳಿಯಲಿ ಪಡ್ಡೆಹೈಕ್ಳ ಟೆಂಪ್ರೆಚರ್‌ ಹೆಚ್ಚಿಸಿದ ಮೇಘಾ ಶೆಟ್ಟಿ: ದೇವಲೋಕದ ಅಪ್ಸರೆ ಎಂದ ಫ್ಯಾನ್ಸ್‌!

First Published Jan 9, 2024, 3:00 AM IST

ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಕಮಾಲ್ ಮಾಡಿ ಇದೀಗ ಹಿರಿತೆರೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಮೇಘಾ ಶೆಟ್ಟಿ ಚಂದನವನದಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 

'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಅನು ಸಿರಿಮನೆ ಆಗಿ ಮಿಂಚಿದ ಮೇಘಾ ಶೆಟ್ಟಿ ಧಾರಾವಾಹಿ ಪ್ರೇಮಿಗಳ ಮನೆ ಮಾತಾಗಿದ್ದರು. ನಟನೆಯಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರು ಇಲ್ಲ ಎನ್ನುವ ಹಾಗೆ ಬಹಳ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. 

ನಟನೆಯ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಮೇಘಾ ಶೆಟ್ಟಿ ನೋಡಿದ ಅಭಿಮಾನಿಗಳಿಗೆ ಬಹಳ ಖುಷಿಯ ಸಂಗತಿ ಆಗಿದೆ. ದಿನವೂ ಕಿರುತೆರೆಯಲ್ಲಿ ಮೇಘಾ ಶೆಟ್ಟಿಯನ್ನು ನೋಡುತ್ತಿದ್ದರು. ಆದರೆ ಇದೀಗ ಸಿನಿಮಾದಲ್ಲಿ ಮೇಘಾ ಶೆಟ್ಟಿಯನ್ನು ನೋಡುತ್ತಿರುವುದು ಬಹಳ ಹೆಮ್ಮೆಯ ವಿಚಾರ.

ಮೇಘಾ ಶೆಟ್ಟಿ ಹೊಸ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಇದೀಗ ಬ್ಲೂ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದು ಬಿಟ್ಟಿದ್ದಾರೆ. 

ಬ್ಲೂ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಮೇಘಾ ಶೆಟ್ಟಿ ಫೋಟೋ ನೋಡಿದ ಅಭಿಮಾನಿಗಳು ದೇವಲೋಕದ ಅಪ್ಸರೆ, ಬ್ಯೂಟಿಫುಲ್ ಬಂಗಾರ, ಸೆಕ್ಸಿ, ಹಾಲಿವುಡ್ ಹಿರೋಯಿನ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಫೋಟೋಗಳು ಸಖತ್ ವೈರಲ್ ಆಗಿದ್ದು ನೋಡುಗರಿಗೆ ಮತ್ತಷ್ಟು ಖುಷಿ ನೀಡುತ್ತಿದೆ. ಇತ್ತೀಚಿನ ಕೆಲ ದಿನಗಳಿಂದ ಕಲರ್‌ಫುಲ್‌ ಫೋಟೋಗಳ ಮೂಲಕವೇ ಮೇಘಾ ಶೆಟ್ಟಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.

ಇತ್ತೀಚೆಗೆ ತೆರೆಕಂಡ ಕನ್ನಡದ 'ಕೈವಾ' ಸಿನಿಮಾದಲ್ಲಿ ನಟಿಸಿರುವ ಮೇಘಾ ಶೆಟ್ಟಿ ಈ ಹಿಂದೆ, 'ತ್ರಿಬಲ್ ರೈಡಿಂಗ್', 'ದಿಲ್ ಪಸಂದ್', 'ಲಂಡನ್ ಕೆಫೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಒಂದೆರಡು ಸಿನಿಮಾಗಳು ಅವರ ಕೈಯಲ್ಲಿವೆ ಎನ್ನಲಾಗಿದೆ.

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಸುಮಾರು 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮೇಘಾ ಶೆಟ್ಟಿ ಆಗಾಗ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ.

click me!