ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಪ್ರತಿ ವೀಕೆಂಡ್ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ.
ಮನೆ ಮುಂದೆ ಕ್ಯೂ ನಿಂತುಕೊಳ್ಳುವ ಅಭಿಮಾನಿಗಳ ಜೊತೆ ಸೆಲ್ಫಿ (Selfie) ಕ್ಲಿಕ್ ಮಾಡಿಕೊಂಡು ಕೆಲವು ನಿಮಿಷಗಳ ಕಾಲ ಮಾತನಾಡುತ್ತಾರೆ.
ಹೀಗೆ ಅಭಿಮಾನಿಯೊಬ್ಬ ತಮ್ಮ ಹೊಸ ರಾಯಲ್ ಎನ್ಫೀಲ್ಡ್ (royal enfield) ಬೈಕ್ ಖರೀದಿಸಿ ರಚಿತಾ ರಾಮ್ ಆಟೋಗ್ರಾಫ್ ಪಡೆದಿದ್ದಾರೆ.
ಮನು ಎನ್ನುವ ಅಭಿಮಾನಿ ಸಿಲ್ವರ್ ಬಣ್ಣದ ರಾಯಲ್ ಎನ್ಫೀಲ್ಡ್ ಬೈಕ್ ಟ್ಯಾಂಕ್ ಮೇಲೆ ರಚಿತಾ ಸಹಿ ಹಾಕಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಪ್ರತಿ ವೀಕೆಂಡ್ ಒಬ್ಬರಲ್ಲ ಒಬ್ಬರು ಬೈಕ್, ಅಟೋ ಅಥವಾ ಕಾರು ಖರೀದಿಸಿ ರಚಿತಾ ರಾಮ್ ಫೋಟೋ ಹಾಕಿಸಿ ಸಹಿ ಹಾಕಿಸುತ್ತಿದ್ದರು.
ರಚಿತಾ ರಾಮ್ ರಾಜರಾಜೇಶ್ವರಿ ನಗರದಲ್ಲಿ ನಿವಾಸದ ಬಳಿ ಮಹಿಳಾ ಅಭಿಮಾನಿಗಳು ಕೂಡ ಆಗಮಿಸುತ್ತಾರೆ. ರಚ್ಚು ಡೈಲಾಗ್ ಹೇಳಿ ವಿಡಿಯೋ ಮಾಡಿಕೊಳ್ಳುತ್ತಾರೆ.