ನಿಮಿಕಾ ರತ್ನಾಕರ್ ಸದ್ಯ ಸ್ಯಾಂಡಲ್‌ವುಡ್ ಸೆನ್ಸೇಷನ್. ಈ ಸುಂದರಿ ಪರ ಭಾಷೆ ಅಥವಾ ಬಾಲಿವುಡ್ ನಿಂದ ಬಂದವರಲ್ಲ. ಅಪ್ಪಟ ಕನ್ನಡತಿ. ಮಂಗಳೂರು ಮೂಲಕ ಈ ನಟಿ ಸದ್ಯ ಕನ್ನಡ ಅಭಿಮಾನಿಗಳ ನಿದ್ದೆ ಗೆಡಿಸಿದ್ದಾರೆ.
26
Mr. ಬ್ಯಾಚುಲರ್‌ನ ಜೋಡಿಯಾಗಿ 'ಅಬ್ಬರಿ'ಸುತ್ತಿರುವ ಸುಂದರಿ ನಿಮಿಕಾ ರತ್ನಾಕರ್ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ರೂ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದಾರೆ. 2008ರಲ್ಲಿ ರಾಮಧಾನ್ಯ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದರು. ಆದರೆ ಈ ಸಿನಿಮಾ ಕೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದರೆ ಸಿನಿಮಾಗಿಂತ ಹೆಚ್ಚಾಗಿ ನಿಮಿಕಾ ಮಾಡಲಿಂಗ್ ನಲ್ಲಿ ಖ್ಯಾತಿ ಗಳಿಸಿದ್ದಾರೆ.
36
ಮಂಗಳೂರು ಮೂಲದ ನಟಿ ನಿಮಿಕಾ ಬೆಳೆದಿದ್ದು ಮಸ್ಕಟ್, ಮುಂಬೈ ಮತ್ತು ಮಂಗಳೂರಿನಲ್ಲಿ. ಮಾಡೆಲ್ ಮತ್ತು ಗಾಯಕಿಯಾಗಿರುವ ನಿಮಿಕಾ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ 2017 ವಿನ್ನರ್ ಕೂಡ ಹೌದು. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು ಬೀಗಿದ್ದಾರೆ. ಬಳಿಕ ನಿಮಿಕಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
46
ರಾಮಾಧಾನ್ಯ ಸಿನಿಮಾ ಮೂಲಕ ಮೊದಲ ಬಾರಿಗೆ ಸಿನಿ ಅಭಿಮಾನಿಗಳ ಮುಂದೆ ಬಂದ ನಿಮಿಕಾ ಬಳಿಕ ಮತ್ತೆ ಕಾಣಿಸಿಕೊಂಡಿಲ್ಲ. ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಶೂಲಂ, Mr.ಬ್ಯಾಚುಲರ್, ಅಬ್ಬರ ಸೇರಿದಂತೆ ಇನ್ನು ಕೆಲವು ಸಿನಿಮಾಗಳು ನಿಮಿಕಾ ಬಳಿ ಇದೆ.
56
ಅಂದಹಾಗೆ ಸದ್ಯ ನಿಮಿಕಾ ಡಾರ್ಲಿಂಗ್ ಕೃಷ್ಣ ಜೊತೆ Mr.ಬ್ಯಾಚುಲರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳ ಕಾಯುತ್ತಿದ್ದಾರೆ.
66
ಟ್ಯಾಲೆಂಟ್ ನಟಿ ನಿಮಿಕಾ ರತ್ನಾಕರ್ ಇನ್ಮುಂದೆ ಕನ್ನಡ ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗುವ ಸಾಧ್ಯತೆ ಇದೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಿಮಿತಾ Mr.ಬ್ಯಾಚುಲರ್ ಬಲಿಕ ಪ್ರಜ್ವಲ್ ದೇವರಾಜ್ ಜೊತೆ ಅಬ್ಬರ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇನ್ನು ಯಾವೆಲ್ಲ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಕಾದು ನೋಡಬೇಕು.