ಬ್ಲೌಸಿಲ್ಲದೇ ನೇರಳೆ ಸೀರೆ ಉಟ್ಟು ಅಪ್ಸರೆಯಂತೆ ಕಂಗೊಳಿಸಿದ ಖುಷಿ ರವಿ… ಕಾಮೆಂಟ್ ಆಫ್ ಮಾಡಿದ್ದೇಕೆ?

Published : Apr 04, 2024, 05:42 PM IST

ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ರವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದಾರೆ. ನೇರಳೆ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ಖುಷಿ ಅಪ್ಸರೆಯಂತೆ ಕಾಣಿಸ್ತಿದ್ದಾರೆ.   

PREV
16
ಬ್ಲೌಸಿಲ್ಲದೇ ನೇರಳೆ ಸೀರೆ ಉಟ್ಟು ಅಪ್ಸರೆಯಂತೆ ಕಂಗೊಳಿಸಿದ ಖುಷಿ ರವಿ… ಕಾಮೆಂಟ್ ಆಫ್ ಮಾಡಿದ್ದೇಕೆ?

ದಿಯಾ ಸಿನಿಮಾದಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ನಟಿ ಖುಷಿ ರವಿ (Kushee Ravi) ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೊಸ ಹೊಸ ಫೋಟೋ ಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. 
 

26

ಕಳೆದ ಬಾರಿ ಕೇಸರಿ, ಗುಲಾಬಿ ಬಣ್ಣದ ಸೀರೆಯುಟ್ಟು ಬ್ಯಾಕ್ ಲೆಸ್ ಬ್ಲೌಸ್ ತೊಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು, ಈ ಬಾರಿಯೂ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ನೇರಳೆ ಬಣ್ಣದ ಸೀರೆಯುಟ್ಟಿರುವ ಖುಷಿ, ಬ್ಲೌಸ್ ಧರಿಸಿಲ್ಲ. ಆದರೆ ಎಲ್ಲೂ ಅಶ್ಲೀಲತೆಗೆ ಎಡೆಮಾಡಿಕೊಡದೇ ಅಂದವಾಗಿ ಕಾಣಿಸಿಕೊಂಡಿದ್ದಾರೆ. 
 

36

ತಿಳಿ ನೇರಳೆ ಬಣ್ಣದ ಸೀರೆಯುಟ್ಟಿದ್ದು, ಅದರ ಸೆರಗಿನಿಂದ ಹಳೆ ಕಾಲದ ಮಹಿಳೆಯರಂತೆ ತಮ್ಮ ಎದೆಯನ್ನು ಮುಚ್ಚಿ, ಸೆರಗನ್ನು ಬೆನ್ನ ಹಿಂದೆ ಬಿಟ್ಟಿದ್ದಾರೆ. ಆಭರಣಗಳೇ ಧರಿಸದೇ, ಒಂದು ಸಣ್ಣ ಸರವನ್ನು ತಲೆಯ ಮೇಲೆ ಹಾಕಿದ್ದಾರೆ. ಒಟ್ಟಲ್ಲಿ ಸಿಂಪಲ್ ಲುಕ್ಕಲ್ಲಿ ಖುಷಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. 
 

46

ಖುಷಿ ಬಹಳ ಹಿಂದೆ ಈ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ(Instagram) ಹಂಚಿಕೊಂಡಿದ್ದಾರೆ. ಅದರ ಜೊತೆ ‘ಆಕೆ Stunning Look ಅನ್ನು ಸುಂದರವಾಗಿ ಮತ್ತು ಸ್ಟ್ರಾಂಗ್ ಲುಕ್ ಅನ್ನು ಅಜೇಯವಾಗಿ ಕಾಣುವಂತೆ ಮಾಡಿದ್ದಾರೆ. ಇವೆರಡನ್ನೂ ತಮ್ಮ ಭುಜಗಳ ಮೇಲೆ ಹೊತ್ತು ಬ್ರಹ್ಮಾಂಡದಲ್ಲಿ ನಡೆಯುವ ಮೂಲಕ ಜೋಡಿ ರೆಕ್ಕೆಗಳನ್ನೇ ಕಟ್ಟಿ ಹಾರುವಂತೆ ಕಂಡಳು’ ಎನ್ನುವ ಉಲ್ಲೇಖಗಳನ್ನು ಕ್ಯಾಪ್ಷನ್‌ನಲ್ಲಿ ಬರೆಯುವ ಮೂಲಕ ತಾನೊಬ್ಬ ಸ್ಟ್ರಾಂಗ್ ಮಹಿಳೆ ಅನ್ನೋದನ್ನು ತಿಳಿಸಿದ್ದಾರೆ. 
 

56

ಇನ್ನು ವಿವಿಧ ಭಾವ, ಭಂಗಿಯಲ್ಲಿ ಪೋಸ್ ನೀಡಿರುವ ಖುಷಿ ತಮ್ಮ ಫೋಟೋಗಳ ಜೊತೆಗಿನ ಕಾಮೆಂಟ್ ಸೆಕ್ಷನ್ ಮಾತ್ರ ಆಫ್ ಮಾಡಿದ್ದಾರೆ. ಇಲ್ಲಿವರೆಗೆ ಯಾವುದೇ ಗಾಸಿಪ್‌ಗೆ ತುತ್ತಾಗದೇ ಬಂದ ಖುಷಿ, ಯಾವುದೇ ಕೆಟ್ಟ ಕಾಮೆಂಟ್ಸ್ ಬಾರದಿರಲೆಂದು ಕಾಮೆಂಟ್ ಸೆಕ್ಷನ್ ಆಫ್ ಮಾಡಿದಂತಿದೆ. 
 

66

ಇನ್ನು ಕರಿಯರ್ ವಿಷಯಕ್ಕೆ ಬರೋದಾದ್ರೆ ಖುಷಿ ಸದ್ಯಕ್ಕೆ ಫುಲ್ ಮೀಲ್ಸ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಅದು ಪೋಸ್ಟ್ ಫ್ರೊಡಕ್ಷನ್ ಹಂತದಲ್ಲಿದೆ, ಸನ್ ಆಫ್ ಮುತ್ತಣ್ಣ(Son of Muttanna) ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories