ಕೊನೆಗೂ ಈಡೇರಿದ ಅದಿತಿ ಪ್ರಭುದೇವ ಪುಟ್ಟ ಆಸೆ; ಪ್ರಗ್ನೆನ್ಸಿ ಕಡೆಯ ತಿಂಗಳ ಫೋಟೋಶೂಟ್

Published : Mar 26, 2024, 05:32 PM IST

ಇದೀಗ ಪ್ರಗ್ನೆನ್ಸಿ ಕಡೆಯ ತಿಂಗಳ ಫೋಟೋಶೂಟ್ ಶೇರ್ ಮಾಡಿರುವ ನಟಿ, 'ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ' ಎಂದು ಕ್ಯಾಪ್ಶನ್ ನೀಡಿದ್ದಾರೆ.

PREV
18
ಕೊನೆಗೂ ಈಡೇರಿದ ಅದಿತಿ ಪ್ರಭುದೇವ ಪುಟ್ಟ ಆಸೆ; ಪ್ರಗ್ನೆನ್ಸಿ ಕಡೆಯ ತಿಂಗಳ ಫೋಟೋಶೂಟ್

ಅಚ್ಛ ಕನ್ನಡದಲ್ಲಿ ಸ್ವಚ್ಛವಾಗಿ ಮಾತಾಡುತ್ತಾ, ತಮ್ಮ ಕನ್ನಡದಿಂದ ಹಾಗೂ ಸೌಂದರ್ಯ, ಪ್ರತಿಭೆಯಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

28

ಇದೀಗ ಪ್ರಗ್ನೆನ್ಸಿ ಕಡೆಯ ತಿಂಗಳ ಫೋಟೋಶೂಟ್ ಶೇರ್ ಮಾಡಿರುವ ನಟಿ, 'ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ' ಎಂದು ಕ್ಯಾಪ್ಶನ್ ನೀಡಿದ್ದಾರೆ.

38

ಫೋಟೋಗಳಲ್ಲಿ ಅದಿತಿ ಹಿಂದೆಂದಿಗಿಂತಲೂ ಗುಂಡುಗುಂಡಾಗಿ ತಾಯ್ತನದ ಕಳೆ ತುಂಬಿಕೊಂಡು ಸುಂದರವಾಗಿ, ಕಳೆಕಳೆಯಾಗಿ ಕಾಣುತ್ತಿದ್ದಾರೆ.

48

ಹಸಿರು ಬಾರ್ಡರ್ ಇರುವ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ, ಹಸಿರು ಗಾಜಿನ ಬಳೆಗಳನ್ನು ಹಾಕಿಕೊಂಡು, ತಲೆಯ ತುರುಬಿಗೆ ಮಲ್ಲಿಗೆ ಹೂಗಳನ್ನು ಸುತ್ತಿ ಸಾಂಪ್ರದಾಯಿಕವಾಗಿ ಸಜ್ಜಾಗಿದ್ದಾರೆ ಅದಿತಿ.

58

ಅತ್ತ ನಟಿಯ ಗಂಡ ಯಶಸ್ ಪಾಟ್ಲಾ ಕೂಡಾ ಬಿಳಿ ರೇಶ್ಮೆ ದೋತಿ ಶರ್ಟ್ ಹಾಗೂ ಕೆಂಪು ಬಣ್ಣದ ಶಲ್ಯ ಧರಿಸಿ ದಪ್ಪ ಸ್ಟೇಟ್‌ಮೆಂಟ್ ಸರ ಧರಿಸಿದ್ದಾರೆ.

68

ಈ ಹಿಂದೆ ಫೆ.20ರಂದು ನಟಿಗೆ 7ನೇ ತಿಂಗಳ ಸೀಮಂತ ಮಾಡಲಾಗಿತ್ತು. ಮತ್ತು ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದ ನಟಿಯ ಆ ಫೋಟೋಗಳು ವೈರಲ್ ಆಗಿದ್ದವು. 

78

ನಟಿ ಅದಿತಿ, ರಚಿತಾ ರಾಂ ಹಾಗೂ ಸತೀಶ್ ನೀನಾಸಂ ನಟಿಸಿರುವ 'ಮ್ಯಾಟ್ನಿ' ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದೇ ಸಂದರ್ಭದಲ್ಲಿ ನಟಿಯ ಮಗುವೂ ಆಗಮನವಾಗಲಿದೆ. ಒಟ್ನಲ್ಲಿ ಏಪ್ರಿಲ್ ಅದಿತಿಗೆ ಡಬಲ್ ಖುಷಿ.

88

ಜನವರಿಯಲ್ಲಿ ನಟಿ ತಾವು 2024ಕ್ಕೆ ಅಮ್ಮನಾಗಲಿದ್ದೇನೆ ಎಂಬ ಸುದ್ದಿಯನ್ನು ಫೋಟೋಶೂಟ್ ಜೊತೆಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories