ಪಬ್ಲಿಕ್‌ ಫಿಗರ್‌ ಆದಾಗ ಹೂವಿನ ಜೊತೆ ಮೊಟ್ಟೆಯೂ ಬೀಳುತ್ತೆ: ಸುದೀಪ್‌

First Published | Jan 5, 2023, 10:21 AM IST

ತೆಲುಗು ಯೂಟ್ಯೂಬ್‌ ವಾಹಿನಿ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುವ ವಿಚಾರದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್...
 

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ, ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ರಶ್ಮಿಕಾ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡಿದ್ದರು. ಮಾತು, ನಡವಳಿಕೆ ಹೀಗೆ ಅನೇಕ ಕಾರಣಗಳಿಗೆ ನೆಟ್ಟಿಗರು ರಶ್ಮಿಕಾ ವಿರುದ್ಧ ರೊಚ್ಚಿಗೇಳುತ್ತಿದ್ದಾರೆ.

ಇತ್ತೀಚೆಗೆ ಸುದೀಪ್ ತೆಲುಗು ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ  ವಿವಾದಗಳ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ವಿವಾದ ಮತ್ತು ಟ್ರೋಲ್‌ಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

Tap to resize

 ‘ನಿಮಗೆ 10 ಮಿಲಿಯನ್‌ ಫಾಲೋವರ್ಸ್‌ ಬೇಕು, ನೆಗೆಟಿವ್‌ ಕಮೆಂಟ್‌ ಬೇಡ ಅಂದರೆ ಹೇಗೆ? ಪಬ್ಲಿಕ್‌ ಫಿಗರ್‌ ಆದಾಗ ಹೂವಿನ ಹಾರದ ಜೊತೆಗೆ ಮೊಟ್ಟೆ, ಕಲ್ಲುಗಳೂ ಬೀಳುತ್ತವೆ. ಇವನ್ನೆಲ್ಲ ನಿಭಾಯಿಸಲು ಕಲಿಯಬೇಕು, ಏನೇ ಆದರೂ ನಾವದನ್ನು ದಾಟಿ ಮುಂದೆ ಹೋಗುತ್ತಿರಬೇಕು’

ರಶ್ಮಿಕಾ ಮಂದಣ್ಣ ‘ಕಾಂತಾರ’ ಸಿನಿಮಾ ನೋಡಿಲ್ಲ ಅಂದಿದ್ದಕ್ಕೆ ಟ್ರೋಲ್‌ಗೆ ಒಳಗಾದ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್‌ ನೀಡಿದ ಖಡಕ್‌ ಉತ್ತರವಿದು. ತೆಲುಗು ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುದೀಪ್‌, ‘ನಾವು ಸಾರ್ವಜನಿಕವಾಗಿ ಗುರುತಿಸಿಕೊಂಡ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ.

‘ಜಗತ್ತು ಬದಲಾಗುತ್ತಲೇ ಇರುತ್ತದೆ, ಅದನ್ನು ನಿಲ್ಲಿಸೋದು ಅಸಾಧ್ಯ. 15-20 ವರ್ಷಗಳ ಹಿಂದೆ ಮಾಧ್ಯಮ ಸಂದರ್ಶನಗಳೇ ಹೊಸತು. ಡಾ. ರಾಜ್‌ ಕಾಲದಲ್ಲಿ ಪೇಪರ್‌, ದೂರದರ್ಶನ ಬಿಟ್ಟು ಮತ್ತೇನೂ ಇರಲಿಲ್ಲ. ಅಂದಿನ ಕಾಲವೇ ಚೆನ್ನಾಗಿತ್ತು, ಈಗ ಸರಿಯಿಲ್ಲ ಅನ್ನೋದರಲ್ಲಿ ಅರ್ಥ ಇಲ್ಲ. ನಮ್ಮ ಕಾಲಕ್ಕೆ ಬೇಕಾದ ಹಾಗೆ ನಾವು ಬದುಕನ್ನ ನಿರ್ವಹಿಸಬೇಕು. 

ಟೀಕೆಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕು, ಹೆಚ್ಚೆಚ್ಚು ಸ್ಟ್ರಾಂಗ್‌ ಆಗುತ್ತಾ ಹೋಗಬೇಕು. ಬೆಳೆಯುತ್ತ ಹೋದಾಗ ನಾವು ಆಡುವ ಮಾತು ಹೇಗಿರಬೇಕು, ಹೇಳಬೇಕಿರುವುದನ್ನು ನಾಜೂಕಿನಿಂದ ಹೇಳೋದು ಹೇಗೆ ಅನ್ನುವ ಬಗ್ಗೆ ಎಚ್ಚರ ಇರಬೇಕು. 

ಇಷ್ಟಾದ ಮೇಲೂ ಸೋಷಿಯಲ್‌ ಮೀಡಿಯಾದಲ್ಲಿ 10 ಮಿಲಿಯನ್‌ ಫಾಲೋವರ್ಸ್‌ ಇಟ್ಟುಕೊಂಡು ನೆಗೆಟಿವ್‌ ಕಮೆಂಟ್ಸ್‌ ಬರಬಾರದು ಅಂದರೆ ಹೇಗೆ?’ ಎಂದು ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್‌ ಅವರ ಈ ಮಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಂದಹಾಗೆ ಸುದೀಪ್ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಸದ್ಯ ಕಿಚ್ಚ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಆದರೆ ಯಾವ ಸಿನಿಮಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಕಿಚ್ಚನ ಮುಂದಿನ ಸಿನಿಮಾಗೆ ಯಾರು ಆಕ್ಷನ್ ಕಟ್ ಹೇಳುತ್ತಾರೆ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಕಾದು ನೋಡಬೇಕು. 

Latest Videos

click me!