ಆ ಹೀರೋ ಜೊತೆ ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ, ಪೇಮೆಂಟ್ ಕಡಿಮೆ ಕೊಡ್ತಾರೆ: ಆಶಿಕಾ ರಂಗನಾಥ್

Published : Jun 17, 2024, 01:20 PM IST

ಈಗಲೂ ನಟಿಯರಿಗೆ ಅವಕಾಶಗಳು ಸಿಗುತ್ತಿಲ್ವಾ? ಅವಕಾಶ ಕೊಟ್ಟರೂ ಕಡಿಮೆ ಸಂಬಳ ಕೊಡ್ತಿದ್ದಾರಾ? ನಟಿ ಆಶಿಕಾ ರಂಗನಾಥ್ ಮಾತು...  

PREV
19
ಆ ಹೀರೋ ಜೊತೆ ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ, ಪೇಮೆಂಟ್ ಕಡಿಮೆ ಕೊಡ್ತಾರೆ: ಆಶಿಕಾ ರಂಗನಾಥ್

ಸ್ಯಾಂಡಲ್‌ವುಡ್‌ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್‌ ಯಾಕೆ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವಕಾಶ ಸರಿಯಾಗಿ ಸಿಗುತ್ತಿಲ್ವಾ ಅಥವಾ ಸಂಭಾವನೆ ಕಡಿಮೆ ಕೊಡುತ್ತಿದ್ದಾರಾ ಎಂದು ನೆಟ್ಟಿಗರಲ್ಲಿ ಪ್ರಶ್ನೆ ಶುರುವಾಗಿದೆ. ಇದಕ್ಕೆ ಆಶಿಕಾ ಉತ್ತರ ಕೊಟ್ಟಿದ್ದಾರೆ.

29

'ನಾನು ಇತ್ತೀಚಿಗೆ ನಟಿಸುತ್ತಿರುವ ಸಿನಿಮಾಗಳಿಂದ ಒಳ್ಳೆ ಸಂಭಾವನೆ ಸಿಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸಿಗುತ್ತಿರುವಷ್ಟು ನೇಮ್ ಆಂಡ್‌ ಫೇಮ್ ಬೇರೆ ಭಾಷೆಯಲ್ಲಿ ಸಿಕ್ಕಿದರೆ ಖಂಡಿತಾ ಸೀನ್‌ ಬೇರೆ ಇರುತ್ತಿತ್ತು. 

39

ಇಂಡಸ್ಟ್ರಿಯಲ್ಲಿ ತಲೆಯಲ್ಲಿ ಇಟ್ಟುಕೊಂಡು ಆಲೋಚನೆ ಮಾಡಬೇಕು ಏಕೆಂದರೆ ತೆಲಗು ಇಂಡಸ್ಟ್ರಿಯಷ್ಟು ದೊಡ್ಡದಲ್ಲ ಆದರೆ ಸಿನಿಮಾ ಕಂಟೆಂಟ್‌ ಚೆನ್ನಾಗಿ ಬರುತ್ತಿದೆ. 

49

ಕನ್ನಡ ಸಿನಿಮಾಗಳನ್ನು ನೋಡುವವರು ಕಡಿಮೆ ಅಥವಾ ಕನ್ನಡ ಸಿನಿ ರಸಿಕರು ತುಂಬಾ ಚೂಸಿಯಾಗಿದ್ದಾರೆ ತುಂಬಾ ಸ್ಮಾರ್ಟ್‌ ಅಂತ ಜಾಸ್ತಿ ಕೇಳುತ್ತೀನಿ. 

59

ಹೀರೋಗಳಿಗಿಂತ ತುಂಬಾನೆ ಕಡಿಮೆ ಪೇಮೆಂಟ್ ಆಗುತ್ತಿರುವುದರಿಂದ ವ್ಯತ್ಯಾಸ ಇದೆ. ನಮ್ಮನ್ನು ಲೆಕ್ಕ ಇಟ್ಕೊಂಡು ತರುವ ಕಥೆಗಳಲ್ಲಿ ನಾವು ಒಂದನ್ನು ಆಯ್ಕೆ ಮಾಡಿಕೊಳ್ಳುವುದು. 

69

ಹತ್ತಿರದವರು ಯಾಕೆ ಈ ಹೀರೋ ಜೊತೆ ಮಾಡಲ್ಲ ಆಕೆ ಆ ಹೀರೋ ಜೊತ ಮಾಡಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ನಾನು ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ ನಮಗೆ ಬಂದಿರುವ ಅವಕಾಶಗಳು ಇಷ್ಟು. 

79

ನಮಗೆ ಅವಕಾಶಗಳು ಹೇಗೆ ಬರುತ್ತದೆ ಎಂದು ಜನರಿಗೆ ಅರ್ಥವಾಗುವುದಿಲ್ಲ ಪಾತ್ರಕ್ಕೆ ಸೂಕ್ತವಾಗಿರಬೇಕು ಹೀರೋಗೆ ಮ್ಯಾಚ್ ಆಗಬೇಕು ಆಮೇಲೆ ಸ್ಕ್ರೀನ್‌ ಮೇಲೆ ಚೆನ್ನಾಗಿ ಬಂದ್ರೆ ಸಿನಿಮಾ ಓಡುತ್ತದೆ. 

89

ನಾನು ಚಿತ್ರರಂಗಕ್ಕೆ ಬಂದ ಆರಂಭದಿಂದ ಯಾರಿಗೂ ಅವಕಾಶ ಕೊಡಿ ಎಂದು ಕೇಳಿಕೊಂಡು ಹೋಗಿಲ್ಲ ಏಕೆಂದರೆ ಪಾಪ ಅವರ ಬಳಿ ಇರುತ್ತೋ ಇಲ್ವೋ ಆಮೇಲೆ ಏನಾದರೂ ಕೇಳಿ ಸಿಲುಕಿಸಬಾರದು ಅಂತ.

99

ನ್ಯಾಚುಲರ್ ಆಗಿ ನಮಗೆ ಅವಕಾಶ ಸಿಗಬೇಕು. ನಾನು ಸ್ವಲ್ಪ ಬದಲಾಗಿ ನಿಮ್ಮ ಜೊತೆ ಕೆಲಸ ಮಾಡಬೇಕು ಅಂದುಕೊಂಡಿರುವೆ ಎಂದು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಆಶಿಕಾ ಮಾತನಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories