ನಟ ಯಶ್‌ ಹತ್ರ ಬರೋಕೆ ಯಾರ್ಗೂ ಆಗಲ್ಲ; ಬಾಡಿ ಗಾರ್ಡ್‌ ಶ್ರೀನಿವಾಸ್‌ ಮಾಸ್‌ ಫೋಟೋ ನೋಡಿ ಎಲ್ಲರು ಶಾಕ್

First Published Jun 18, 2024, 1:26 PM IST

ಯಾವ ಸಿನಿಮಾ ಹೀರೋನೂ ಅಲ್ಲ ವಿನಲ್‌ ಅಂತು ಅಲ್ವೇ ಅಲ್ಲ....ಇದು ರಾಖಿ ಬಾಯ್‌ ಜೊತೆಗಿರುವ ಬಾಡಿ ಗಾರ್ಡ್‌ ಫೋಟೋ.....

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್, ರಾಖಿ ಬಾಯ್ ಯಶ್‌ ಅವರ ಬಾಡಿಗಾರ್ಡ್‌ ಶ್ರೀನಿವಾಸ್ ಟ್ರಾನ್ಸ್‌ಫಾರ್ಮೇಷನ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಲವು ವರ್ಷಗಳಿಂದ ಯಶ್‌ಗೆ ಬಾಡಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್‌ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗರುವ ಶ್ರೀನಿವಾಸ್ ಸುಮಾರು 28 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಫಿಟ್‌ನೆಸ್‌ ಮಾಡಲ್ ಹಾಗೂ ಪರ್ಸನಲ್‌ ಸೆಕ್ಯೂರಿಟಿ ಆಫೀಸರ್‌ ಫಾರ್‌ ಯಶ್‌ ಎಂದು ತಮ್ಮ ಬಗ್ಗೆ ಬರೆದುಕೊಂಡು ಸುಮಾರು 76 ಫೋಟೋ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶ್ರೀನಿವಾಸ್ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಿದ್ದರು. ಏನೋ ವಿಶೇಷ ಕಾದಿದೆ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು ಯಶ್ ಫ್ಯಾನ್ಸ್‌.

 ಈಗ ಶ್ರೀನಿವಾಸ್‌ ತಮ್ಮ ಟ್ರಾನ್ಸ್‌ಫಾರ್ಮೇಷನ್‌ ಫೋಟೋ ಅಪ್ಲೋಡ್ ಮಾಡಿದ್ದಾರೆ. ಯಾವುದೋ ಚಿತ್ರದ ಖಡಕ್‌ ವಿಲನ್‌ ರೀತಿ ಕಾಣಿಸುತ್ತಿದ್ದಾರೆ.

ಇನ್ನು ಮುಂದೆ ಯಶ್ ತಂಟೆಗೆ ಯಾರೂ ಬರುವಂತಿಲ್ಲ, ಯಶ್ ಹತ್ರ ಬರೋಕು ಭಯ ಆಗಬೇಕು, ಯಶ್‌ಗೆ ನೀವೇ ಪರ್ಫೆಕ್ಟ್‌ ಬಾಡಿಗಾರ್ಡ್‌ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!