ರಮ್ಯಾ ಭೇಟಿ ಮಾಡಿದ ಅನುಶ್ರೀ; 'ಯಾಕಿಷ್ಟು ಚಂದ ನೀವು' ಹಾಡು ಬರೆದ ನಿರೂಪಕಿ!

First Published | Jun 11, 2022, 2:52 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ರಮ್ಯಾ- ಅನು ಸೆಲ್ಫಿ. ಹಾಡು ಬರೆದ ವಾಸುಕಿಗೆ ಥ್ಯಾಂಕ್ಸ್‌ ಹೇಳಿದ ನಿರೂಪಕಿ. 

ಕೆಲವು ದಿನಗಳ ಹಿಂದೆ ನಟಿ ಕಾವ್ಯಾ ಮತ್ತು ವರುಣ್ ಬೆಂಗಳೂರಿನ ನಂದಿ ಲಿಂಕ್‌ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಕಾವ್ಯಾ ಮದುವೆಯಲ್ಲಿ ಸಿನಿ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಮೋಹಕ ತಾರೆ ರಮ್ಯಾ ಮದುವೆಯಲ್ಲಿ ಕಾಣಿಸಿಕೊಂಡ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. 

Tap to resize

ರಮ್ಯಾರನ್ನು ನಿರೂಪಕಿ ಅನುಶ್ರೀ ಮೊದಲ ಸಲ ಭೇಟಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಹಂಚಿಕೊಂಡು ಬಡವ ರಾಸ್ಕಲ್‌ ಸಿನಿಮಾ ಹಾಡು ಬರೆದುಕೊಂಡಿದ್ದಾರೆ. 

'ಕೊನೆಗೂ ನೀವು ನಂಬಲ್ಲ ಇಷ್ಟು ವರ್ಷ ಇಲ್ಲಿ ಕೆಲಸ ಮಾಡಿಯೂ ಒಂದೇ ಒಂದು ಫೋಟೋ ಇವರ ಜೊತೆ ಇರಲಿಲ್ಲ. ಈಗ ಸಿಕ್ತು' ಎಂದು ಅನು ಬರೆದುಕೊಂಡಿದ್ದಾರೆ.

 'ರಮ್ಯಾ ಮೇಡಂ ನೀವು ತುಂಬಾ ಹಂಬಲ್ ವ್ಯಕ್ತಿ. ನೀವು ತೋರಿದ ಪ್ರೀತಿ ನನ್ನ ಬೆಳವಣಿಗೆ ಬಗ್ಗೆ ಹೇಳಿದ ರೀತಿ ಅತ್ಯಂತ ಖುಷಿ ಕೊಡ್ತು. ಇಷ್ಟು ಸುಂದರವಾಗಿ ಹೇಗೆ ಪ್ರತಿ ಸಲವೂ ಕಾಣಿಸುತ್ತೀರಾ?'

'ನಿನ್ನನ್ನು ಭೇಟಿ ಮಾಡಿದಾಗ ನೆನಪಾದ ಹಾಡು. ಯಾಕೆ ಇಷ್ಟು ಚಂದ ನೀನು ದೃಷ್ಟಿ ಬೊಟ್ಟು ನಿಲೇನು. ಮಲ್ಲೆ ಹೂವಿನಿಂಥ ಬಣ್ಣ. ಹೊತ್ತು ಹೊಳಿತಿರೋ ಚಿನ್ನಾ. ಬೆಳದಿಂಗಳ ಕುಡಿದವಳೇ ಚಂದಿರನ ಕಿರಮಗಳೆ' ಎಂದು ಬಡವ ರಾಸ್ಕಲ್ ಹಾಡು ಬರೆದಿದ್ದಾರೆ.

'ಈ ಸಾಲುಗಳಿಗೆ ಹೇಳಿ ಮಾಡಿಸಿದ ಚಂದ ಅದಕ್ಕೂ ಮೀರಿ ನಿಮ್ಮ ಪ್ರೀತಿಯ ಮಾತು ಅಂದವೋ ಅಂದ ರಮ್ಯಾ. ಥ್ಯಾಂಕ್ಸ್‌ ವಾಸುಕಿ ಮತ್ತು ಧನಂಜಯ್ ಈ ಹಾಡಿಗೆ' ಎಂದು ಬರೆದುಕೊಂಡಿದ್ದಾರೆ.

Latest Videos

click me!