ತಂದೆಯನ್ನು ಕಳೆದುಕೊಂಡ ವಿಭ; ನಟಿ Kavitha Gowda ಮಾತುಗಳಿದು!

Suvarna News   | Asianet News
Published : Jan 30, 2022, 05:06 PM IST

ಮದುವೆ ನಂತರ ಹೊಸ ಸಿನಿಮಾ ಒಪ್ಪಿಕೊಂಡ ನಟಿ ಕವಿತಾ ಗೌಡ. ಹೊಸ ತಂಡವಾದರೇನು ಕಥೆ ಮತ್ತು ಪಾತ್ರ ಮುಖ್ಯ ಎಂದಿದ್ದಾರೆ. 

PREV
18
ತಂದೆಯನ್ನು ಕಳೆದುಕೊಂಡ ವಿಭ; ನಟಿ Kavitha Gowda ಮಾತುಗಳಿದು!

ಟೈಟಲ್ ನೋಡಿ confuse ಆಗಬೇಡಿ. ಏನಿದು ಕವಿತಾ ಗೌಡ ವಿಭ ಪಾತ್ರ ಅಂತ. ಇದು ಕವಿತಾ ಒಪ್ಪಿಕೊಂಡಿರುವ ಹೊಸ ಸಿನಿಮಾದ ಸಣ್ಣ ಕಥೆ. 

28

ಹೌದು! ಜನಪ್ರಿಯ ಕಿರುತೆರೆ ನಟಿ ಕವಿತಾ ಗೌಡ (Kavitha Gowda) ಇದೀಗ ಹೊಸ ತಂಡದ ಜೊತೆ ಕೈ ಜೋಡಿಸಿ ದ್ವಿಮುಖ ಚಿತ್ರಕ್ಕೆ ಸಹಿ ಮಾಡಿದ್ದಾರೆ. 

38

ದ್ವಿಮುಖ ಚಿತ್ರವನ್ನು ಮಧು ನಿರ್ದೇಶನ ಮಾಡುತ್ತಿದ್ದು ಕವಿತಾ ಜೊತೆ ಪ್ರವೀಣ್ ನಟಿಸಲಿದ್ದಾರೆ.  ಇವರ ಜೊತೆ ವಿಜಯ್ ಚಂದ್ರ, ರಂಗಾಯಣ ರಘು ಮತ್ತು ನಯನಾ ಅಭಿನಯಿಸುತ್ತಿದ್ದಾರೆ.

48

'ತಂದೆ ತಾಯಿಯನ್ನು ಕಳೆದುಕೊಂಡು ಸಣ್ಣ ಹಳ್ಳಿಯಲ್ಲಿರುವ ಹುಡುಗಿ ವಿಭ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾಳೆ, ಇಬ್ಬರು ಸ್ನೇಹಿತರ ಜೊತೆ ಸಮಯ ಕಳೆಯುತ್ತಾಳೆ'

58

'ವಿಭ ಕಳೆದು ಹೋದಾಗ ಆಕೆಯ ತಂದೆ ತಾಯಿಯ ಸಾವಿಗೆ ಕಾರಣ ಏನೆಂದು ತಿಳಿದು ಬರುತ್ತದೆ. ಈ ಹುಡುಕಾಟವೇ ದೊಡ್ಡ ಟ್ವಿಸ್ಟ್‌' ಎಂದು ಕವಿತಾ ಟೈಮ್‌ ಸಂದರ್ಶನದಲ್ಲಿ ಹೇಳಿದ್ದಾರೆ.

68

 'ಕಳೆದ ವರ್ಷ ಎರಡು ಸಿನಿಮಾ ಬಿಡುಗಡೆ ಆಗಿದೆ. ನನ್ನ ಕಂಫರ್ಟ್‌ ಜೋನ್‌ನಿಂದ ಹೊರ ಬಂದು ಬೇರೆ ಪಾತ್ರ ಮಾಡಬೇಕು. ಹೊಸ ತಂಡದ ಜೊತೆ ಕೆಲಸ ಮಾಡುವುದಕ್ಕೆ ನನಗೆ ಯಾವುದೇ ಚಿಂತೆ ಇಲ್ಲ ಪಾತ್ರ ಅದ್ಭುತವಾಗಿರಬೇಕು' ಎಂದಿದ್ದಾರೆ. 

78

'ಗೋವಾದಲ್ಲಿ ಹೊಸ ವರ್ಷ ಆಚರಿಸಿದೆವು. ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ಚಂದನ್ ನಟಿಸುತ್ತಿದ್ದಾರೆ ಹೀಗಾಗಿ ಬೆಂಗಳೂರು ಮತ್ತು ಹೈದರಾಬಾದ್ ಪ್ರಯಾಣ ಮಾಡುತ್ತಿದ್ದಾರೆ'

88

'ನಾನು ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಕಾರಣ ನಮ್ಮ ಶೆಡ್ಯೂಲ್ hectic ಆಗಿದೆ. ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದೆವು. ಮನೆ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿ ಗೃಹ ಪ್ರವೇಶ ಮಾಡಬೇಕು' ಎಂದು ಕವಿತಾ ಹೇಳಿದ್ದಾರೆ.

Read more Photos on
click me!

Recommended Stories