ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್, ಮುದ್ದು ಮುಖದ ಚೆಲುವೆ ಅಮೂಲ್ಯ (Amulya) ತಾಯಿ ಆಗುತ್ತಿರುವ ಸುದ್ದಿಯನ್ನು ಹೊಸ ವರ್ಷದಂದು ರಿವೀಲ್ ಮಾಡಿದ್ದರು.
ಅಮೂಲ್ಯ ಮತ್ತು ಜಗದೀಶ್ ಆರ್‌ಸಿ (Jagadish RC) ಮಾರ್ಚ್ ತಿಂಗಳಲ್ಲಿ ಮುದ್ದು ಕಂದಮ್ಮನನ್ನು ಬರ ಮಾಡಿಕೊಳ್ಳಲು ರೆಡಿಯಾಗಿದ್ದಾರೆ.
ರಾಜರಾಜೇಶ್ವರಿ ನಗರದ (RR Nagar) ಜಗದೀಶ್ ನಿವಾಸದಲ್ಲಿ ಅಮೂಲ್ಯ ಅವರಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.
ಕ್ರೀಮ್ ಮತ್ತು ಕೆಂಪು ಕಾಂಬಿನೇಷನ್‌ನ ಸೀರೆಯಲ್ಲಿ (Saree) ಅಮೂಲ್ಯ ಕಾಣಿಸಿಕೊಂಡರೆ, ವೈಟ್ ಆಂಡ್ ರೆಡ್ ಜುಬ್ಬಾದಲ್ಲಿ ಜಗದೀಶ್ ಮಿಂಚಿದ್ದಾರೆ.
ಸೀಮಂತ ಕಾರ್ಯಕ್ರಮವನ್ನು ದೀಪಕ್ ವಿಜಯ್ (Deepak Vijay) ಸೆರೆ ಹಿಡಿದಿದ್ದಾರೆ. ಹಳದಿ, ಹಸಿರು ಮತ್ತು ಬಿಳಿ ಬಣ್ಣದ ಹೂಗಳನ್ನು ಬಳಸಿ ಗಿಣಿ (Parrot)ಗಳನ್ನು ಮಾಡಿ ಇಡೀ ಸ್ಥಳವನ್ನು ಅಲಂಕಾರ ಮಾಡಲಾಗಿತ್ತು.
ಅಮೂಲ್ಯ ಅವರಿಗೆ ಡಿಸೈನರ್ ಮೆಹೇಂದಿ (Designer Mehendi) ಹಾಕಲಾಗಿದೆ. ಕೃಷ್ಣ ರಾಧೆ, ಬೃಂದಾವನ, ಗಂಡ-ಹೆಂಡತಿ ಮತ್ತು ಗರ್ಭಿಣಿ ಡಿಸೈನ್ ಕೈ ಮೇಲೆ ಬಿಡಿಸಲಾಗಿದೆ.