ವಿಭಿನ್ನವಾದ ಡ್ರೆಸ್‌ಗೆ ಬಿಳಿ ಮುತ್ತುಗಳನ್ನೂ ಪೋಣಿಸಿಕೊಂಡ ಮೇಘಾ ಶೆಟ್ಟಿ: ನಾಗಿಣಿ ಪಾರ್ಟ್ 3 ಎಂದ ಫ್ಯಾನ್ಸ್‌!

First Published Mar 27, 2024, 11:21 AM IST

ಕೈವ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಇದೀಗ ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ  ಸ್ಟೈಲಿಶ್​ ಫೋಟೋಗಳು ವೈರಲ್​ ಆಗಿದೆ.

ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಮೇಘಾ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಲೇಟೆಸ್ಟ್​ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಬ್ಲಾಕ್ ಡ್ರೆಸ್‌ನಲ್ಲಿ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಕಂಪ್ಲೀಟ್ ಬ್ಲಾಕ್ ಕಲರ್‌ನಲ್ಲಿ ಕವರ್ ಆಗಿರುವ ಡ್ರೆಸ್ ಮೇಲೆ ಬಿಳಿ ಮುತ್ತುಗಳನ್ನು ಹೊಂದಿದೆ.

ವಿಭಿನ್ನ ರೀತಿಯ ಪೋಸ್‌ಗಳನ್ನು ನೀಡಿ ಫೋಟೋ ಶೂಟ್ ಮಾಡಿಸಿರುವ ಮೇಘಾ ಶೆಟ್ಟಿ, ಕಪ್ಪು ಬಣ್ಣದ ಮುತ್ತಿನ ಕಿವಿಯೋಲೆಯನ್ನು ಧರಿಸಿ ಬಟ್ಟೆಗೆ ಕಾಂಟ್ರಾಸ್ಟ್ ಆಗಿ ಮ್ಯಾಚ್ ಮಾಡಿದ್ದಾರೆ.

ಮಿಂಚಿನ ಫೋಟೋಶೂಟ್‌ಗಳಿಗಿಂತ ವಿಭಿನ್ನವಾದ ಫೋಟೋ ಶೂಟ್‌ನಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ . ಸದ್ಯ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್​ಗಳ ಸುರಿಮಳೆಗೈದಿದ್ದಾರೆ. 

ಫೋಟೋಸ್ ನೋಡಿದ ನೆಟ್ಟಿಗರು, ನೀನೊಂದು ಅಂದದ ಅಪ್ಸರೆ. ನಾನಾದೆ ನಿನ್ನ ಕೈ ಸೆರೆ, ನಮ್ಮುಡುಗಿ ಏನ್ ಮಸ್ತ್ ಇದ್ದಾರೆ, ನಾಗಿಣಿ ಪಾರ್ಟ್ 3, ಬ್ಲ್ಯಾಕ್‌ ಬ್ಯೂಟಿ, ನಾಗಿಣಿಯಾಗಿ ಬದಲಾದ ಮೇಘಾ ಎಂದು ಕಮೆಂಟ್ ಮಾಡಿದ್ದು, ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.

ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.

click me!