Premam Poojyam: ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನೆನಪಿರಲಿ ಪ್ರೇಮ್‌

Published : Nov 22, 2021, 11:27 AM ISTUpdated : Nov 22, 2021, 11:48 AM IST

ನೆನಪಿರಲಿ ಪ್ರೇಮ್‌(Prem) ಮುಖದಲ್ಲಿ ಸಾರ್ಥಕ ಭಾವ ಇತ್ತು. ‘ಸಿಂಗಲ್‌ ಸ್ಕ್ರೀನಲ್ಲೂ ಜನ ಪ್ರೀತಿಯಿಂದ ಸಿನಿಮಾ ನೋಡುತ್ತಿದ್ದಾರೆ. ಪ್ರೇಮಿಯಾಗಿ, ಒಳ್ಳೆಯ ಮಗನಾಗಿ, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಒಂದು ಅದ್ಭುತ ಪಾತ್ರ ನಿಭಾಯಿಸಿದ ಖುಷಿ ಇದೆ’ ಎಂದರು ಪ್ರೇಮ್‌.

PREV
15
Premam Poojyam: ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನೆನಪಿರಲಿ ಪ್ರೇಮ್‌

ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’(Premam Poojyam) ಚಿತ್ರತಂಡ ಭಾರಿ ಖುಷಿಯಲ್ಲಿದೆ. ಲವ್‌ಸ್ಟೋರಿಗೆ ಸಿಕ್ಕ ಮನ್ನಣೆಗೆ ಪ್ರೇಮ್‌ ಮತ್ತು ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದೆ.

25

ನಿರ್ದೇಶಕ ರಾಘವೇಂದ್ರ ಪ್ರೇಕ್ಷಕರ ಪ್ರತಿಕ್ರಿಯೆಗಳಿಂದ ಖುಷಿಯಾಗಿದ್ದಾರೆ. ‘ಥಿಯೇಟರ್‌ಗೆ ಹೋಗಿದ್ದೆವು. ಅಲ್ಲಿ ಚಪ್ಪಾಳೆ, ಶಿಳ್ಳೆ ಕೇಳಿ ಖುಷಿಯಾಯಿತು. ನನಗೆ ಇದೆಲ್ಲಾ ಮೊದಲ ಅನುಭವ. ಎಲ್ಲಾ ಕಡೆಯಿಂದ ಮೆಚ್ಚುಗೆ ಕರೆಗಳು ಬರುತ್ತಿವೆ.

35

ಅದರಲ್ಲೂ ಒಬ್ಬ ಐಪಿಎಸ್‌ ಅಧಿಕಾರಿಯೊಬ್ಬರು ಈ ಸಿನಿಮಾ ಮೆಚ್ಚಿ ಮಾತನಾಡಿದ್ದು ನನಗೆ ಬಹಳ ಖುಷಿ ಕೊಟ್ಟಿದೆ. ಅವರು ಕಣ್ಣೀರು ಹಾಕುವುದಕ್ಕೆ ಅಂತಲೇ ಎರಡನೇ ಬಾರಿ ಸಿನಿಮಾ ನೋಡಿದ್ದಾರೆ’ ಎಂದರು.

45

ನೆನಪಿರಲಿ ಪ್ರೇಮ್‌ ಮುಖದಲ್ಲಿ ಸಾರ್ಥಕ ಭಾವ ಇತ್ತು. ‘ಸಿಂಗಲ್‌ ಸ್ಕ್ರೀನಲ್ಲೂ ಜನ ಪ್ರೀತಿಯಿಂದ ಸಿನಿಮಾ ನೋಡುತ್ತಿದ್ದಾರೆ. ಪ್ರೇಮಿಯಾಗಿ, ಒಳ್ಳೆಯ ಮಗನಾಗಿ, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಒಂದು ಅದ್ಭುತ ಪಾತ್ರ ನಿಭಾಯಿಸಿದ ಖುಷಿ ಇದೆ’ ಎಂದರು ಪ್ರೇಮ್‌.

55

ಸಹ ನಿರ್ಮಾಪಕ ಡಾಕ್ಟರ್‌ ಅಂಜನ್‌, ‘ಈ ಚಿತ್ರದ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ’ ಎಂದರು. ಕಾರ್ಯಕಾರಿ ನಿರ್ಮಾಪಕ ಮಾಧವ್‌ ಕಿರಣ್‌, ‘ಒಳ್ಳೆಯ ಸಿನಿಮಾ ಮಾಡಿದ್ದೇವೆ. ಫೀಲ್‌ ಗುಡ್‌ ಮೂವೀ ಇದು. ಸಿನಿಮಾ ನೋಡದವರು ದಯವಿಟ್ಟು ಒಮ್ಮೆ ಸಿನಿಮಾ ನೋಡಿ’ ಎಂದು ವಿನಂತಿಸಿಕೊಂಡರು.

Read more Photos on
click me!

Recommended Stories