Wedding Lock: ಹಸೆಮಣೆ ಏರಿದ ನಟ ಪಂಕಜ್ ಎಸ್ ನಾರಾಯಣ್!

First Published | Nov 23, 2021, 6:14 PM IST

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಕಿರಿಯ ಪುತ್ರ ಪಂಕಜ್. ಮದುವೆಯಲ್ಲಿ ಭಾಗಿಯಾದ ಚಿತ್ರರಂಗದ ಹಿರಿಯ ಕಲಾವಿದರು. 

ನಟ ಪಂಕಜ್ ಕುಮಾರ್ (Pankaj S Narayan) ಎಸ್ ಮತ್ತು ರಕ್ಷಿತಾ ಸುರೇಂದ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ನವೆಂಬರ್ 21ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆಕ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಸಿನಿಮಾ ತಾರೆಯರು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. 

Tap to resize

8.30 ರಿಂದ 10.25ರ ಸಮಯದಲ್ಲಿ ನಡೆದು ಮುಹೂರ್ತ ಕಾರ್ಯಕ್ರಮಕ್ಕೆ ಹಿರಿಯ ನಟಿ ಭಾರತಿ (Bharati Vishnuvardhan) ಆಗಮಿಸಿ ಶುಭ ಹಾರೈಸಿದ್ದಾರೆ. 

ರೇಶ್ಮೆ ಪಂಚೆ (Taditional Outfit), ಶಲ್ಯ ಧರಿಸಿ ಪಂಕಜ್ ಕಾಣಿಸಿಕೊಂಡರೆ, ಕ್ರೀಮ್ ವಿತ್ ರೆಡ್ ಕಾಂಬಿನೇಷನ್‌ ಸೀರೆಯಲ್ಲಿ (Saree) ರಕ್ಷಿತಾ ಮಿಂಚಿದ್ದಾರೆ. 

ನಟ ಶ್ವೇತಾ ಚೆಂಗಪ್ಪ ಮತ್ತು ಪತಿ ಮದುವೆಯಲ್ಲಿ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪಂಕಜ್ ಫೋಟೋ ಹಂಚಿಕೊಂಡಿದ್ದಾರೆ.

Latest Videos

click me!