ಮಾಣಿಕ್ಯ ನಟಿ ವರಲಕ್ಷ್ಮಿ ಮದ್ವೆಯಾಗುತ್ತಿರುವುದು ಹದಿ ವಯಸ್ಸಿನ ಮಗಳಿರೋ ತಂದೆಯನ್ನು!

First Published Jun 17, 2024, 7:18 PM IST

2014ರಲ್ಲಿ ಕಿಚ್ಚ ಸುದೀಪ್‌ ನಟನೆ ಮಾಣಿಕ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರಲಕ್ಷ್ಮಿ ಶರತ್‌ಕುಮಾರ್ ಅವರು ಮದುವೆಯಾಗುತ್ತಿದ್ದಾರೆ. ಆದರೆ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿರುವ ಭಾವಿ ಪತಿಗೆ ಹದಿಹರೆಯದ ಮಗಳಿದ್ದಾಳೆ.

ಜುಲೈ 2ರಂದು ವರಲಕ್ಷ್ಮಿ ಶರತ್ ಕುಮಾರ್ ಮತ್ತು ನಿಕೊಲಾಯ್ ಸಚ್‌ದೇವ್ ಅವರನ್ನು ಮದುವೆಯಾಗುತ್ತಿದ್ದಾರೆ. ಹೀಗಾಗಿ ತನ್ನ ಜೊತೆಗೆ ನಟಿಸಿದ ಎಲ್ಲಾ ನಟರಿಗೆ ಖುದ್ದು ಅವರೇ ಮದುವೆ ಕಾರ್ಡ್ ಹಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ವರಲಕ್ಷ್ಮಿ ಶರತ್​ಕುಮಾರ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ನಯನತಾರಾ, ರಜನಿಕಾಂತ್, ರವಿತೇಜಾ, ಸುದೀಪ್ ಸೇರಿದಂತೆ ತಾನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದ ಎಲ್ಲರ ಬಗ್ಗೆಯೂ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆ.

 ಮದುವೆ ಬೇಡ ಎಂದೇ ಹೇಳಿಕೊಂಡು ಬಂದಿದ್ದ ನಟಿ ತಮ್ಮ ಬಹುಕಾಲದ ಗೆಳೆಯ ನಿಕೊಲಾಯ್ ಸಚ್​ದೇವ್ ಜೊತೆಗೆ ಎಂದು ತಿಳಿದ ತಕ್ಷಣ ಈಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿಕೋಲಾಯ್ ಸಚ್‌ದೇವ್ ಅವರು ಮುಂಬೈ ಮೂಲದ ಕಲಾ ಗ್ಯಾಲರಿಸ್ಟ್ ಆಗಿದ್ದಾರೆ. ವಾಸ್ತವವಾಗಿ, ಅವರು ಮುಂಬೈನಲ್ಲಿ ಗ್ಯಾಲರಿ 7 ಎಂಬ ಹೆಸರಿನ ತಮ್ಮದೇ ಆದ ಆರ್ಟ್ ಗ್ಯಾಲರಿಯನ್ನು ಹೊಂದಿದ್ದಾರೆ. ಸೆಲೆಬ್ರಿಟಿಗಳು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ.

ಗ್ಯಾಲರಿ 7 ಅನ್ನು ನಿಕೋಲಾಯ್ ಅವರ ಪೋಷಕರಾದ ಅರುಣ್ ಮತ್ತು ಚಂದ್ರ ಅವರು ಸ್ಥಾಪಿಸಿದರು ಅವರು ಪ್ರಸಿದ್ಧ ಕಲಾ ಗ್ಯಾಲರಿಸ್ಟ್‌ಗಳೂ ಆಗಿದ್ದಾರೆ. ಆರ್ಟ್ ಗ್ಯಾಲರಿ ಜೊತೆಗೆ ನಿಕೋಲಾಯ್ ಫಿಟ್‌ನೆಸ್ ಉತ್ಸಾಹಿ ಮತ್ತು ಪವರ್‌ಲಿಫ್ಟರ್ ಕೂಡ ಹೌದು. ವರಲಕ್ಷ್ಮಿ ಜತೆಗೆ ಗೆಳೆತನ ಬೆಳೆಸುವ ಮೊದಲು ನಿಕ್, ಮಾಡೆಲ್ ಮತ್ತು ಫಿಟ್‌ನೆಸ್ ಕೋಚ್ ಕವಿತಾ ಅವರನ್ನು ವಿವಾಹವಾಗಿದ್ದರು. 2006ರಲ್ಲಿ ಇವರಿಬ್ಬರ ವಿವಾಹವಾಗಿದ್ದು, ಕಾಶಾ ಎಂಬ ಮಗಳೂ ಇದ್ದಾಳೆ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕದ ವಿಜೇತೆ ಈಕೆ. ಕವಿತಾ ಮತ್ತು ನಿಕೋಲಾಯ್ ಅವರ ವಿವಾಹವು 13 ವರ್ಷಗಳ ನಂತರ 2019 ರಲ್ಲಿ ಕೊನೆಗೊಂಡಿತು.

2010 ರಲ್ಲಿ ವರಲಕ್ಷ್ಮಿ ಮತ್ತು ನಿಕೋಲಾಯ್ ಮೊದಲಿಗೆ ಭೇಟಿಯಾದರು. ಬಳಿಕ ಉತ್ತಮ ಸ್ನೇಹಿತರಾಗಿದ್ದರು. 2019 ರಲ್ಲಿ ಕವಿತಾರಿಂದ ದೂರಾದ ಬಳಿಕ ವರಲಕ್ಷ್ಮಿ ಇನ್ನಷ್ಟು ಹತ್ತಿರವಾಗಿ ಇಬ್ಬರೂ ಪ್ರೀತಿಸಿದರು. ಈ ವರ್ಷ ಮಾರ್ಚ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು.

ಇದಕ್ಕೆ ಟೀಕೆಗಳು ವ್ಯಕ್ತವಾದಾಗ ನಟಿ ತನ್ನ ತಂದೆ ಕೂಡ ಎರಡು ಬಾರಿ ಮದುವೆಯಾಗಿದ್ದಾರೆ ಮತ್ತು ವ್ಯಕ್ತಿಯು ಸಂತೋಷವಾಗಿರುವವರೆಗೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ನಿಕ್​ ತಂದೆ-ತಾಯಿ ಒಂದು ಆರ್ಟ್​ ಗ್ಯಾಲರಿ ನಡೆಸುತ್ತಾರೆ. ನಿಕ್​ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್​ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಆತ್ಮೀಯವಾಗಿ ಇದ್ದೇನೆ. ಅವರು ಒಳ್ಳೆಯ ವ್ಯಕ್ತಿ. ಎಲ್ಲವೂ ಚೆನ್ನಾಗಿದೆ. ನನಗೆ ಅವರು ಸುರಸಂದರನೇ. ಬೇರೆಯವರಿಗೆ ಹೇಗೆ ಕಂಡರೆ ನಾನೇನೂ ಮಾಡಲು ಆಗುವುದಿಲ್ಲ ಎಂದು ಈ ಹಿಂದೆ ಟ್ರೂಲ್‌ ಪೇಜ್‌ಗಳಿಗೆ ನಟಿ ಕ್ಲಾಸ್ ತೆಗೆದುಕೊಂಡಿದ್ದರು.

Latest Videos

click me!