ಕಿಚ್ಚ ಸುದೀಪ್ 'Vikrant Rona' ಫೆ.24ಕ್ಕೆ ಬಿಡುಗಡೆ ಆಗಲ್ಲ!

Suvarna News   | Asianet News
Published : Jan 28, 2022, 10:29 AM IST

ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದವರಿಗೆ ನಿರಾಸೆ ಮೂಡಿಸಿದೆ. ಸಿನಿಮಾ ನೋಡಲು ಮತ್ತಷ್ಟು ದಿನ ಕಾಯಬೇಕಾಗಿದೆ ಎಂಬುದು ಸದ್ಯ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರೇ ಕೊಟ್ಟಿರುವ ಮಾಹಿತಿ.

PREV
15
ಕಿಚ್ಚ ಸುದೀಪ್ 'Vikrant Rona' ಫೆ.24ಕ್ಕೆ ಬಿಡುಗಡೆ ಆಗಲ್ಲ!

ಅನೂಪ್ ಭಂಡಾರಿ ನಿರ್ದೇಶಿಸಿ, ಸುದೀಪ್ ನಾಯಕನಾಗಿ ನಟಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾ ಫೆ.24ರಂದು ಎಲ್ಲಾ ಭಾಷೆಗಳಲ್ಲೂ ತೆರೆಗೆ ಬರಬೇಕಿತ್ತು. 

25

ಆದರೆ, ಕೊರೋನಾ ಸಂಕಷ್ಟ ಮುಗಿದಿಲ್ಲ, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಯಾವಾಗ ಸಿಗುತ್ತದೆ ಎನ್ನುವ ಖಚಿತತೆ ಇಲ್ಲ. ಇಂಥ ಹೊತ್ತಿನಲ್ಲಿ ಬಹು ಕೋಟಿ ವೆಚ್ಚದ ಚಿತ್ರವನ್ನು ಬಿಡುಗಡೆ ಮಾಡುವುದಾದರೂ ಹೇಗೆ ಎನ್ನುವ ಯೋಚನೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

35

 ಈ ಕುರಿತು ಮಾಹಿತಿ ನೀಡಿರುವ ಜಾಕ್ ಮಂಜು ಅವರು, ‘ನಮ್ಮ ಕನಸಿನ ಚಿತ್ರವನ್ನು ಫೆ.24ರಂದು ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದ್ದು ನಿಜ. ಆದರೆ, ಸದ್ಯ ಕೋವಿಡ್ ಪರಿಸ್ಥಿತಿ ಹಾಗೂ ಅದರ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ನಿಯಮಗಳ ಕಾರಣಕ್ಕೆ ನಮ್ಮ ಚಿತ್ರವನ್ನು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಿಲ್ಲ.'

45

'ಒಂದು ದೊಡ್ಡ ಚಿತ್ರವನ್ನು ಬಿಡುಗಡೆ ಮಾಡುವ ಸಮಯ ಕೂಡ ಇದಲ್ಲ. ಹೀಗಾಗಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದೇವೆ. ಹೊಸ ದಿನಾಂಕವನ್ನು ಸದ್ಯದಲ್ಲೇ ಘೋಷಿಸುತ್ತೇವೆ. ಭಾರತದ ಮೊದಲ ಅಡ್ವೆಂಚರ್ ಚಿತ್ರದ ಹೀರೋನನ್ನು ತೆರೆ ಮೇಲೆ ನೋಡಲು ಕಾಯುತ್ತಿರುವ ನಿಮ್ಮ ತಾಳ್ಮೆಗೆ ನಾವು ಋಣಿ’ ಎಂದಿದ್ದಾರೆ.

55

3ಡಿ ತಂತ್ರಜ್ಞಾನದಲ್ಲಿ 10 ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸಿರುವ ಚಿತ್ರವಿದು

Read more Photos on
click me!

Recommended Stories