ಅಬ್ಬಬ್ಬಾ! ಪ್ರಜ್ವಲ್ ದೇವರಾಜ್ ಹೆಂಡ್ತಿ ಕೇವಲ 50 ಕೆಜಿ ಅಂತ; ಮಾಡೋ ಕಸರತ್ತು ನೋಡಿ!

First Published | Apr 5, 2024, 12:59 PM IST

ಸಿಕ್ಕಾಪಟ್ಟೆ ವರ್ಕೌಟ್ ಮಾಡ್ಕೊಂಡು ಫಿಟ್ ಆಗಿರುವ ರಾಗಿಣಿ ಪ್ರಜ್ವಲ್ ರಿಯಲ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. 
 

ಕನ್ನಡ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಲಾ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ನಟಿ ಫಿಟ್ನೆಸ್ ಸೀಕ್ರೆಟ್‌ನ ರಿವೀಲ್ ಮಾಡಿದ್ದಾರೆ.

ಏನ್ ತಿಂದ್ರೂ ಸುಲಭವಾಗಿ ಜೀರ್ಣ ಮಾಡಿಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಒಂದು ದಿನ ಚೀಟ್‌ ಮೀಲ್ ಮಾಡುವೆ. ನಮ್ಮ ಮನೆಯಲ್ಲಿ ಮೂರು ತಲೆ ಮಾರುಗಳಿಂದ ದಿನ ಬೆಳಗ್ಗೆ ತಪ್ಪದೆ ಈ ಕೆಲಸ ಮಾಡುತ್ತೀವಿ ಅದುವೇ Oil pulling. 

Latest Videos


15 ನಿಮಿಷಗಳ ಕಾಲ ಕೊಬ್ಬರಿ ಎಣ್ಣಯಲ್ಲಿ ಬಾಯಿ ಮುಕ್ಕಳಿಸುತ್ತೀವಿ ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ  ಇಷ್ಟು ದಿನ ಇದೊಂದು ಸೀಕ್ರೆಟ್ ಆಗಿತ್ತು. 

ನಮ್ಮ ಮನೆಯಲ್ಲಿ ಯಾರೂ ಬೆಳಗ್ಗೆ ತಿಂಡಿ ತಿನ್ನುವುದಿಲ್ಲ  Intermittent fasting ಫಾಲೋ ಮಾಡುತ್ತೀವಿ ತುಂಬಾ ಆಸೆ ಆದರೆ ಮಾತ್ರ ಮಸಾಲ ದೋಸೆ ಆರ್ಡರ್‌ ಮಾಡಿಕೊಳ್ಳುತ್ತೀನಿ.

ಪ್ರತಿನಿತ್ಯ ತಪ್ಪದೆ ಮೂರು ಲೋಟ ಹಣ್ಣಿನ ಜ್ಯೂಸ್‌ ಕುಡಿಯುತ್ತೀನಿ, ಮೊದಲು ನಿಂಬೆ ಹಣ್ಣು ನೀರು.... ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದು ನಮ್ಮ ಆರೋಗ್ಯಕ್ಕೆ ಸ್ವತ್ಛೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ, ಎರಡನೇ ಗ್ಲಾಸ್ ಕ್ಯಾರೆಟ್‌ ಜ್ಯೂಸ್ ಆಗಿರುತ್ತದೆ, ಮೂರನೇ ಗ್ಲಾಸ್‌ ಬೂದು ಕುಂಬಳಕಾಯಿ ಕುಡಿಯುವೆ ಇದರ ಬಗ್ಗೆ ಹೆಚ್ಚಿಗೆ ಜನರಿಗೆ ಗೊತ್ತಿಲ್ಲ.

ಒಂದು ಲೈಫ್ ಹ್ಯಾಕ್ ಹೇಳಿಕೊಡುತ್ತೀನಿ...ನಾವು ತಿನ್ನುವ ಪ್ರಮಾಣ ಮುಖ್ಯವಾಗುತ್ತದೆ. ನಾವಣೆ ಕಡಿಮೆ ಹಾಕಿಕೊಂಡು ಪಲ್ಯ ಹೆಚ್ಚಿಗೆ ಸೇವಿಸುತ್ತೀನಿ. ಒಂದು ರೀತಿ ಹೇಳಬೇಕು ಅಂದ್ರೆ ಪಲ್ಯನೇ ಅನ್ನದ ರೀತಿ ತಟ್ಟೆಗೆ ಹಾಕಿಕೊಂಡಿರುವೆ.

ರಾತ್ರಿ ಊಟ ಆದಷ್ಟು ಮನೆಯಲ್ಲಿ ತಿನ್ನುವುದಕ್ಕೆ ಇಷ್ಟ ಪಡುತ್ತೀವಿ..ಮದುವೆ ಆದ್ಮೇಲೆ ಜಾಸ್ತಿ ಅಡುಗೆ ಮಾಡುವುದಕ್ಕೆ ಶುರು ಮಾಡಿದ್ದೀವಿ. ಪ್ರಜ್ವಲ್ ಮತ್ತು ನಾನು ಜಾಸ್ತಿ ಜ್ಯೂಸ್ ಕುಡಿಯುತ್ತೀವಿ...ರಾತ್ರಿ ಸಮಯದಲ್ಲಿ Raw ಆಹಾರ ಮತ್ತು ಮೊಸರು ಅನ್ನ ಸೇವಿಸಬಾರದು

ದಿನದಲ್ಲಿ ವರ್ಕೌಟ್ ಮಾಡುವುದಕ್ಕೆ ಬೆಸ್ಟ್‌ ಟೈಂ ಅಂತಿಲ್ಲ ಆದರೆ ಎಷ್ಟು ಸಮಯ ವರ್ಕೌಟ್ ಮಾಡುತ್ತೀರಾ ಎಷ್ಟು ಕರೆಕ್ಟ್ ಆಗಿ ಮಾಡುತ್ತೀರಾ ಅನ್ನೋದು ಮುಖ್ಯವಾಗುತ್ತದೆ. ನಾನು ಅದಷ್ಟು ಬೆಳಗ್ಗೆ ವರ್ಕೌಟ್ ಮಾಡುವೆ ಏಕೆಂದರೆ ನಮ್ಮ ದೇಹದಲ್ಲಿ ಕೆಲವೊಂದು ಹಾರ್ಮೋನ್‌ಗಳು ಬೆಳಗ್ಗೆ ರಿಲೀಸ್ ಆಗುತ್ತದೆ. 

ಎಲ್ಲರಿಗೂ ನಾನು ಒಂದು ಸಲಹೆ ಕೊಡಲು ಇಷ್ಟ ಪಡುತ್ತೀನಿ....ಏನಾದರೂ ತಿನ್ನುವಾಗ ಎಂಜಾಯ್ ಮಾಡಿಕೊಂಡು ತಿನ್ನಬೇಕು...ಅಯ್ಯೋ ಈಗ ಊಟ ಮಾಡಿದರೆ ಇಷ್ಟು ತಿಂದರೆ ನಾಳೆ ನನಗೆ ಏನಾಗುತ್ತೆ? ದಪ್ಪ ಆಗಿಬಿಟ್ಟರೆ ಅನ್ನೋ ಯೋಚನೆ ಬೇಡ. 

ಇವತ್ತು ವರ್ಕೌಟ್ ಮಾಡಿಲ್ಲ ಅಂದ್ರೆ ಏನಾಗುತ್ತೆ ಜಂಕ್‌ ತಿಂದ್ರೆ ಏನಾಗುತ್ತೆ...ಹೀಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗುತ್ತದೆ. 10 ವರ್ಷಗಳಿಂದ ನಾನು 50 ಕೆಜಿ ತೂಕವನ್ನು ಕಾಪಾಡಿಕೊಂಡು ಬರುತ್ತಿರಲು ಇದೇ ಕಾರಣ' ಎಂದಿದ್ದಾರೆ ರಾಗಿಣಿ.  

click me!