ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಮತ್ತು ಕುಟುಂಬ ಮಂಗಳೂರಿನ ಕೊರಗಜ್ಜ ದೇಗುಲಕ್ಕೆ ಭೇಟಿ ಮಾಡಿದ್ದಾರೆ.
26
ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಮಾಲಾಶ್ರೀ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ದೇಗುಲಕ್ಕೆ ಭೇಟಿ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡೆ' ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.
36
'ಮಂಗಳೂರಿನ ಕೊರಗಜ್ಜ ಕ್ಷೇತ್ರ ತುಂಬ ಪವರ್‌ಫುಲ್ ಇದೆ ಒಳ್ಳೆಯದಾಗತ್ತೆ ಅಂತ ನನ್ನ ಸ್ನೇಹಿತೆ ಹೇಳಿದ್ದರು' ಎಂದು ಮಾಲಾಶ್ರೀ ಹೇಳಿದ್ದಾರೆ.
46
'ಹಾಗಾಗಿ ಮೂರು ತಿಂಗಳ ಹಿಂದೆ ನಾನು ಇಲ್ಲಿಗೆ ಬಂದಿದ್ದೆ. ನಾನು ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿಕೊಂಡು ಹೋಗಿದ್ದೆ ಆ ನಂತರ ನನ್ನ ಬದುಕಿನಲ್ಲಿ ಒಂದಷ್ಟು ಪವಾಡಗಳು ಆಗಿದೆ'
56
'ಹೀಗಾಗಿ ನಾನು ಮತ್ತೆ ಇಲ್ಲಿಗೆ ಬಂದೆ. ಇಲ್ಲಿ ಪಾಸಿಟಿವ್ ಎನರ್ಜಿ ಇದೆ. ನಾನು ಮತ್ತೆ ಮತ್ತೆ ಇಲ್ಲಿಗೆ ಬರುತ್ತಿರುತ್ತೇನೆ' ಎಂದಿದ್ದಾರೆ ಮಾಲಾಶ್ರೀ.
66
ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಮತ್ತು ನಾರಾಯಣ ದೇಗುಲಕ್ಕೆ ಭೇಟಿ ನೀಡಿದ್ದಾರೆ.