ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ರಂಟ್ ಲೈನ್ ವರ್ಕರ್ಸ್ ಸಹಾಯಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಆಹಾರ ವಿತರಿಸುತ್ತಿದ್ದಾರೆ.
ಸುಮಾರು 5 ಸರಕಾರಿ ಆಸ್ಪತ್ರೆಗೆ ಈ ವ್ಯವಸ್ಥೆ ಒದಗಿಸಿದ್ದಾರೆ 'ಭರಾಟೆ' ಹುಡುಗ.
ಕೆ.ಸಿ ಜನರಲ್ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ವೈದ್ಯರಿಗೆ, ನರ್ಸ್ ಹಾಗೂ ಇನ್ನಿತರೆ ಸಿಬ್ಬಂದಿಗೆ ದಿನವೂ ಊಟದ ವ್ಯವಸ್ಥೆ ಕೂಡ ಮಾಡಿಸಿದ್ದಾರೆ.
ಶ್ರೀಮುರಳಿ ಮಾನವೀಯ ಗುಣವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚಿ, ಕೊಂಡಾಡಿದ್ದಾರೆ.
ಪ್ರತಿಯೊಬ್ಬ ಫ್ರಂಟ್ ಲೈನ್ ಕೆಲಸಗಾರರಿಗೂ ಈ ಸೇವೆ ತಲುಪ ಬೇಕೆಂದು ಶ್ರೀಮುರಳಿ ಬೆನ್ನೆಲುಬಾಗಿ ಅಭಿಮಾನಿಗಳು ಸಹಾಯಕ್ಕೆ ಮುಂದಾಗಿದ್ದಾರೆ.