2023ರ ಬಹುನಿರೀಕ್ಷಿತ 12 ಸಿನಿಮಾಗಳು; ನಿಮ್ಮ ನೆಚ್ಚಿನ ಸ್ಟಾರ್‌ ಈ ಲಿಸ್ಟ್‌ನಲ್ಲಿ ಇದ್ದಾರಾ?

Published : Jan 02, 2023, 11:39 AM IST

ಹೊಸ ವರ್ಷ ಆರಂಭವಾಗಿದೆ. ಈ ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳ ಸಿನಿಮಾಗಳು ಯಾವುವು ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ. ಪ್ಯಾನ್‌ ಇಂಡಿಯಾ ಸ್ಟಾರ್‌ಗಳಾದ ಯಶ್‌ ಹಾಗೂ ಸುದೀಪ್‌ ಅವರು ಹೊಸ ಸಿನಿಮಾ ಘೋಷಿಸಿಲ್ಲ. ಉಳಿದ ಸ್ಟಾರ್‌ ನಟರ ಪೈಕಿ ಶಿವರಾಜ್‌ಕುಮಾರ್‌, ಉಪೇಂದ್ರ, ರಕ್ಷಿತ್‌ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ, ದುನಿಯಾ ವಿಜಯ್‌, ಧನಂಜಯ್‌, ಜಗ್ಗೇಶ್‌, ಗಣೇಶ್‌, ವಿನಯ್‌ ರಾಜ್‌ಕುಮಾರ್‌ ಹೀಗೆ ಸಾಕಷ್ಟುನಟರ ಚಿತ್ರಗಳು ಗೆಲುವಿನ ಅಖಾಡದಲ್ಲಿವೆ. ಹೀಗೆ 2023ನೇ ಸಾಲಿನ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳು ಇಲ್ಲಿವೆ.

PREV
112
2023ರ ಬಹುನಿರೀಕ್ಷಿತ 12 ಸಿನಿಮಾಗಳು; ನಿಮ್ಮ ನೆಚ್ಚಿನ ಸ್ಟಾರ್‌ ಈ ಲಿಸ್ಟ್‌ನಲ್ಲಿ ಇದ್ದಾರಾ?

ಕಬ್ಜ: ಆರ್‌ ಚಂದ್ರು ನಿರ್ದೇಶನ, ಉಪೇಂದ್ರ ಹಾಗೂ ಸುದೀಪ್‌ ನಟನೆಯ ‘ಕಬ್ಜ’ ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಹಾಗೂ ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಭೂಗತ ಲೋಕದ ಕತೆಯ ಈ ಚಿತ್ರದಲ್ಲಿ ಡಾನ್‌ ಪಾತ್ರದಲ್ಲಿ ರಿಯಲ್‌ ಸ್ಟಾರ್‌, ಪೊಲೀಸ್‌ ಅಧಿಕಾರಿಯಾಗಿ ಕಿಚ್ಚ ನಟಿಸಿದ್ದಾರೆ. ಕನ್ನಡದ ಬಹು ನಿರೀಕ್ಷೆಯ ಪ್ಯಾನ್‌ ಇಂಡಿಯಾ ಸಿನಿಮಾ ಇದು.

212

ಸಪ್ತ ಸಾಗರದಾಚೆ ಎಲ್ಲೋ: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಹಾಗೂ ನಿರ್ದೇಶಕ ಹೇಮಂತ್‌ ರಾವ್‌ ಕಾಂಬಿನೇಶನ್‌ನ ಸಿನಿಮಾ. ‘777 ಚಾರ್ಲಿ’ ಚಿತ್ರ ಕನ್ನಡದ ಆಚೆಗೆ ಯಶಸ್ಸು ಕಂಡಿದ್ದು, ಇದರ ಗೆಲುವು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೇಲೂ ಇದೆ. ರುಕ್ಮಿಣಿ ವಸಂತ್‌ ಚಿತ್ರದ ನಾಯಕಿ.

312

ಮಾರ್ಟಿನ್‌: ಇದು ಕೂಡ ಕನ್ನಡದ ನೆಲದಲ್ಲಿ ಹುಟ್ಟಿಕೊಂಡಿರುವ ಪ್ಯಾನ್‌ ಇಂಡಿಯಾ ಸಿನಿಮಾ. ಎ ಪಿ ಅರ್ಜುನ್‌ ನಿರ್ದೇಶಿಸಿ, ಉದಯ್‌ ಕೆ ಮಹ್ತಾ ನಿರ್ಮಾಣದ ಈ ಚಿತ್ರವೂ ಬಹು ಭಾಷೆಯಲ್ಲೂ ಬಿಡುಗಡೆ ಆಗುತ್ತಿದ್ದು, ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರಂತೆ.

412

ಭೀಮ: ದುನಿಯಾ ವಿಜಯ್‌ ನಟನೆ, ನಿರ್ದೇಶನದ ಸಿನಿಮಾ. ಮೇಕಿಂಗ್‌ನಲ್ಲೇ ಕುತೂಹಲ ಮೂಡಿಸಿರುವ ಸಿನಿಮಾ ಇದು.‘ಸಲಗ’ ಗೆಲುವಿನ ಕುದುರೆ ಮೇಲೆ ಕೂತಿರುವ ದುನಿಯಾ ವಿಜಯ್‌ ಅವರ ಬತ್ತಳಿಕೆಯಿಂದ ಮೂಡಿ ಬರುತ್ತಿರುವ ‘ಭೀಮ’ನ ನಿರ್ಮಾಪಕರು ಕೃಷ್ಣ ಸಾರ್ಥಕ್‌ ಹಾಗೂ ಜಗದೀಶ್‌ ಗೌಡ.

512

 ಬಘೀರ: ಲಕ್ಕಿ ಸೂರಿ ನಿರ್ದೇಶನ, ಪ್ರಶಾಂತ್‌ ನೀಲ್‌ ಚಿತ್ರಕಥೆ ಇರುವ, ಶ್ರೀಮುರಳಿ ನಟನೆಯ ‘ಬಘೀರ’ ಶೂಟಿಂಗ್‌ ಅಖಾಡದಲ್ಲಿದೆ. ಹೊಂಬಾಳೆ ಫಿಲಮ್ಸ್‌ ನಿರ್ಮಾಣದ ಈ ಚಿತ್ರವೂ 2023ರ ಬಹು ನಿರೀಕ್ಷೆಯ ಸಾಲಿನಲ್ಲಿ ಸದ್ದು ಮಾಡುತ್ತಿದೆ.

612

ಘೋಸ್ಟ್‌ : ಆ್ಯಕ್ಷನ್‌, ಥ್ರಿಲ್ಲರ್‌ ಜಾನರ್‌ ಸಿನಿಮಾ. ಶ್ರೀನಿ ನಿರ್ದೇಶನದ ಚಿತ್ರ. ಹೆಸರಿನಿಂದಲೇ ಗಮನ ಸೆಳೆದು, ಮೇಕಿಂಗ್‌ ಕಾರಣಕ್ಕೆ ಈಗಾಗಲೇ ಸುದ್ದಿಯಾಗುತ್ತಿರುವ ಈ ಚಿತ್ರವನ್ನು ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಿದ್ದಾರೆ.

712

ಬಾನದಾರಿಯಲ್ಲಿ: ಮತ್ತೆ ನಿರ್ದೇಶಕ ಪ್ರೀತಮ್‌ ಗುಬ್ಬಿ ಹಾಗೂ ನಟ ಗಣೇಶ್‌ ಜತೆಗೆಯಾಗಿರುವುದು ಈ ಚಿತ್ರದ ಹೈಲೈಟ್‌ ಹಾಗೂ ನಿರೀಕ್ಷೆಗೆ ಕಾರಣ. ಆಫ್ರಿಕದಲ್ಲೂ ಶೂಟಿಂಗ್‌ ಮಾಡಿದ್ದು, ಅದ್ದೂರಿಯಾಗಿ ಈ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದ ನಾಯಕಿಯರಾಗಿ ರುಕ್ಮಿಣಿ ವಸಂತ್‌, ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.

812

ಯು-ಐ: ತುಂಬಾ ವರ್ಷಗಳ ನಂತರ ನಟ ಉಪೇಂದ್ರ ಅವರು ತಮಗೇ ತಾವೇ ಆ್ಯಕ್ಷನ್‌ ಕಟ್‌ ಹೇಳಿಕೊಳ್ಳುತ್ತಿರುವ ಸಿನಿಮಾ ಇದು. ಅವರೊಳಗಿನ ನಿರ್ದೇಶಕ ಎದ್ದು ಕೂತಿದ್ದಾರೆ ಎನ್ನುವ ಮಟ್ಟಿಗೆ ಈ ಚಿತ್ರ ಈಗಾಗಲೇ ಹೆಸರು ಮತ್ತು ಪೋಸ್ಟರ್‌ಗಳಿಂದ ಸದ್ದು ಮಾಡುತ್ತಿದೆ. ಲಹರಿ ಸಂಸ್ಥೆ ಹಾಗೂ ಕೆ ಪಿ ಶ್ರೀಕಾಂತ್‌ ಜತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

912

ಬ್ಯಾಡ್‌ ಮ್ಯಾನರ್ಸ್‌: ದುನಿಯಾ ಸೂರಿ ಸೈಲೆಂಟ್‌ ಆಗಿ ರೂಪಿಸುತ್ತಿರುವ ಸಿನಿಮಾ. ನಟ ಅಭಿಷೇಕ್‌ ಅಂಬರೀಶ್‌ ಅವರಿಗೆ ಹೊಸ ಇಮೇಜ್‌ ಕೊಡಬಹುದಾದ ಸಿನಿಮಾ ಎನ್ನುವ ಕಾರಣಕ್ಕೆ ಬ್ಯಾಡ್‌ ಮ್ಯಾನರ್ಸ್‌ ಸದ್ದು ಮಾಡುತ್ತಿದೆ. ಪ್ರಿಯಾಂಕಾ ಕುಮಾರ್‌ ಹಾಗೂ ರಚಿತಾ ರಾಮ್‌ ಚಿತ್ರದ ನಾಯಕಿಯರು. ಕೆ ಎಂ ಸುಧೀರ್‌ ಚಿತ್ರದ ನಿರ್ಮಾಪಕರು.

1012

ಸ್ವಾತಿ ಮುತ್ತಿನ ಮಳೆ ಹನಿಯೇ: ರಾಜ್‌ ಬಿ ಶೆಟ್ಟಿನಿರ್ದೇಶನ ಮತ್ತು ನಟನೆಯ ಪ್ರೇಮ ಕಥಾ ಚಿತ್ರ. ರಮ್ಯ ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಸಿರಿ ರವಿಕುಮಾರ್‌.
 

1112

ಹೊಯ್ಸಳ: ಡಾಲಿ ಧನಂಜಯ… ನಟನೆಯ 25ನೇ ಚಿತ್ರ ‘ಹೊಯ್ಸಳ’. ವಿಜಯ… ಎನ್‌ ನಿರ್ದೇಶಿಸಿದ್ದಾರೆ. ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ನಿರ್ಮಾಣದ ಸಿನಿಮಾ.

1212

ಪೆಪೆ: ಹೆಸರು ಹಾಗೂ ಟೀಸರ್‌ನಿಂದ ಗಮನ ಸೆಳೆದಿರುವ ಸಿನಿಮಾ ಇದು. ವಿನಯ್‌ ರಾಜ್‌ಕುಮಾರ್‌ ನಟನೆಯ ಈ ಚಿತ್ರ, ಮೇಕಿಂಗ್‌ ಹಾಗೂ ಪೋಸ್ಟರ್‌ಗಳು ನೋಡಿಯೇ ಚಿತ್ರದ ಮೇಲೆ ಯಶಸ್ಸಿನ ಭರವಸೆ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories