ವಯಸ್ಸು 40 ಕಳೆದರೂ ಒಮ್ಮೆಯೂ ಮದುವೆಯಾಗದ ಕನ್ನಡ ನಟಿಯರಿವರು! ಇಂಥ ಗಟ್ಟಿ ನಿರ್ಧಾರವೇಕೆ?

ಕೆಲ ನಟಿಯರು ಮದುವೆಯಾಗಿ, ಡಿವೋರ್ಸ್‌ ಪಡೆದಿದ್ದಾರೆ. ಇನ್ನೊಂದು ಕಡೆ ವಯಸ್ಸು 40 ಆದರೂ ಕೆಲ ನಟಿಯರು ಮದುವೆಯಾಗಿಲ್ಲ. ಇದಕ್ಕೆ ಏನು ಕಾರಣ ಇರಬಹುದು? 

kannada actress list who are not married yet after age 40

ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದ ಆರ್‌ ಟಿ ರಮಾ ಅವರು ʼನ್ಯಾಶನಲ್‌ ಸ್ಕೂಲ್‌ ಆಫ್‌ ಡ್ರಾಮಾʼದಲ್ಲಿ ನಾಸಿರುದ್ದೀನ್‌ ಅವರ ಬ್ಯಾಚ್‌ಮೇಟ್‌ ಆಗಿದ್ದರು. ರಮಾ ಅವರು ಒಮ್ಮೆಯೂ ಮದುವೆಯಾಗಿಲ್ಲ, ಈಗ ಅವರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ರಮಾ ಅವರು ಕನ್ನಡದ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು  'ಗೆಜ್ಜೆ ಪೂಜೆ','ಶರಪಂಜರ',  'ಗೌರಿ', 'ಜೇಡರ ಬಲೆ', 'ನನ್ನ ಕರ್ತವ್ಯ', 'ಮಹಾಸತಿ ಅನುಸೂಯ', 'ಮಿಸ್ ಲೀಲಾವತಿ', 'ನಾ ಮೆಚ್ಚಿದ ಹುಡುಗ',  'ಸತಿ ಸುಕನ್ಯಾ',  'ಮನ ಮೆಚ್ಚಿದ ಮಡದಿ', 'ಬಾಳು ಬೆಳಗಿತು','ಪುನರ್ಜನ್ಮ', 'ಕಪ್ಪು ಬಿಳುಪು', 'ಅನುಗ್ರಹ', 'ಮುಗಿಯದ ಕಥೆ', 'ಹೇಮರೆಡ್ಡಿ ಮಲ್ಲಮ್ಮ', ಭಲೇ ಅದೃಷ್ಟವೋ ಅದೃಷ್ಟʼ, 'ಸೋತು ಗೆದ್ದವಳು' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
 

kannada actress list who are not married yet after age 40

ಕನ್ನಡ, ತಮಿಳು, ತೆಲುಗು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿರುವ ʼನಾಗಮಂಡಲʼ ವಿಜಯಲಕ್ಷ್ಮೀ ಅವರು ಸೃಜನ್‌ ಲೋಕೇಶ್‌ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈ ನಿಶ್ಚಿತಾರ್ಥ ಮುರಿದು ಬಿದ್ದಿತು. ಆ ನಂತರ ಸಾಕಷ್ಟು ಕಾಂಟ್ರವರ್ಸಿಗಳಲ್ಲಿ ಸದ್ದು ಮಾಡಿದ ಈ ನಟಿ ಮದುವೆ ಆಗಲಿಲ್ಲ. 
 


ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಸಿನಿಮಾ, ರಾಜಕೀಯ ಎಂದು ಬ್ಯುಸಿಯಿದ್ದಾರೆ. ವಿಷ್ಣುವರ್ಧನ್‌, ಶ್ರೀನಗರ ಕಿಟ್ಟಿ ಎಂದು ಟಾಪ್‌ ನಟರ ಜೊತೆ ಇವರು ನಟಿಸಿದ್ದಾರೆ. ಭಾವನಾ ಅವರ ವಯಸ್ಸು 45 ಆದರೂ ಅವರಿನ್ನೂ ಮದುವೆ ಆಗಿಲ್ಲ. 

ಲೋಕೇಶ್‌ ಪುತ್ರಿ ಪೂಜಾ ಅವರು ಸದ್ಯ ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟಿಸಿರುವ ಅವರು ಫ್ಯಾಷನ್‌ ಡಿಸೈನರ್‌ ಕೂಡ ಹೌದು. ಪೂಜಾ ಅವರು ಒಮ್ಮೆಯೂ ಮದುವೆಯಾಗಿಲ್ಲ. 

ನಟಿ ರಮ್ಯಾ ಅವರು ವಯಸ್ಸು 41 ಆದರೂ ಮದುವೆ ಆಗಿಲ್ಲ. ರಾಹುಲ್‌ ಗಾಂಧಿ ಸೇರಿದಂತೆ ಕೆಲವರ ಜೊತೆ ರಮ್ಯಾ ಹೆಸರು ಕೇಳಿಬಂದಿತ್ತು. ಆದರೂ ಇನ್ನೂ ಅವರು ಸಿಂಗಲ್‌ ಆಗಿಯೇ ಉಳಿದುಕೊಂಡಿದ್ದಾರೆ. ಅಂದಹಾಗೆ ರಮ್ಯಾ ದಿನದಿಂದ ದಿನಕ್ಕೆ ತುಂಬ ಸುಂದರವಾಗಿ ಕಾಣ್ತಿರೋದಂತೂ ಸತ್ಯ. 

ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಿತಾರಾ ನಟಿಸಿದ್ದಾರೆ. ಡಾ ವಿಷ್ಣುವರ್ಧನ್‌, ಶಶಿ ಕುಮಾರ್‌, ಅನಂತ್‌ ನಾಗ್‌ ಅವರ ಜೊತೆ ಸಿತಾರಾ ನಟಿಸಿದ್ದಾರೆ. 52 ವರ್ಷದ ನಟಿ ಸಿತಾರಾಗೆ ಇನ್ನೂ ಮದುವೆಯಾಗಿಲ್ಲ. ಹೆತ್ತವರಿಂದ ದೂರ ಆಗಬೇಕು ಎಂದು ನಾನು ಮದುವೆ ಆಗಿಲ್ಲ ಎಂದು ಸೀತಾರಾ ಹೇಳಿದ್ದರು. ಆದರೆ ನಿರ್ಮಾಪಕ ಮುರಳಿಯನ್ನು ಪ್ರೀತಿಸಿದ್ದರು ಎಂಬ ವದಂತಿ ಇತ್ತು. ಆದರೆ ಮುರಳಿ 2010ರಲ್ಲಿ ಹೃದಯಾಘಾತದಿಂದ ನಿಧನರಾದರು. ಹೀಗಾಗಿ ಸಿತಾರಾ ಕೆಲ ವರ್ಷ ಡಿಪ್ರೆಶನ್‌ನಲ್ಲಿದ್ದರು ಎನ್ನಲಾಗಿದೆ. 
 

ʼಚೆಲ್ಲಾಟʼ, ʼಹುಡುಗಾಟʼ, ʼಹುಚ್ಚʼ ಸಿನಿಮಾಗಳಲ್ಲಿ ನಟಿಸಿರುವ ರೇಖಾ ವೇದವ್ಯಾಸ ಅವರು ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ರೇಖಾ ವೇದವ್ಯಾಸ ಅವರು ಕೆಲ ವರ್ಷಗಳ ಕಾಲ ಚಿತ್ರರಂಗದಿಂದ, ಸೋಶಿಯಲ್‌ ಮೀಡಿಯಾದಿಂದ ದೂರ ಇದ್ದರು. ಆ ನಂತರ ಮತ್ತೆ ಅವರು ಫೋಟೋಶೂಟ್‌ ಮಾಡಿಸಿ, ಸಿನಿಮಾಗಳತ್ತ ಮುಖ ಮಾಡುವ ಮನಸ್ಸು ಮಾಡಿದರು. ಅದಾದ ನಂತರ ಅನಾರೋಗ್ಯ ಉಂಟಾಗಿ ತುಂಬ ಸಣ್ಣಗಾದರು. ಈಗ ಮತ್ತೆ ರೇಖಾ ಪತ್ತೆ ಇಲ್ಲ. ರೇಖಾ ಅವರು ಸಿಂಗಲ್‌ ಆಗಿಯೇ ಉಳಿದಿದ್ದಾರೆ. 

Latest Videos

click me!