Machies Movie: ಮರ್ಫಿ ಸಿನಿಮಾ ನಿರ್ದೇಶಕರ ಜೊತೆ Actor Vinay Rajkumar ಹೊಸ ಸಿನಿಮಾ!

Published : May 14, 2026, 03:03 PM IST

Kannada Actor Vinay Rajkumar Movie: ಇತ್ತೀಚೆಗೆ ನಟ ವಿನಯ್‌ ರಾಜ್‌ಕುಮಾರ್‌ ಅವರು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸುತ್ತಿದ್ದಾರೆ. ಈಗ ಇವರ ಹೊಸ ಸಿನಿಮಾ ಅನೌನ್ಸ್‌ ಆಗಿದೆ. ಹಾಗಾದರೆ ಯಾವ ಸಿನಿಮಾ? 

PREV
13
ಹೊಸ ಚಿತ್ರ ಅನೌನ್ಸ್

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಹೊಸ ಚಿತ್ರ ಅನೌನ್ಸ್ ಮಾಡಲಾಗಿದೆ. ಮರ್ಫಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಬಿ ಎಸ್ ಪಿ ವರ್ಮ 'ಮಾಚಿಸ್' ಚಿತ್ರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

23
ತಾಂತ್ರಿಕ ವರ್ಗದಲ್ಲಿ ಯಾರಿದ್ದಾರೆ?

ಸುರೇಶ್ ಗೌಡ ಹೆಣ್ಣೂರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಶಿವುಗೌಡ ಇದ್ದಾರೆ. ಛಾಯಾಗ್ರಾಹಕರಾಗಿ ಆದರ್ಶ ಆರ್, ಸಂಕಲನಕಾರರಾಗಿ ಕಿರಣ್, ಕಲಾ ನಿರ್ದೇಶಕರಾಗಿ ಗುಣ,

ಕಾರ್ಯಕಾರಿ ನಿರ್ಮಾಪಕರಾಗಿ ಮೋಹನ್ ಎನ್ ಮುನಿನಾರಾಯಣಪ್ಪ ಕೆಲಸ ಮಾಡುತ್ತಿದ್ದಾರೆ.

33
ಮುಂಬರುವ ಸಿನಿಮಾಗಳಿವು!

ನಿರ್ವಹಣಾ ನಿರ್ಮಾಪಕರಾಗಿ ಸುರೇಶ್ ಮೈಸೂರು ಹಾಗೂ ಸಾಹಸ ಸಂಯೋಜನೆಯನ್ನ ಡಾ. ಕೆ. ರವಿ ವರ್ಮಾ ಮಾಡಲಿದ್ದಾರೆ. ಜುಲೈನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ವಿನಯ್‌ ರಾಜ್‌ಕುಮಾರ್‌ ಅವರು ‘ಸಿಟಿ ಲೈಟ್ಸ್’‌, ‘ಗ್ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಗಳು ರಿಲೀಸ್‌ ಆಗಬೇಕಿವೆ. ಅಂದಹಾಗೆ ಕೊನೆಯದಾಗಿ ಇವರು, ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories