ಹರ್ಷಿಕಾ ಮನೆಯಲ್ಲಿ ಹಬ್ಬದ ಸಂಭ್ರಮ; ವರಮಹಾಲಕ್ಷ್ಮಿ ಮುಂದೆ ಮಂಡಿಯೂರಿದ್ದೀರಿ ಲಕ್ಷ್ಮಿನೇ ಬರೋದು ಎಂದ ನೆಟ್ಟಿಗರು!

First Published | Aug 19, 2024, 10:21 AM IST

ವರಮಹಾಲಕ್ಷ್ಮಿ ಪೂಜೆ ಮಾಡಿದ ಹರ್ಷಿಕಾ ಪೂಣಚ್ಚ. ಗರ್ಭಿಣಿ ನಟಿಯನ್ನು ನೋಡಿ ಲಕ್ಷ್ಮಿನೇ ಬರೋದು ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಮುದ್ದು ಮುಖದ ಸುಂದರಿ ಹರ್ಷಿಕಾ ಪೂಣಚ್ಚ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಗಾಗ ಬೇಬಿ ಬಂಪ್‌ ಜೊತೆ ಪೋಸ್ ಕೊಡುತ್ತಿದ್ದಾರೆ.

ಈ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಹರ್ಷಿಕಾ ಪೂಣಚ್ಚ ಆಚರಿಸಿದ್ದಾರೆ.  ವರಮಹಾಲಕ್ಷ್ಮಿ ಪೂಜೆ ನಂತರ ಬೇಬಿ ಬಂಪ್‌ಗೆ ಪೋಸ್ ಕೊಟ್ಟಿದ್ದಾರೆ.

Tap to resize

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಹಬ್ಬಕ್ಕೆ ನನ್ನನ್ನು ಕರೆದ ಪ್ರೀತಿ ಅಕ್ಕಗೆ ಧನ್ಯವಾದಗಳು ನಿಮ್ಮ ಮನೆಯಲ್ಲಿ ಲಕ್ಷ್ಮಿಯನ್ನು ಸುಂದರವಾಗಿ ಅಲಂಕಾರ ಮಾಡಿದ್ದೀರಾ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.

ಹಬ್ಬವನ್ನು ಅದ್ಭುತವಾಗಿ ನಾನು ಆಚರಿಸಿದ್ದೀನಿ. ವರಮಹಾಲಕ್ಷ್ಮಿ ನಿಮಗೆ ಖುಷಿ ಪ್ರೀತಿ ಮತ್ತು ಆಯಸ್ಸು ಕೊಡಲಿ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

ವರಮಹಾಲಕ್ಷ್ಮಿ ಮುಂದೆ ನೀವು ಮಂಡಿಯೂರಿ ಕೂತಿದ್ದೀರಿ ಲಕ್ಷ್ಮಿ ನಿಮಗೆ ಒಳ್ಳೆಯದನ್ನು ಮಾಡುತ್ತಾಳೆ ನಿಮ್ಮ ಮನೆಗೆ ಲಕ್ಷ್ಮಿನೇ ಬರೋದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹರ್ಷಿಕಾ ಪೂಣಚ್ಚ ಗುಡ್ ನ್ಯೂಸ್ ರಿವೀಲ್ ಮಾಡಿದ ಮೇಲೆ ಸಾಕಷ್ಟು ಸಲ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಷಿಕಾ ಮುಖದಲ್ಲಿ ಗ್ಲೋ ಎದ್ದು ಕಾಣಿಸುತ್ತಿದೆ. 

Latest Videos

click me!