Karnataka Rathna ನಮ್ಮನ್ನು ನೋಡುತ್ತಿದ್ದಾರೆ, ಜೀವನ ತುಂಬಾ ಚಿಕ್ಕದ್ದು ಸೆಲ್ಫಿಶ್ ಆಗಬೇಡಿ: ನಟಿ ಆಶಿತಾ ಚಂದ್ರಪ್ಪ

First Published | Nov 25, 2021, 4:54 PM IST

ತಡವಾಗಿ ಅಪ್ಪು ಫೋಟೋ ಹಂಚಿಕೊಂಡರೂ, ಭಾವುಕ ಸಾಲುಗಳನ್ನು ಬರೆದ ನಟಿ ಆಶಿತಾ ಚಂದ್ರಪ್ಪ.  ಮದುವೆಗೆ ಜನರು ಬರಲು ಹೆದರುತ್ತಿದ್ದ ಸಮಯದಲ್ಲಿ ಪವರ್ ದಂಪತಿ ಬಂದಿದ್ದರಂತೆ... 
 

ಕಿರುತೆರೆ, ಬೆಳ್ಳಿ ತೆರೆ ಹಾಗೂ ಪ್ರತಿಯೊಬ್ಬ ತಂತ್ರಜ್ಞರ ಮೇಲೆ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರಿದ ವ್ಯಕ್ತಿತ್ವ ಅಂದ್ರೆ ಪುನೀತ್ ರಾಜ್‌ಕುಮಾರ್. ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎನ್ನುವ ನೋವು ಪ್ರತಿಯೊಬ್ಬರಿಗೂ ಕಾಡುತ್ತಿದೆ. 

ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಜನರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆಶಿತಾ ಮದುವೆಗೆ ಪುನೀತ್ ಆಗಮಿಸಿದ ಫೋಟೋವನ್ನು ಅಪ್ಲೋಡ್ ಮಾಡಿಕೊಂಡು ಬರೆದಿದ್ದಾರೆ. 

Tap to resize

'ಕರ್ನಾಟಕ ರತ್ನ ನಮ್ಮನ್ನು ನೋಡುತ್ತಿದ್ದಾರೆ. ಮಿಸ್ ಯು ಅಪ್ಪು ಸರ್. ಜೀವನ ತುಂಬಾನೇ ಫ್ರಜೈಲ್ ಆಗಿದೆ. ಎಲ್ಲರೂ ಇದನ್ನು ಉದಾಹರಣೆಯಾಗಿ ಸ್ವೀಕರಿಸಲಿದ್ದಾರೆ ಎಂದು ಭಾವಿಸುವೆ'

'ಲೈಫ್ ತುಂಬಾನೇ ಶಾರ್ಟ್, ಮುಂದೆ ಹೇಗೆ ಎನ್ನುವ ಕಲ್ಪನೆ ಕೂಡ ಮಾಡಲು ಸಾಧ್ಯವಾಗದು. ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಸಹಾಯ ಮಾಡಿ, ಸ್ವಾರ್ಥಕ್ಕೆ ಬದುಕಬೇಡಿ,' ಎಂದು ಬರೆದುಕೊಂಡಿದ್ದಾರೆ. 

ಆಶಿತಾ ಅವರ ಮದುವೆ ಸಮಯದಲ್ಲಿ ಕೊರೋನಾ ಅಲೆ ಎದ್ದಿತ್ತು. ಈ ಸಮಯದಲ್ಲಿ ಸಿನಿ ಆಪ್ತರು ಮದುವೆಯಲ್ಲಿ ಭಾಗಿಯಾಗುವುದಕ್ಕೆ ಚಿಂತಿಸುತ್ತಿದ್ದರು. ಆದರೆ ಪುನೀತ್ ರಾಜ್‌ಕುಮಾರ್ ದಂಪತಿ ಮೊದಲು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದ್ದರು.

Latest Videos

click me!