ನಟ ಉಪೇಂದ್ರ ಅವರ 1999ರ 'ಉಪೇಂದ್ರ' ಸಿನಿಮಾವು ಜೂನ್ 4 ರಂದು ಮರು-ಬಿಡುಗಡೆಯಾಗುತ್ತಿದೆ. ಈ ವಿಶೇಷ ಪ್ರದರ್ಶನದ ಅಂಗವಾಗಿ, ಸಿನಿಮಾ ವೀಕ್ಷಿಸಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಅದೃಷ್ಟಶಾಲಿ ಪ್ರೇಕ್ಷಕರಿಗೆ ಒಂದು ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಡಿಟೇಲ್ಸ್ ಇಲ್ಲಿದೆ.
ನಟ ಉಪೇಂದ್ರ ಅವರ ಸಿನಿಮಾ ಅಂದ್ರೆ ಅದರಲ್ಲಿ ಹೆಚ್ಚಿನವು ವೀಕ್ಷಕರ ತಲೆಗೆ ಹುಳು ಬಿಡುವುದೇ ಆಗಿದೆ. ರಾಜಕೀಯ ಪಕ್ಷ ಕಟ್ಟಿದ್ರೂ ಅಲ್ಲಿನ್ನೂ ಸಕ್ಸಸ್ ಕಾಣದ ಉಪೇಂದ್ರ ಅವರು, ನಟನಾಗಿ ಮಾತ್ರ ಜನಮನದಲ್ಲಿ ಸದಾ ನೆಲೆಸಿರುತ್ತಾರೆ. ಇದಕ್ಕೆ ಒಂದು ಕಾರಣ ಎಂದರೆ ಇವರ ಕ್ರಿಯೇಟಿವಿಟಿ. ಕೆಲವೊಮ್ಮೆ ಒಮ್ಮೆ ನೋಡಿದ್ರೆ ಅರ್ಥವಾಗಲ್ಲ, ಇದು ಬುದ್ಧಿವಂತರಿಗೆ ಮಾತ್ರ. ಬೇರೆಯವರು ಅನೇಕ ಬಾರಿ ಸಿನಿಮಾ ನೋಡಬೇಕು ಎಂದು ಮೆಸೇಜ್ ಕೊಟ್ಟು, ಕೆಲವು ವೀಕ್ಷಕರು ಅರ್ಥ ಆಗದಿದ್ದರೂ ಆಗಿದೆ ಎಂದು ಹೇಳುವುದೂ ಉಂಟು. ಅಂಥ ಒಂದು ಕುತೂಹಲ ಕೆರಳಿಸುವ ನಟ ಉಪೇಂದ್ರ.
26
ವೀಕ್ಷಕರಿಗೆ ಭರ್ಜರಿ ಆಫರ್
ಇದೀಗ ನಟ ಉಪೇಂದ್ರ ಅವರ ಎರಡನೆಯ ಸಿನಿಮಾ ಉಪೇಂದ್ರ ನೋಡುಗರಿಗೆ ಭರ್ಜರಿ ಆಫರ್ ನೀಡಿದೆ ನಿರ್ಮಾಣ ಸಂಸ್ಥೆ. 1999ರಲ್ಲಿ ರಿಲೀಸ್ ಆಗಿದ್ದ ಉಪೇಂದ್ರ ಚಿತ್ರವು ಸೈಕಲಾಜಿಕಲ್ ಡ್ರಾಮಾ ಥ್ರಿಲ್ಲರ್ ಆಗಿರುವ ಉಪೇಂದ್ರ ಚಿತ್ರವು ನಟ ಉಪೇಂದ್ರ ಅವರ ಅಭಿನಯ ಹಾಗೂ ನಿರ್ದೇಶನದ ಎರಡನೇ ಸಿನಿಮಾ ಆಗಿದೆ.
36
ಒಂದು ಕೋಟಿ ಬಹುಮಾನ
ಇಶ್ ಮೈರಾ ಪ್ರೊಡ್ಯೂಸರ್ ಕಂಪೆನಿ ಅಡಿಯಲ್ಲಿ ಪರಮೇಶ್ವರ್ ಬಿ ಅವರು ಇದೀಗ ವೀಕ್ಷಕರಿಗೆ ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಆಸಾಧ್ಯ ಅನ್ನೋದನ್ನು ಸಾಧ್ಯ ಮಾಡ್ತೀವಿ ಎಂದು ಹೇಳುವ ಮೂಲಕ ಇಂಥದ್ದೊಂದು ಆಫರ್ ಕೊಟ್ಟಿದ್ದಾರೆ. ಉಪೇಂದ್ರ ಸಿನಿಮಾ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರ ಅನುಮತಿ ಮೇರೆಗೆ ಇಂಥದ್ದೊಂದು ಸಾಹಸಕ್ಕೆ ಕೈಹಾಕಲಾಗಿದೆ.
ಅಷ್ಟಕ್ಕೂ ಈ ಸಿನಿಮಾವನ್ನು ಇದೀಗ ರೀ ರಿಲೀಸ್ (Upendra Movie Re- Release) ಮಾಡಲಾಗುತ್ತಿದೆ. ಜೂನ್ 4ರಂದು ಸದ್ಯ ಡೇಟ್ ಫಿಕ್ಸ್ ಆಗಿದೆ. ಈ ಸಿನಿಮಾ ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಮಾತ್ರ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
56
ಒಂದು ಕೋಟಿ ಗೆಲ್ಲುವ ಅವಕಾಶ
ಮುಂದಿನದ್ದೇ ಇರುವುದು ಕುತೂಹಲ. ಸಿನಿಮಾ ನೋಡಿ ಮುಗಿದ ಮೇಲೆ ಪ್ರತಿ ಥಿಯೇಟರ್ ನಲ್ಲಿ 10 ನಿಮಿಷ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಸರಿಯಾದ ಉತ್ತರ ನೀಡಿದವರಿಗೆ ಆ ಶೋನ ಸಂಪೂರ್ಣ ಕಲೆಕ್ಷನ್ ದುಡ್ಡನ್ನು ಬಹುಮಾನವಾಗಿ ನೀಡಲಾಗುತ್ತದೆ ಎನ್ನುವುದು ಯೋಜನೆ. ಇಷ್ಟ್ಏ ಅಲ್ಲದೇ, ಈ ಸಿನಿಮಾ ಪ್ರದರ್ಶನದ 25ನೇ ದಿನ ಅದೇ ರೀತಿ ಉತ್ತರ ನೀಡಿದ ಒಬ್ಬ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಆಯೋಜಕ ಪರಮೇಶ್ವರ್ ಬಿ ಹೇಳಿದ್ದಾರೆ.
66
ಏನಿದರ ಉದ್ದೇಶ?
ಇಂಥದ್ದೊಂದು ಯೋಜನೆ ಸ್ಯಾಂಡಲ್ವುಡ್ ಇತಿಹಾಸದಲ್ಲಿಯೇ ಹೊಸತು. ಸಿನಿಮಾ ಥಿಯೇಟರ್ನಿಂದ ವಿಮುಖರಾಗ್ತಿರೋ ಜನರಿಗೆ ಕನ್ನಡ ಸಿನಿಮಾ ಇತಿಹಾಸ ಮತ್ತು ಸಾಧನೆಯನ್ನು ತಿಳಿಸುವುದು, ಹೊಸ ಅಲೆಯ ಸಿನಿಮಾ ಮೇಕರ್ಗಳನ್ನು ಹಾಗೇ ಪ್ರೇಕ್ಷಕರನ್ನು ಪ್ರೋತ್ಸಾಹಿಸುವುದು ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತಂದು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳನ್ನು ಉಳಿಸಿಕೊಳ್ಳುವುದು. ಸಿನಿಮಾಗಳಿಲ್ಲದ ಬರಗಾಲದಲ್ಲಿ ಥಿಯೇಟರ್ಗಳಿಗೆ ಸಿನಿಮಾಗಳನ್ನು ಪೂರೈಸುವುದಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.