ಮಗಳು ಚಾರಿತ್ರ್ಯಾ ಹುಟ್ಟುಹಬ್ಬಕ್ಕೆ ಮುದ್ದಾಗಿ ವಿಶ್ ಮಾಡಿ ಗೋಲ್ಡನ್ ಸ್ಟಾರ್ ಗಣೇಶ್

Published : Mar 27, 2024, 10:01 PM IST

ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಚಾರಿತ್ರ್ಯ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ನಟ ಗಣೇಶ್ ಮಗಳಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ.   

PREV
17
ಮಗಳು ಚಾರಿತ್ರ್ಯಾ ಹುಟ್ಟುಹಬ್ಬಕ್ಕೆ ಮುದ್ದಾಗಿ ವಿಶ್ ಮಾಡಿ ಗೋಲ್ಡನ್ ಸ್ಟಾರ್ ಗಣೇಶ್

ಕನ್ನಡ ಚಿತ್ರರಂಗದ ಜನಪ್ರಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರ ಮುದ್ದಿನ ಮಗಳು ಚಾರಿತ್ರ್ಯ ಇಂದು ತಮ್ಮ 15ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮಗಳಿಗೆ ಪ್ರೀತಿಯಿಂದ ಗಣೇಶ್ ವಿಶ್ ಮಾಡಿದ್ದಾರೆ. 
 

27

ಮಗಳು ಚಾರಿತ್ರ್ಯಳ (Charitrya) ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ಗೋಲ್ಡನ್ ಸ್ಟಾರ್ ಹ್ಯಾಪಿ ಬರ್ತ್ ಡೇ ಮಗಳೆ ಎಂದು ಬರೆದುಕೊಂಡು, ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. 
 

37

ಫೋಟೋಗಳೊಂದಿಗೆ ಗಣೇಶ್ ಪ್ರೀತಿಯ ಚೆರ್ರಿ, ಈ ದಿನವು ನಿನ್ನಷ್ಟೇ ಅಮೇಜಿಂಗ್ ಆಗಿರಲಿ. ಲವ್ ಯೂ ಲಾಟ್ಸ್. ಪ್ರತಿ ಕ್ಷಣಗಳನ್ನು ನೀವು ಎಂಜಾಯ್ ಮಾಡು. ಯಾಕಂದ್ರೆ ನಿನಗೆ ಸಿಗಬೇಕಾಗಿರೋದು ಕೇವಲ ಉತ್ತಮವಾದುದು ಮಾತ್ರ. ಪದಗಳಲ್ಲಿ ಹೇಳಲಾರದಷ್ಟು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 
 

47

9ನೇ ತರಗತಿಯಲ್ಲಿ ಓದುತ್ತಿರುವ ಚಾರಿತ್ರ್ಯಗೆ ಈಗ 15 ವರ್ಷ ತುಂಬಿದ್ದು, ಅಮ್ಮನ ಜೊತೆಗೆ ಹೆಚ್ಚಾಗಿ ಮದುವೆ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಉತ್ತಮ ಡ್ಯಾನ್ಸರ್ ಆಗಿರುವ ಜೊತೆಗೆ ಸಖತ್ತಾಗಿ ರೀಲ್ಸ್ ಮಾಡುವ ಚಾರಿತ್ರ್ಯನ್ನ ನೋಡಿದ್ರೆ ಇವರು ಅಪ್ಪನಂತೆ ನಟನೆಯತ್ತ ಒಲವು ತೋರಿದ್ದಾರೆ ಎಂದೆನಿಸುತ್ತೆ. 
 

57

ಈಗಾಗಲೇ ಒಂದು ಸಿನಿಮಾದಲ್ಲಿ ಚಾರಿತ್ರ್ಯ ತಮ್ಮ ತಂದೆಯ ಜೊತೆ ನಟಿಸಿದ್ದರು ಕೂಡ. ಚಾರಿತ್ರ್ಯ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ (Chamak) ಚಿತ್ರದಲ್ಲಿ ಗಣೇಶ್ ಮಗಳಾಗಿ ಕ್ಲೈಮ್ಯಾಕ್ಸ್ ದೃಶ್ಯ ಒಂದರಲ್ಲಿ ಕಾಣಿಸಿಕೊಂಡಿದ್ದರು. ಮುಂದೆಯೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಚಾನ್ಸ್ ಇದೆ. 
 

67

ಇನ್ನು ಮಗಳ ಹುಟ್ಟು ಹಬ್ಬಕ್ಕೆ ಶಿಲ್ಪಾ ಗಣೇಶ್ (Shilpa Ganesh) ಕೂಡ ಸೋಶಿಯಲ್ ಮೀಡೀಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದು,  ಹ್ಯಾಪಿ ಬರ್ತ್ ಡೇ ಲಿಟಲ್ ಗರ್ಲ್ ಎಂದು ಬರೆದುಕೊಂಡಿದ್ದಾರೆ. ಚಿತ್ರರಂಗದ ಗಣ್ಯರು ಕೂಡ ಗೋಲ್ಡನ್ ಪುತ್ರಿಗೆ ವಿಶ್ ಮಾಡಿದ್ದಾರೆ. 
 

77

ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಹೇಳೊದಾದ್ರೆ ಗಣೇಶ್ ಸದ್ಯ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇವರು ಕೊನೆಯದಾಗಿ ಬಾನದಾರಿಯಲ್ಲಿ ಸಿನಿಮಾದಲ್ಲಿ ರುಕ್ಮಿಣಿ ವಸಂತ್, ರೀಷ್ಮಾ ಜೊತೆ ನಟಿಸಿದ್ದರು. 
 

Read more Photos on
click me!

Recommended Stories