ರಾಗಿಣಿ ನಟಿಸಿದ ಹಿಂದಿ ವಿಡಿಯೋ ಆಲ್ಬಂನ ಫಸ್ಟ್‌ಲುಕ್‌!

First Published | Oct 23, 2021, 9:41 AM IST

ಕೆ.ಪಿ. ಶ್ರೀಕಾಂತ್‌ ನಿರ್ಮಾಣದ ಹಿಂದಿ ಆಲ್ಬಂ ಒಂದರಲ್ಲಿ ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ನಟಿಸಿದ್ದಾರೆ. ಆಲ್ಬಂನ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿದೆ.

ಸ್ಯಾಂಡಲ್‌ವುಡ್‌ ನಟಿ ರಾಗಿಣಿ (Ragini Dwivedi) ನಟಿಸಿದ ಹಿಂದಿ ವಿಡಿಯೋ  ಆಲ್ಬಂನ (Video Album) ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.
 

Ragini Dwivedi

ಬಾಲಿವುಡ್ ನಟ ಅರ್ಜುನ್‌ ಶರ್ಮಾ (Arjun Sharma) ಹಾಗೂ ರಾಗಿಣಿ ಜೋಡಿಯಾಗಿ ಈ ಹಿಂದಿ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

ಹಿಂದಿ (Hindi) ಹಾಗೂ ಪಂಜಾಬಿ (Punjabi) ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಆಲ್ಬಂ ಅನ್ನು ನಿರ್ಮಾಪಕ ಕೆ ಪಿ ಶ್ರೀಕಾಂತ್‌ ನಿರ್ಮಾಣ ಮಾಡುತ್ತಿದ್ದಾರೆ.

ಶ್ರೀಕಾಂತ್ (KP Srikanth) ಅವರ ವೀನಸ್‌ ಎಂಟರ್‌ಟೈನ್‌ಮೆಂಟ್‌ ಹಾಗೂ ಎರಡು ದೊಡ್ಡ ಸಂಗೀತ ಕಂಪನಿಗಳು ಸೇರಿ ಬಿಡುಗಡೆ ಮಾಡುತ್ತಿವೆ. 

ಖ್ಯಾತ ನೃತ್ಯ ನಿರ್ದೇಶಕ ವಿಷ್ಣು ದೇವ್‌ (Vishnu Dev) ನೃತ್ಯ ಸಂಯೋಜನೆಯಲ್ಲಿ (Dance master) ಹಾಡನ್ನು ರೂಪಿಸಲಾಗಿದೆ.

‘ಆಲ್ಬಂ ಹಾಡು ತುಂಬಾ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಇದರ ಬಿಡುಗಡೆ ಆಗಲಿದೆ. ಯಾವ ಯೂಟ್ಯೂಬ್‌ ಅಥವಾ ಮಲ್ಟಿಪ್ಲೆಕ್ಸ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರು ನಿರ್ಧರಿಸುತ್ತಾರೆ’ ಎನ್ನುತ್ತಾರೆ ನಟಿ ರಾಗಿಣಿ.

Latest Videos

click me!