ರಾಬರ್ಟ್‌ಹಾಡು, ಟೀಸರ್ ಹಾಗೂ ಫರ್ಸ್ ಲುಕ್‌ಗಳಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ನಿರ್ಮಾಣದ ಈ ಚಿತ್ರ, ಕನ್ನಡದ ಜತೆಗೆ ಬೇರೆ ಭಾಷೆಯಲ್ಲಿ ಪ್ರೇಕ್ಷಕರನ್ನೂ ಸೆಳೆಯುವ ತಾಕತ್ತು ಕಾಣುತ್ತಿದೆ.
ಕೋಟಿಗೊಬ್ಬ 3ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟುನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವಕಾರ್ತಿಕ್ ಮೊದಲ ಬಾರಿಗೆ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರಕ್ಕೆ ಮೇಕಿಂಗ್ ಹಾಗೂ ಚಿತ್ರದ ಟೈಟಲ್ ಮೇಲೆಯೇ ಹೆಚ್ಚು ನಂಬಿಕೆ.
ಕೆಜಿಎಫ್ 2ನಟ ಯಶ್ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕೊಟ್ಟಈ ಚಿತ್ರದ ಬಿಡುಗಡೆಗೆ ಬಹುಭಾಷೆಯ ಪ್ರೇಕ್ಷಕರು ಕಾಯುತ್ತಿದ್ದಾರೆ. ಮೊದಲ ಭಾಗ ನೋಡಿದವರು ಎರಡನೇ ಭಾಗ ನೋಡುವ ಮತ್ತಷ್ಟುಕುತೂಹಲ ಹುಟ್ಟಿಸಿದ್ದು, ಈ ಬಾರಿ ಬಾಲಿವುಡ್‌ನ ಸ್ಟಾರ್‌ಗಳು ಕೂಡ ಜತೆಯಾಗಿರುವುದು ಪ್ರಶಾಂತ್ ನೀಲ್ ಚಿತ್ರದ ಹೆಚ್ಚುಗಾರಿಕೆ.
ಭಜರಂಗಿ 2ಹರ್ಷ ನಿರ್ದೇಶನದಲ್ಲಿ ಸಾಕಷ್ಟುಸದ್ದು ಮಾಡುತ್ತಿರುವ ಶಿವರಾಜ್‌ಕುಮಾರ್ ನಟನೆಯ ಚಿತ್ರವಿದು. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದ್ದು, ಕಾಡು ಜನರ ಕತೆ ಹಾಗೂ ಆಂಜನೇಯನ ಅವತಾರದಂತೆ ಶಿವಣ್ಣ ಕಾಣಿಸಿಕೊಂಡಿದ್ದಾರೆಂಬುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು.
ಯುವರತ್ನಈಗಾಗಲೇ ‘ರಾಜಕುಮಾರ’ ಚಿತ್ರದ ಮೂಲಕ ಯಶಸ್ಸು ಕಂಡ ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಜೋಡಿಯ ಚಿತ್ರ ಎನ್ನುವ ಕಾರಣಕ್ಕೆ ಸಾಕಷ್ಟುನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ. ಯಂಗ್ ಜನರೇಷನ್ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ.
ಪೊಗರುತುಂಬಾ ವರ್ಷಗಳಿಂದ ಧ್ರುವ ಸರ್ಜಾ ಸಿನಿಮಾ ತೆರೆ ಮೇಕೆ ಮೂಡಿಲ್ಲ. ಈಗ ತೆರೆಗೆ ಸಿದ್ಧವಾಗಿರುವ ಪೊಗರು ಚಿತ್ರದ ಹಾಡು ಈಗಾಗಲೇ ಮಿಲಿಯನ್‌ಗಳ ದಾಖಲೆಯನ್ನು ಪೂರೈಸಿದೆ. ನಂದ ಕಿಶೋರ್ ನಿರ್ದೇಶಿಸಿ, ಗಂಗಾಧರ್ ನಿರ್ಮಾಣದ ಚಿತ್ರ.
ಸಲಗದುನಿಯಾ ವಿಜಯ್ ನಟನೆ ಜತೆಗೆ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವುದು ಈ ಚಿತ್ರದ ಮೇಲೆ ಭರವಸೆ ಇಡಲು ಮೊದಲ ಕಾರಣ. ಬೆಂಗಳೂರು ಭೂಗತ ಜಗತ್ತಿನ ಕತೆಯೊಂದನ್ನು ತೆರೆ ಮೇಲೆ ತರುತ್ತಿದ್ದು, ಯಾರು ಊಹೆ ಮಾಡಿರದ ಘಟನೆಗಳು ಕತೆಯಲ್ಲಿ ಬರುತ್ತವೆ ಎಂಬುದು ಚಿತ್ರಕ್ಕೆ ಇರುವ ಬ್ಯಾಕ್ ಪಿಲ್ಲರ್.
ಕೃಷ್ಣ ಟಾಕೀಸ್‌ನಟ ಅಜಯ್ ರಾವ್ ಚಿತ್ರಗಳನ್ನು ಎದುರು ನೋಡುತ್ತಿರುವವರಿಗೆ ಈ ಚಿತ್ರ ಸಮಾಧಾನ ತರಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಅಪೂರ್ವ’ ಚಿತ್ರದ ಮೂಲಕ ಕನ್ನಡಕ್ಕೆ ಬಂದ ನಟಿ ಅಪೂರ್ವ ಅವರ ಎರಡನೇ ಸಿನಿಮಾ ಇದು. ವಿಜಯ್ ಆನಂದ್ ನಿರ್ದೇಶನದ ಚಿತ್ರ.
100ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈಗ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಏನೆಲ್ಲ ಕ್ರೈಮ್‌ಗಳನ್ನು ಮಾಡುತ್ತಾರೆ ಎನ್ನುವ ಚಿತ್ರವಿದು. ಪ್ರತಿಯೊಂದು ಕುಟುಂಬಕ್ಕೂ ಕನೆಕ್ಟ್ ಆಗುವ ಕತೆ ಹೊಂದಿರುವ ಸಿನಿಮಾ. ರಚಿತಾ ರಾಮ್, ಪೂರ್ಣ ನಟನೆಯ ಈ ಚಿತ್ರವನ್ನು ರಮೇಶ್ ರೆಡ್ಡಿ ನಂಗ್ಲಿ ನಿರ್ಮಿಸಿದ್ದಾರೆ.
ಅವತಾರ ಪುರುಷಸಿಂಪಲ್ ಸುನಿ ನಿರ್ದೇಶನದ, ಶರಣ್ ನಟನೆಯ ಸಂಪೂರ್ಣವಾದ ಮನರಂಜನೆಯ ಸಿನಿಮಾ ಇದು. ಹಾಸ್ಯ ಚಿತ್ರಗಳೇ ಬರುತ್ತಿಲ್ಲ ಯಾಕೆ ಎಂದು ಕೇಳುವವರಿಗೆ ಉತ್ತರವಾಗಿ ಈ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರವಿದು.