ಮೈಸೂರ್ ಸಿಲ್ಕ್‌ ಸೀರೆ ಧರಿಸಿ ಸೊಂಟ ಬಳುಕಿಸಿದ ನಟಿ; ಕಾರೂ ನೀನೇ ಸೂಪರ್ ಎಂದ ನೆಟ್ಟಿಗರು!

First Published | Jul 25, 2024, 11:52 AM IST

ಮೈಸೂರ್ ಸಿಲ್ಕ್‌ ಸೀರೆಯಲ್ಲಿ ಮಿಂಚಿದ ಕಾರುಣ್ಯಾ ರಾಮ್. ಹೆಣ್ಣು ಮಕ್ಕಳಿಗೆ ಸೀರೆ ಬೆಲೆ ಮೇಲೆ ಕಣ್ಣು...

ಕನ್ನಡ ಚಿತ್ರರಂಗದ ಮುದ್ದು ಗೊಂಬೆ ಕಾರುಣ್ಯ ರಾಮ್ ಇತ್ತೀಚಿಗೆ ಸ್ಯಾರಿ ಕ್ರೇಜ್‌ ಹಿಂದಿದ್ದಾರೆ. ಟ್ರೆಂಡ್‌ನಲ್ಲಿರುವ ಡಿಸೈನರ್‌ ಸೀರೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

 2009ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಸುಂದರಿ, ಇನ್‌ಸ್ಟಾಗ್ರಾಂನಲ್ಲಿ ಸುಮಾರು 3.1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಇದಕ್ಕೆ 860 ಪೋಸ್ಟ್‌ ಹಾಕಿದ್ದಾರೆ.

Tap to resize

ಹಿಂದಿ ಚಿತ್ರರಂಗದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ ಹೀರಾಮಂಡಿ ಹಾಡಿಗೆ ಮೈಸೂರ್ ಸಿಲ್ಕ್‌ ಸೀರೆ ಧರಿಸಿ ಬ್ಯಾಕ್‌ ಪೋಸ್‌ನಲ್ಲಿ ವಾಕಿಂಗ್ ಮಾಡಿದ್ದಾರೆ.

ಕೇಸರಿ ಮತ್ತು ಹಸರು ಕಾಂಬಿನೇಷನ್‌ ಸೀರೆಯನ್ನು ಕಾರುಣ್ಯ ರಾಮ್ ಧರಿಸಿದ್ದು...ಉದ್ದ ಜಡೆ ಅದಕ್ಕೊಂದು ಬಿಲ್ಲೆ....ಲುಕ್ ನೀಡಲು ಗುಲಾಬಿ ಹೂವನ್ನು ಮುಡಿದಿದ್ದಾರೆ.

'ಈ ಟ್ರೆಂಡ್‌ಗೆ ನಾನು ಲೇಟಾಗಿ ಎಂಟ್ರಿ ಕೊಟ್ಟಿರಬಹುದು ಆದರೆ ಏನೋ ಡಿಫರೆಂಟ್ ಆಗಿ ಪ್ರಯತ್ನ ಪಟ್ಟಿದ್ದೀನಿ' ಎಂದು ಕಾರುಣ್ಯಾ ರಾಮ್ ಬರೆದುಕೊಂಡಿದ್ದಾರೆ. 

ಇನ್ನು ಈ ವಿಡಿಯೋಗೆ ಕಾರುಣ್ಯಾ ರಾಮ್  ಮಿಲ್ಕ್‌ ಬ್ಯೂಟಿ ಕಾರುಣ್ಯಾ, ಹೀರೋಯಿನ್, ಟ್ರೆಂಡ್, ಸೀರೆ, ಹೀರಾಮಂಡಿ ಎಂದು ಹ್ಯಾಷ್‌ಟ್ಯಾಗ್‌ಗಳನ್ನು ನಟಿ ನೀಡಿದ್ದಾರೆ. 

Latest Videos

click me!