ಶಾಲಾ ದಿನಗಳಲ್ಲೇ ನನಗೆ ದಿಗಂತ್ ಮೇಲೆ ಕ್ರಷ್ ಆಗಿತ್ತು: ನಟಿ ಸಂಗೀತಾ ಶೃಂಗೇರಿ

Published : Mar 27, 2024, 09:34 AM IST

ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಇಟ್ಟುಕೊಂಡು ನಿರ್ಮಾಪಕ ರಘುವರ್ಧನ್ ಅವರು 'ಮಾರಿಗೋಲ್ಡ್' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

PREV
16
ಶಾಲಾ ದಿನಗಳಲ್ಲೇ ನನಗೆ ದಿಗಂತ್ ಮೇಲೆ ಕ್ರಷ್ ಆಗಿತ್ತು: ನಟಿ ಸಂಗೀತಾ ಶೃಂಗೇರಿ

ನಿರ್ದೇಶಕ ರಘು ಜೊತೆ ಹಿಂದೆಯೇ ಕೆಲಸ ಮಾಡಬೇಕಿತ್ತು. ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ಹೊಗೆ ಧೂಳಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಮ್ಮೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದಾಗ ಯಾಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎನ್ನುವುದು ಗೊತ್ತಾಯಿತು. ನಾನೇನಾ ಆಕ್ಟ್ ಮಾಡಿರುವುದು ಅನ್ನಿಸಿತು. 

26

ನನ್ನ ಬೆನ್ನು ನಾನೇ ತಟ್ಟಿಕೊಂಡು ಖುಷಿ ಪಟ್ಟೆ . ನಿರ್ಮಾಪಕರು ತುಂಬಾ ತಿಳಿದುಕೊಂಡಿದ್ದಾರೆ. ಅವರೇ ನಿರ್ದೇಶಕರಾಗಿದ್ದರೂ ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ. ವೀರಸಮರ್ಥ ಒಳ್ಳೇ ಸಾಂಗ್ ಕೊಟ್ಟಿದ್ದಾರೆ ಎಂದು  ಮಾರಿಗೋಲ್ಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದಿಗಂತ್ ಹೀಗೆ ಹೇಳಿದರು. 

36

ಸಂಗೀತಾ ಶೃಂಗೇರಿ, ಶಾಲಾ ದಿನಗಳಲ್ಲೇ ನನಗೆ ದಿಗಂತ್ ಮೇಲೆ ಕ್ರಷ್ ಆಗಿತ್ತು. ಅವರ ಜೊತೆ ಫೋಟೋ ತೆಗೆಸಿಕೊಂಡರೆ ಸಾಕು ಅನ್ನಿಸಿತ್ತು. ಈಗ ಅವರ ಜೊತೆ ನಟಿಸಿದ್ದ ಖುಷಿ ಆಗಿದೆ. ಅವರ ಜೊತೆ ಲವ್ ಸ್ಟೋರಿ ಚಿತ್ರ ಮಾಡುವ ಆಸೆ ಇತ್ತು ಆದರೆ ಆಕ್ಷನ್ ಸಿನಿಮಾ ಸಿಕ್ಕಿತ್ತು. ದಿಗಂತ್ ಜೊತೆ ನಟಿಸುತ್ತಿರುವುದಕ್ಕೆ ಖುಷಿ ಇದೆ ಎಂದು ಹೇಳಿಕೊಂಡರು.

46

ದಿಗಂತ್‌ ನಾಯಕನಾಗಿ, ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿರುವ ಈ ಚಿತ್ರ ಏ.5ರಂದು ಬಿಡುಗಡೆ ಆಗಲಿದೆ. ಚಿನ್ನದ ಬಿಸ್ಕತ್‌ ಮಾರಲು ಹೊರಟ ನಾಲ್ಕು ಮಂದಿಯ ಕತೆ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ ನಾಯ್ಕ್‌ ನಿರ್ದೇಶಿಸಿದ್ದು, ರಘುವರ್ಧನ್‌ ನಿರ್ಮಿಸಿದ್ದಾರೆ.

56

ಈ ಸಂದರ್ಭದಲ್ಲಿ ರಾಘವೇಂದ್ರ ಎಂ ನಾಯ್ಕ್‌, ‘ಗೋಲ್ಡು, ಹಣ, ಆಸೆ, ಪೊಲೀಸು, ಕ್ರೈಮು ಇತ್ಯಾದಿಗಳ ಸುತ್ತಾ ಸಾಗುವ ಸಿನಿಮಾ ಇದು. ಈ ಚಿತ್ರ ಆಗುವುದಕ್ಕೆ ಮುಖ್ಯ ಕಾರಣ ನಿರ್ಮಾಪಕ ರಘುವರ್ಧನ್‌ ಹಾಗೂ ಸಿನಿಮಾ ಪತ್ರಕರ್ತ ವಿಜಯ್‌ ಭರಮಸಾಗರ. ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ’ ಎಂದರು.

66

ನಿರ್ಮಾಪಕ ರಘುವರ್ಧನ್‌, ಸಂಪತ್‌ ಮೈತ್ರೇಯಾ, ಯಶ್ ಶೆಟ್ಟಿ, ಗಣೇಶ್‌ರಾವ್ ಕೇಸರ್‌ಕರ್, ಮಹಂತೇಶ್ ಹಿರೇಮಠ್, ಸಂಗೀತ ನಿರ್ದೇಶಕ ವೀರ್ ಸಮರ್ಥ್‌, ಸಂಭಾಷಣೆಕಾರ ರಘು ನಿಡುವಳ್ಳಿ, ಸಾಹಿತಿ ಕವಿರಾಜ್‌ , ಛಾಯಾಗ್ರಾಹಕ ಕೆ ಎಸ್ ಚಂದ್ರಶೇಖರ್ ಇದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories