ಶ್ವೇತಾ ಶ್ರೀವಾತ್ಸವ್ ಮಗಳಿಗೆ ಪ್ರಪೋಸ್ ಮಾಡಿದ ಕ್ಲಾಸ್ ಮೇಟ್, ಸಿಂಪಲ್ಲಾಗೊಂದು ಲವ್ ಸ್ಟೋರಿ ಶುರುವಾಯ್ತೆಂದ ಪತಿ!

Published : Jul 20, 2024, 01:52 PM IST

ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಆರು ವರ್ಷದ ಮಗಳ ಲವ್ ಪ್ರಪೋಸಲ್ ಸ್ಟೋರಿಯೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂದಿದ್ದು, ವಿಡಿಯೋ ಸಖತ್ ಕ್ಯೂಟ್ ಆಗಿದೆ.   

PREV
17
ಶ್ವೇತಾ ಶ್ರೀವಾತ್ಸವ್ ಮಗಳಿಗೆ ಪ್ರಪೋಸ್ ಮಾಡಿದ ಕ್ಲಾಸ್ ಮೇಟ್, ಸಿಂಪಲ್ಲಾಗೊಂದು ಲವ್ ಸ್ಟೋರಿ ಶುರುವಾಯ್ತೆಂದ ಪತಿ!

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivastav) ತಮ್ಮ ಮಗಳ ಒಂದು ಮುದ್ದಾದ ಕಥೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಮುದ್ದು ಮಗಳು ಹೇಳುತ್ತಿರುವ ಲವ್ ಪ್ರಪೋಸ್ ಸ್ಟೋರಿ ಇದಾಗಿದ್ದು, ಮಗಳು ಹೇಳುತ್ತಿರೋದನ್ನ ಕೇಳಿ ನಟಿ ಥ್ರಿಲ್ ಆಗಿದ್ದಾರೆ. 

27

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಶ್ವೇತಾ ಶ್ರೀವಾತ್ಸವ್, ಹೆಚ್ಚಾಗಿ ತಮ್ಮ ವರ್ಕೌಟ್, ಜಿಮ್, ಡ್ಯಾನ್ಸ್ ರೀಲ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ತಮ್ಮ ಮಗಳ ಜೊತೆಗಿನ ಮುದ್ದಾದ ಫೋಟೋಗಳು, ಆಕೆಯ ಮಾತು, ಆಟಗಳನ್ನ ರೆಕಾರ್ಡ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. 

37

ಈ ಬಾರಿ ಮಗಳು ಅಶ್ಮಿತಾ ಶ್ರೀವಾತ್ಸವ್ (Ashmitha Srivastav) ಹೇಳಿದಂತಹ ಪ್ರಪೋಸಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಗು ತನ್ನ ಮುದ್ದಾದ ಮಾತುಗಳಲ್ಲಿ ಸಿದ್ಧಾಂತ್ ಇವತ್ತು ನಂಗೆ ಐ ಲವ್ ಯೂ ಅಂದ. ಆಮೇಲೆ ಅವನಿಗೆ ನಾಚಿಗೆಯಾಯ್ತು. ಅವನಿಗೆ ನನ್ನ ಡ್ರೆಸ್ ಇಷ್ಟ ಅಂತೆ ಎಂದು ನಾಚಿಕೊಂಡಿದ್ದಾಳೆ, ಅದಕ್ಕೆ ಶ್ವೇತಾ ಗಂಡ ಅಮಿತ್ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಶುರುವಾಗಿದೆ ಅಂದಿದ್ದಾರೆ. 
 

47

ಇನ್ನು ಶ್ವೇತಾ ನೀನು ಯಾಕೆ ನಾಚಿಕೊಳ್ತಾ ಇದ್ಯಾ ನೀನು ಅವನನ್ನ ಲವ್ ಮಾಡ್ತಿದ್ಯಾ ಎಂದಿದ್ದಕ್ಕೆ ಅಶ್ಮಿತಾ, ಇಲ್ಲ, ನಾನು ಇನ್ನೂ ಮಗು ಎಂದಿದ್ದಾರೆ. ಈ ಮುದ್ದಾದ ಸಂಭಾಷಣೆಯ ವಿಡೀಯೋ ಹಂಚಿಕೊಂಡಿರುವ ಶ್ವೇತಾ ಇವತ್ತು ನನ್ನ ಮಗಳು ಆಕೆಗೆ ಅವಳ ಕ್ಲಾಸ್ ಮೇಟ್ ಲವ್ ಪ್ರಪೋಸ್ ಮಾಡಿದ ವಿಷ್ಯವನ್ನ ತುಂಬಾನೆ ಎಕ್ಸೈಟ್ ಮೆಂಟ್ ನಿಂದ ಹೇಳಿದ್ದಾಳೆ ಎಂದು ಬರೆದುಕೊಂಡಿದ್ದಾರೆ. 

57

ಅಷ್ಟೇ ಅಲ್ಲ ಆಕೆ ನನ್ನೊಂದಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿರೋದೆ ನನಗೆ ಥ್ರಿಲ್ ನೀಡುತ್ತಿದೆ. ನನ್ನ ಮಗಳು ಸ್ಟಾಪ್ ಅಂತ ಹೇಳೋಮೊದ್ಲು ನಾನಿದನ್ನ ಮುಗಿಸ್ತೀನಿ ಎಂದು ಹೇಳಿ ಕೊಂಡಿದ್ದಾರೆ. ಈ ಮುದ್ದಾದ ಸಂಭಾಷಣೆಯನ್ನು ಹೆಚ್ಚಿನ ಜನ ಮೆಚ್ಚಿಕೊಂಡಿದ್ದಾರೆ. 

67

ತೊದಲು ನುಡಿಯಲ್ಲಿ ಕಥೆಯನ್ನು ಹೇಳಿದ ಅಶ್ಮಿತಾ ಮುಗ್ಧತೆ ನಾಚಿಕೆಯನ್ನು ಜನರು ಕೊಂಡಾಡಿದ್ದಾರೆ. ಇನ್ನೂ ಕೆಲವು ಜನರು ಈಗಿನ ಮಕ್ಕಳು ಎಷ್ಟೊಂದು ಫಾಸ್ಟ್ ಆಗಿ ಬೆಳಿತಿದ್ದಾರಲ್ಲ ಅಂದ್ರೆ, ಮತ್ತೆ ಕೆಲವರು ನೀವು ಒಳ್ಳೆಯ ತಾಯಿ, ಸಿಚುವೇಶನ್ ನ ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದ್ದೀರಿ ಎಂದಿದ್ದಾರೆ. 

77

ಮಗಳ ಜೊತೆಗಿನ ಹೆಚ್ಚಿನ ರೀಲ್ಸ್ ಶ್ವೇತಾ ಕನ್ನಡದಲ್ಲಿ ಮಾತನಾಡಿದ್ರೂ ಮಗಳು ಇಂಗ್ಲೀಷ್ ನಲ್ಲೇ ಉತ್ತರ ಕೊಡೋದನ್ನು ಕೆಲವರು ಪ್ರಶ್ನಿಸಿದ್ದು, ಮಗಳಿಗೆ ಕನ್ನಡ ಕಲಿಸಿ, ಅವಳು ಕನ್ನಡ ಮಾತನಾಡುವಂತೆ ಮಾಡಿ, ಇಂಗ್ಲೀಷ್ ಬೇಡ ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories