Ladakh ಬೈಕ್‌ ಟ್ರಿಪ್‌, ಕಿರುತೆರೆಯಿಂದ ಬ್ರೇಕ್; ನಟಿ ಭೂಮಿ ಶೆಟ್ಟಿ ಲೈಫಲ್ಲಿ ಏನಾಗುತ್ತಿದೆ!

Suvarna News   | Asianet News
Published : Nov 11, 2021, 03:37 PM IST

ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಬಳಿಕ ನಟಿ ಭೂಮಿ ಶೆಟ್ಟಿ ಬೈಕ್‌ ರೈಡ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆ ಕಮ್‌ ಬ್ಯಾಕ್‌ ಬಗ್ಗೆ ಏನು ಹೇಳಿದ್ದಾರೆ ಕೇಳಿ..........

PREV
17
Ladakh ಬೈಕ್‌ ಟ್ರಿಪ್‌, ಕಿರುತೆರೆಯಿಂದ ಬ್ರೇಕ್; ನಟಿ ಭೂಮಿ ಶೆಟ್ಟಿ ಲೈಫಲ್ಲಿ ಏನಾಗುತ್ತಿದೆ!

ಕಿನ್ನರಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾದ ಭೂಮಿ ಶೆಟ್ಟಿ ಇಕ್ಕತ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 

27

ಜನವರಿ ತಿಂಗಳಲ್ಲಿ ಮಜಾ ಭಾರತ ನಿರೂಪಣೆ ಮಾಡಿದ ಬಳಿಕ ಭೂಮಿ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

37

'ಶೀಘ್ರದಲ್ಲಿ ನಾನು ಮತ್ತೊಂದು ಚಿತ್ರಕ್ಕೆ ಸಹಿ ಹಾಕಬಹುದು. ಹೆಚ್ಚಿನ ಪ್ರಮುಖ್ಯತೆ ನೀಡಿರುವ ಪಾತ್ರ ಇದಾಗಲಿದೆ' ಎಂದಿದ್ದಾರೆ ಭೂಮಿ.

47

'ಅಫೀಶಿಯಲ್ ಆಗಿ ಸಿನಿಮಾ ಸಹಿ ಮಾಡಿದ ನಂತರ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಸದ್ಯ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿರುವೆ. ತುಂಬಾ ವಿಭಿನ್ನವಾಗಿ ಏನಾದರೂ ಬಂದರೆ ಒಪ್ಪಿಕೊಳ್ಳುವೆ' ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಹೇಳಿದ್ದಾರೆ.

57

'ಕರ್ನಾಟಕದ ಒಳಗೆ ಬೈಕ್ (Bike) ಮೂಲಕ ಸಾಕಷ್ಟು ಜಾಗಗಳನ್ನು ನೋಡಿರುವೆ.ಅದರಲ್ಲೂ ಎರಡು ದಿನಗಳ ಕಾಲ ಲಡಾಖ್ ಅದ್ಭುತವಾಗಿತ್ತು'

67

'ಒಂದು ನಿಮಿಷವೂ ಗಮನ ಕಳೆದುಕೊಳ್ಳಲು ಆಗುವುದಿಲ್ಲ ಎಲ್ಲಿ ಯಾವಾಗ ರಸ್ತೆ ತಿರುವು ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ'

77

'ರಸ್ತೆಯಲ್ಲಿ Rash ಡ್ರೈವರ್‌ಗಳ ಬಗ್ಗೆ ಎಚ್ಚರವಾಗಿರಬೇಕು. ದಾರಿಯಲ್ಲಿ ನಾವು ಸೈನಿಕರನ್ನು ಭೇಟಿ ಮಾಡಿದೆವು. ಅವರೊಂದಿಗೆ ಫೋಟೋ ಹಂಚಿಕೊಳ್ಳುವ ಹಾಗಿಲ್ಲ ಆದರೆ ಅವರು ನಮಗೆ ಒತ್ತಾಯ ಮಾಡಿ ಟೀ ಕೊಟ್ಟರು' ಎಂದು ಭೂಮಿ ಮಾತನಾಡಿದ್ದಾರೆ.

Read more Photos on
click me!

Recommended Stories