ನಗುಮುಖದಿಂದಲೇ ಮನಗೆದ್ದ ಜೀವಗಳು; ವೈರಲ್ ಆಗ್ತಿದೆ ಅಪ್ಪು, ಸ್ಪಂದನ ಫೋಟೋಸ್‌!

First Published | Aug 13, 2023, 5:25 PM IST

ಚಿನ್ನಾರಿ ಮುತ್ತ ವಿಜಯರಾಘವೇಂದ್ರ ಪತ್ನಿ ಸಾವಿನ ಬೆನ್ನಲ್ಲೆ ಸ್ಪಂದನ ಮತ್ತು ಪುನೀತ್ ರಾಜ್ ಕುಮಾರ್ ಫೋಟೋಗಳು ವೈರಲ್ ಆಗುತ್ತಿವೆ. ಸದಾ ನಗುತ್ತಲೇ ಜನಮನಗೆದ್ದ ಜೀವಗಳು ಇನ್ನಿಲ್ಲ ಅನ್ನೋ ಮಾತನ್ನು ನಂಬೋದಿಕ್ಕೂ ಸಾಧ್ಯವಾಗ್ತಿಲ್ಲ. 
 

ಕೆಲದಿನಗಳ ಹಿಂದಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ (heart attack) ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಸ್ಪಂದನಾ ಸಾವಿನಿಂದ ವಿಜಯ್ ರಾಘವೇಂದ್ರ ಮನೆಯಲ್ಲಿ ಸೂತಕದ ಛಾಯೆ ಮನೆಮಾಡಿದೆ. 
 

ವಿಜಯ್ ರಾಘವೇಂದ್ರ ಜೀವಕ್ಕೆ ಜೀವವಾಗಿದ್ದ ಪತ್ನಿ ಸ್ಪಂದನ ಸಾವಿನಿಂದ ನಟ ತೀರ ಕುಸಿದಿದ್ದಾರೆ. ಇವರಿಬ್ಬರ ನಡುವಿನ ಪ್ರೀತಿ, ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿತ್ತು, ಮದುವೆಯಾದ ಮೇಲೆ ಜೋಡಿಗಳು ಹೀಗೆಯೇ ಇರಬೇಕು ಎನ್ನುವಂತೆ ಬಾಳಿ ತೋರಿಸಿದವರು ವಿಜಯ್ ಮತ್ತು ಸ್ಪಂದನ. 
 

Tap to resize

ಸ್ಪಂದನ ಅವರನ್ನು ಹೆಚ್ಚಾಗಿ ವಿಜಯ್ ರಾಘವೇಂದ್ರ ಜೊತೆ ನೋಡಿರಬಹುದು. ಎಲ್ಲಾ ಫೋಟೋಗಳಲ್ಲೂ, ವಿಡಿಯೋಗಳಲ್ಲೂ ಸ್ಪಂದನ ಅವರದ್ದು ಮುಗ್ಧ ಮುಗುಳ್ನಗೆ ಕಾಣಬಹುದು. ಮೃದುಬಾಷಿಯಾದ ಸ್ಪಂದನಾ ಅವರ ಎಂದೂ ಬತ್ತದ, ಎಂದೂ ಬದಲಾಗದ ಆ ಆಕರ್ಷಕ ನಗು ನೋಡಿದ್ರೆ ಪುನೀತ್ ರಾಜ್ ಕುಮಾರ್ (Punith Rajkumar) ನೆನಪಾಗುತ್ತಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಪುನೀತ್ ರಾಜ್ ಕುಮಾರ್ ಮತ್ತು ಸ್ಪಂದನ ಫೋಟೋ ವೈರಲ್ ಆಗುತ್ತಿದೆ. ಕಾರಣ ಇಬ್ಬರದ್ದೂ ಎಂದೂ ಮಾಸದ ಮುಗ್ಧ ನಗು. ನಗುಮುಖದಿಂದಲೇ ಮನಗೆದ್ದ ಎರಡು ಜೀವಗಳು ನಮ್ಮಿಂದ ದೂರವಾಗಿವೆ ಎಂದು ಸೋಶಿಯಲ್ ಮೀಡಿಯಾ ಖಾತೆಯೊಂದು ಇಬ್ಬರ ಫೋಟೋ ಶೇರ್ ಮಾಡಿದೆ. 
 

ಪುನೀತ್ ರಾಜ್ ಕುಮಾರ್ ಅವರನ್ನು ನಗುವಿನ ಸರದಾರ ಎಂದೇ ಹೇಳಬಹುದು. ಯಾಕಂದ್ರೆ ಸಂದರ್ಭ ಯಾವುದೇ ಇರಲಿ ನಗುವಿನಿಂದಲೇ ಎಲ್ಲದಕ್ಕೂ ಉತ್ತರಿಸುವ ನಗುವಿನ ಒಡೆಯ ಅಪ್ಪು. ಇವರ ನಗುವಿನಲ್ಲೆ ಕಪಟತೆಯೇ ಇಲ್ಲ. ಅದು ಮಗುವಿನಂತಹ ನಿಷ್ಕಲ್ಪಷ ನಗು. 
 

ಸ್ಪಂದನ ಅವರದ್ದು ಸಹ ನಿಷ್ಕಲ್ಪಷ ನಗು, ಅವರ ನಗು ಎಂದಿಗೂ ಬದಲಾಗಿಯೇ ಇಲ್ಲ. ಹಾಗಾಗಿ ಸ್ಪಂದನ ಅವರನ್ನು ಸಹ ನಗುಮುಖದ ಒಡತಿ ಎಂದೇ ಹೇಳಬಹುದು. ಈಗ ಈ ನಿಷ್ಕಲ್ಪಷ ನಗುವನ್ನು ಹಂಚಿ ಎಲ್ಲರ ಮನಗೆದ್ದಿದ್ದ ಎರಡು ಜೀವಗಳು ಸಹ  ಜೊತೆಗಿಲ್ಲ. 

ಪುನೀತ್ ರಾಜ್ ಕುಮಾರ್ ಅವರು 2021 ರ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸ್ಪಂದನಾ ವಿಜಯ್ (Spandana Vijay) ಇದೇ ಆಗಸ್ಟ್ 6 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. 
 

Latest Videos

click me!