ಸಿನಿಮಾವೆಂದ್ರೆ ಬಣ್ಣದ ಜಗತ್ತು. ಅದು ಯಾರನ್ನು ಯಾವಾಗ ಎಲ್ಲಿಗೆ ಕರೆದೊಯ್ದು ಕೂರಿಸುತ್ತದೋ ಗೊತ್ತಾಗೋಲ್ಲ. ಎಷ್ಟು ಕಷ್ಟಪಟ್ಟರೂ ಸ್ಟಾರ್ ಆಗದೆ, ಕಣ್ಮರೆಯಾದವರೇನೂ ಕಡಿಮೆ ಇಲ್ಲ ಈ ಜರ್ನಿಯಲ್ಲಿ. ಕಷ್ಟರಟ್ಟವರಿಗೂ ಸೂಕ್ತ ಪ್ರತಿಫಲವನ್ನೂ ಕೊಟ್ಟಿದೆ. ಸಾಮಾನ್ಯ ಬಸ್ ಕಂಡಕ್ಟರ್ ಇಂದು ತಮಿಳು ಸೂಪರ್ ಸ್ಟಾರ್.. ಕಾನ್ಸ್ಟೇಬಲ್ ಮಗ ಟಾಲಿವುಡ್ ಆಳುತ್ತಿರುವ ಮೆಗಾಸ್ಟಾರ್, ಬಿಎಂಟಿಸಿ ಬಸ್ ಡ್ರೈವ್ರ ಮಗ ಪಾನ್ ಇಂಡಿಯಾ ಸ್ಟಾರ್.. ಹೀಗೆ ಯಾರ ಹಣೆಬರೆಹ ಹೇಗಿರುತ್ತೋ ಹೇಳಲಾಗೋಲ್ಲ. ಹಾಗೆಯೇ ಕಾಂತಾರ ಚಿತ್ರದ ಅತ್ಯುತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಸಿನಿ ಪ್ರಯಾಣವೂ ಕಲ್ಲು ಮುಳ್ಳುಗಳ ದಾರಿಯೇ ಆಗಿತ್ತು.
ಕಾಂತಾರ ಪಾತ್ರದಲ್ಲಿ ನಟಿಸುವುದಷ್ಟೇ ಅಲ್ಲ, ಆ ಚಿತ್ತವನ್ನು ನಿರ್ದೇಶಿಸಿಯೂ ಸೈ ಎನಿಸಿಕೊಂಡಿದ್ದಾರೆ ರಿಷಬ್. ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗಕ್ಕೆ ಉತ್ತಮ ಹೆಸರು ಬಂದಿದ್ದರೆ ಒಂದು ಕಾಂತಾರ ಚಿತ್ರದಿಂದ. ಮತ್ತೊಂದು ಯಶ್ ನಟನೆಯಿ ಕೆಜಿಎಫ್ ಚಿತ್ರದಿಂದ. ಎರಡೂ ಚಿತ್ರಗಳು ಹೊಂಬಾಳೆ ಪ್ರೊಡಕ್ಷನ್ಸ್ ಎನ್ನುವುದು ವಿಶೇಷ.
ಒಂದೇ ಒಂದು ಸಿನಿಮಾ ಮೂಲಕ ತುಳು ನಾಡ ಜಾನಪದ ಕಥೆಯನ್ನಿಟ್ಟುಕೊಂಡು, ಕಾಡನ್ನು ರಕ್ಷಿಸುವ ಥೀಮ್ ಇಟ್ಕೊಂಡು ಚಿತ್ರ ಮಾಡೋ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ರಿಷಬ್. ಎಲ್ಲೋ ಕನ್ನಡ ನಾಡಿನ ಮೂಲೆಯ ಒಂದು ಆಚರಣೆಯನ್ನು ಆಧರಿಸಿ, ಜಗತ್ತಿಗೆ ಅದರ ಭವ್ಯತೆಯನ್ನು ತೋರಿಸಿದ ಕೀರ್ತಿಯೂ ಕುಂದಾಪುರ ಮೂಲದ ರಿಷಭ್‌ಗೆ ಸಲ್ಲುತ್ತದೆ.
ಕಾಂತಾರ ಚಿತ್ರದ ನಟನೆಗಾಗಿ ನಿರೀಕ್ಷೆಯಂತೆ ರಾಷ್ಟ್ರ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡ ರಿಷಬ್ ಶೆಟ್ಟಿ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಮೂಲಕ ಕನ್ನಡಕ್ಕೂ 4ನೇ ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡು, ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಆದರೆ, ಈ ಮಟ್ಟಕ್ಕೆ ಬೆಳೆಯರು ರಿಷಬ್ ರಕ್ತವನ್ನೇ ಬೆವರಿನಂತೆ ಸುರಿಸಿದ್ದಾರೆಂದರೆ ತಪ್ಪಾಗೋಲ್ಲ. ತಾವು ಸವೆಸಿದ್ದು ಕಲ್ಲು, ಮುಳ್ಳಿನ ಹಾದಿಯಾದರೂ ತಮ್ಮ ಮೂಲವನ್ನು ಮರೆಯಬಾರದು ಎಂಬುವುದು ಅವರ ನಿಲುವು. ಒಮ್ಮೆ ತಿಂದಿದ್ದಕ್ಕೆ 20 ರೂ. ಬಿಲ್ ಕೊಡಬೇಕಿತ್ತಂತೆ ರಿಷಬ್. ಇದ್ದಿದ್ದು 19ರೂ. ಮತ್ತೊಂದು ರೂ ಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ ಎಂಬುದನ್ನು ಸ್ಮರಿಸಿಕೊಳ್ಳುತ್ತಾರೆ ಕನ್ನಡದ ಈ ಪ್ರತಿಭೆ.
ಕೇವಲ ಶ್ರಮವೊಂದೇ ಅಲ್ಲ. ತಮ್ಮಲ್ಲಿರುವ ಪ್ರತಿಭೆ, ತಮಗಿರುವ ಗ್ರಾಮೀಣ ಸೊಗಡು ಎಲ್ಲವನ್ನೂ ಸೇರಿಸಿ ಈ ರಿಷಭ್ ಎಂಬ ವ್ಯಕ್ತಿತ್ವ ಇಂದು ಹೆಮ್ಮರವಾಗಿ ಬೆಳೆದಿದೆ. ತಾವು ಬೆಳೆಯುವುದು ಮಾತ್ರವಲ್ಲ, ಎಲೆ ಮರೆ ಕಾಯಿಯಂತಿರುವ ಹಲವರನ್ನು ಬೆಳೆಸಿದ್ದಾರೆ ಇವರು. ಕಲಾವಿದರು, ನಿರ್ದೇಶಕರಿಗೆ ಇವರು ಸ್ಫೂರ್ತಿ.