ಚಂದನವನದ ಮುದ್ದಾದ ಜೋಡಿಗಳಾದ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಈ ವರಮಹಾಲಕ್ಷ್ಮೀ ಹಬ್ಬಕ್ಕೆ ಗುಡ್ ನ್ಯೂಸ್ ಕೊಡಲು ರೆಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಟ್ಟದಾದ ವಿಡಿಯೋ ಹಂಚಿಕೊಂಡು ಏನೋ ಸ್ಪೆಷಲ್ ಇದೆ ಎಂದಿದ್ದಾರೆ ನಟಿ.
ಚಂದನವನದ ಸಿಂಪಲ್ ಸುಂದರಿ ಸೋನಲ್ ಮೊಂಥೆರೋ ಸೋಶಿಯಲ್ ಮೀಡಿಯಾದಲ್ಲಿ ಒಂದು ಪುಟ್ಟದಾದ ವಿಡಿಯೋ ಹಂಚಿಕೊಂಡು, ಈ ವರಮಹಾಲಕ್ಷ್ಮೀ ಹಬ್ಬಕ್ಕೆ ಏನೋ ಸ್ಪೆಷಲ್ ಇದೆ, ನಾನು ಇದನ್ನ ನಿಮ್ಮ ಜೊತೆ ಹಂಚಿಕೊಳ್ಳಲು ತುಂಬಾನೆ ಉತ್ಸಾಹದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಆದರೆ ಕಾಮೆಂಟ್ ಸೆಕ್ಷನ್ ನೋಡಿದ್ರೆ, ನೆಟ್ಟಿಗರು ಈಗಾಗಲೇ ಆ ಸೀಕ್ರೆಟ್ ತಿಳಿದುಕೊಂಡಂತಿದೆ. ಏನು ಹೇಳಿದ್ದಾರೆ ಗೊತ್ತಾ?
26
ವಿಡಿಯೋ ಶೇರ್ ಮಾಡಿ ಏನು ಹೇಳಿದ್ರು ಸೋನಲ್
ಸೋನಲ್ ಮೊಂಥೆರೋ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡೀಯೋ ಒಂದನ್ನು ಶೇರ್ ಮಾಡಿ. Can’t wait for you all to see this! A little something special for Varamahalakshmi ಎಂದು ಕ್ಯಾಪ್ಶನ್ ಹಾಕಿದ್ದಾರೆ. ಜೊತೆಗೆ ಒಂದು ಸರ್ಪ್ರೈಸ್ ಇದೆ, ನನ್ನ ಸಪ್ರೈಸ್ ಆನ್ ವೇಯಲ್ಲಿದೆ ಎಂದಿದ್ದಾರೆ ಸೋನಲ್.
36
ಮುದ್ದಾಗಿ ರೆಡಿಯಾಗಿರುವ ಜೋಡಿ
ಈ ವಿಡಿಯೋದಲ್ಲಿ ಸೋನಲ್ ಮೊಂಥೆರೋ ಮತ್ತು ತರುಣ್ ಇಬ್ಬರೂ ಕೂಡ ಸುಂದರವಾಗಿ ರೆಡಿಯಾಗಿದ್ದಾರೆ. ಇಬ್ಬರೂ ಕೇಸರಿ ಬಣ್ಣದ ಟ್ರೆಡಿಶನಲ್ ವೇರ್ ಅಂದರೆ, ಸೋನಲ್ ಸೀರೆಯಲ್ಲಿದ್ದರೆ, ತರುಣ್ ಕುರ್ತಾ ಮತ್ತು ಪ್ಯಾಂಟ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಪೂರ್ತಿ ವಿಡಿಯೋ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಲೀಸ್ ಆಗಲಿದೆ. ಆದರೆ ಈಗ ಹಂಚಿಕೊಂಡಿರುವ ಗ್ಲಿಂಪ್ಸ್ ನೋಡಿದ್ರೆ ಸೋನಲ್ ಮೊಂಥೆರೋ ತಾಯಿಯಾದಂತೆ ಕಾಣುತ್ತಿದೆ. ನಟಿ ಸೀರೆ ಉಟ್ಟಿರುವ ರೀತಿ, ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಆ ವಿಶೇಷ ವಿಡೀಯೋ ನೋಡಿದ್ರೆ ಗುಡ್ ನ್ಯೂಸ್ ಹಂಚಿಕೊಳ್ಳುವಂತಿದೆ.
56
ಸೀಕ್ರೆಟ್ ಪತ್ತೆ ಮಾಡಿಯೇ ಬಿಟ್ರ ನೆಟ್ಟಿಗರು
ಸೋನಲ್ ವರಮಹಾಲಕ್ಷ್ಮೀ ಹಬ್ಬಕ್ಕೆ ರಿವೀಲ್ ಮಾಡ್ತೀವಿ ಅಂದ್ರೆ, ನೆಟ್ಟಿಗರು ಈಗಾಗಲೇ ನಟಿಗೆ ಕಂಗ್ರಾಜುಲೇಶನ್ ಎನ್ನುತ್ತಾ, ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಗೊತ್ತಿದೆ ನೀವು ತಾಯಿಯಾಗ್ತಿದ್ದೀರಾ ಎನ್ನುವುದು, ಕಂಗ್ರಾಟ್ಸ್ ಎಂದಿದ್ದಾರೆ ನೆಟ್ಟಿಗರು. ಯಾವುದಕ್ಕೂ ನಿಜವಾದ ಮಾಹಿತಿ ತಿಳಿಯಲು ವರಮಹಾಲಕ್ಷ್ಮೀ ಹಬ್ಬಕ್ಕೆ ಕಾಯಬೇಕು.
66
ಇತ್ತೀಚೆಗಷ್ಟೇ ಆನಿವರ್ಸರಿ ಸೆಲೆಬ್ರೇಟ್ ಮಾಡಿದ ಜೋಡಿ
ಆಗಸ್ಟ್ 11 ರಂದು ಸೋನಲ್ ಮೊಂಥೆರೋ ಹಾಗೂ ತರುಣ್ ಸುಧೀರ್ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಸ್ಪೆಷಲ್ ದಿನದಂತು ಇಬ್ಬರು ಅದ್ಧೂರಿಯಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.