ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮೃತಾ ಅಯ್ಯಂಗಾರ್ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿರುವ ಇನ್ನಿತರ ನಟಿಯರ ರೀತಿ ನಾನು ಕೂಡ ವಿಭಿನ್ನ ಪಾತ್ರಗಳನ್ನು ಹುಡುಕುತ್ತಿರುವೆ. ವರ್ಷಗಳು ಕಳೆದರೂ ಲವ್ ಮಾಕ್ಟೇಲ್ ಪಾತ್ರವನ್ನು ಮೆಚ್ಚಿಕೊಳ್ಳುತ್ತಾರೆ.
ನನ್ನ ಮುಂದಿನ ಸಿನಿಮಾ ನಟ ಶರಣ್ ಜೊತೆ, ಸೇಮ್ ಲವ್ ಮಾಕ್ಟೇಲ್ ಸಿನಿಮಾ ಫೀಲ್ ಕೊಡುತ್ತಿದೆ. ವಿಭಿನ್ನ ಪಾತ್ರಗಳು ನನಗೆ ಇಷ್ಟವಾಗುತ್ತದೆ ಎಂದು ಈ ಹಿಂದೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದ ವಿಚಾರವಿದು.
ಸುಮಾರು 5 ವರ್ಷಗಳಿಂದ ಹಿಟ್ ಸಿನಿಮಾ ಮಾಡುತ್ತಿದ್ದರೂ ಸಿನಿಮಾ ನಿರ್ದೇಶಕರಿಗೆ ಹಾಗೂ ವೀಕ್ಷಕರಿಗೆ ನಾವು ಹೀರೋಯಿನ್‌ಗಳಲ್ಲ.
ಫಿಲ್ಮ್ ಮೇಕರ್‌ಗಳ ಪ್ರಕಾರ ಸಿನಿಮಾ ಬಜೆಟ್‌ಗಳು ನಾಯಕಿಯರ ಆಯ್ಕೆಯನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಆಫರ್ ಬಂದಾಗ ಟಾಪಿಕ್ ಸಂಭಾವನೆ ಮಾತ್ರವಾಗಿರುತ್ತದೆ.
ಕಥೆ ಹೇಳುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಹಲವು ಸಿನಿಮಾಗಳು ಪುರುಷ ಪ್ರಧಾನ ಕಥೆಯಾಗಿರುತ್ತದೆ. ಅಲ್ಲಿ ಇಲ್ಲಿ ನಾಯಕಿ ಎಂಟ್ರಿ ಕಥೆ ಇರುತ್ತದೆ ಅಷ್ಟೆ.
ನಿರ್ದೇಶಕರು ಒಮ್ಮೆ ನಮ್ಮನ್ನು ಸಂಪರ್ಕಿಸಿದಾಗ 10 ದಿನ ನಿಮ್ಮ ಡೇಟ್ ಬೇಕು ನಮ್ಮ ಬಜೆಟ್ ಇಷ್ಟು ನಿಮಗೆ ಓಕೆ ಅಂದ್ರೆ ಕಥೆ ಹೇಳುತ್ತೀವಿ ಎನ್ನುತ್ತಾರೆ.
ತುಂಬಾ ತುಂಬಾ ಕೆಟ್ಟ ರೀತಿಯಲ್ಲಿ ಸಂಪರ್ಕಿಸುತ್ತಾರೆ. ನನಗೆ ಕಥೆ ಇಷ್ಟ ಆದ್ರೆ ಸಿನಿಮಾ ಮಾಡುವೆ ಆದರೆ ಸಂಭಾವನೆ ಕಡಿಮೆಯಾಗಿರುತ್ತದೆ ಎಂದಿದ್ದಾರೆ ಅಮೃತಾ.