ನಟ ಶಿವರಾಜ್ ಕುಮಾರ್ ಅವರು ಗುರುವಾರ ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದರು.
ತಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ ದತ್ತು ಪಡೆದಿರುವ ಪಾರ್ವತಿ ಎಂಬ ಆನೆಯನ್ನು ನೋಡಲು ಕುಟುಂಬ ಸಮೇತರಾಗಿ ಆಗಮಿಸಿದ್ದರು.
ಶಿವರಾಜ್ ಕುಮಾರ್ ಅವರು ಕೆಲಕಾಲ ಆನೆಯೊಂದಿಗೆ ಇದ್ದು, ಅವುಗಳಿಗೆ ಕ್ಯಾರೆಟ್ ತಿನ್ನಿಸಿ ಸಂತಸಪಟ್ಟರು.
ಮೂರ್ನಾಲ್ಕು ಬಾರಿ ಬೊಗಸೆಯಷ್ಟುಕ್ಯಾರೆಟ್ ತೆಗೆದು ಆನೆಗೆ ನೀಡಿದರು.
ಈ ವೇಳೆ ನಿರ್ದೇಶಕ ಶ್ರೀಕಾಂತ್ ಮತ್ತು ಮೃಗಾಲಯ ಸಿಬ್ಬಂದಿ ಇದ್ದರು.
'Let’s speak for those without a voice' ಎಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.
Suvarna News