ಸ್ಯಾಂಡಲ್‌ವುಡ್‌ನ ತಾರಾ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜ.26ಕ್ಕೆ ನಡೆಯಲಿದೆ. ಸಂಸದ ಪ್ರತಾಪ್ ಸಿಂಹ ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
28
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ವಿವಾಹ ಕಾರ್ಯಕ್ರಮ ನಡೆಯಲಿದೆ. ಮೈಸೂರು ಊಟಿ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು.
38
ಸಂಸದ ಪ್ರತಾಪ್ ಸಿಂಹ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಈ ವೇಳೆ ಹಾಜರಿದ್ದರು. ಕಳೆದ ಡಿ.3 ಕ್ಕೆ ಈ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರವೇ ತಮ್ಮ ವಿವಾಹ ಸುದ್ದಿಯನ್ನು ಪ್ರಕಟಿಸುವುದಾಗಿಯೂ ತಿಳಿಸಿದ್ದರು.
48
ಇದೀಗ ಹೊಸ ವರ್ಷದ ಆರಂಭದಲ್ಲೇ ಇವರ ವಿವಾಹದ ದಿನಾಂಕ ಬಹಿರಂಗಗೊಂಡಿದೆ. ಕೆಲವು ವರ್ಷಗಳಿಂದ ಪ್ರೇಮಿಸುತ್ತಿದ್ದ ಈ ಜೋಡಿ ಶೀಘ್ರ ಹಸೆಮಣೆ ಏರಲಿದೆ.
58
ಇವರಿಬ್ಬರ ನಿಶ್ಚಿತಾರ್ಥದ ಉಂಗುರ ತುಂಬಾನೇ ವಿಭಿನ್ನವಾಗಿದೆ. ಗ್ರಾಫಿಕ್ಸ್ ಡಿಸೈನರ್ ಆಕ್ಟೇವ್ ಮತ್ತು ಓವಲ್ ಶೇಪ್ ಉಂಗುರ ಡಿಸೈನ್ ಮಾಡಿದ ಅದರ ಮೇಲೆ ಸಿಂಹ ಹಾಕಿಸಿದ್ದಾರೆ.
68
ಹಲವು ವರ್ಷಗಳಿಂದ ವಸಿಷ್ಠ ಮತ್ತು ಹರಿಪ್ರಿಯಾ ಪ್ರೀತಿಸುತ್ತಿದ್ದರು. ತುಂಬಾನೇ ಸೀಕ್ರೆಟ್ ಆಗಿಟ್ಟು ಕಳೆದ ತಿಂಗಳು ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
78
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೈ-ಕೈ ಹಿಡಿದು ಓಡಾಡುತ್ತಿರುವ ಫೋಟೋ ತುಂಬಾನೇ ವೈರಲ್ ಅಗಿತ್ತು. ಅಲ್ಲಿಂದ ತಮ್ಮ ಪ್ರೀತಿ ಬಗ್ಗೆ ಸಣ್ಣ ಸಣ್ಣ ಸುಳಿವು ಕೊಡಲು ಆರಂಭಿಸಿದ್ದರು.
88
ಸೆಲೆಬ್ರಿಟಿಗಳು ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡುತ್ತಾರೆ ಆದರೆ ಇವರಿಬ್ಬರು ಆಶ್ರಮದಲ್ಲಿ ಮದುವೆ ಮಾಡಿಕೊಳ್ಳುತ್ತಿರುವುದು ಯಾಕೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಒಟ್ಟಿನಲ್ಲಿ ಇಬ್ಬರು ಜೀವನದಲ್ಲಿ ದಿಲ್ ಖುಷ್ ಆಗಿದ್ದರೆ ಸಾಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.