ಬ್ಯಾಚುಲರ್ ಪಾರ್ಟಿ ಬಳಿಕ ಹೆಂಡ್ತಿ, ಮಗಳ ಜೊತೆ ಮನಾಲಿಯಲ್ಲಿ ಯೋಗಿ ಮೋಜು ಮಸ್ತಿ

Published : Jan 31, 2024, 02:51 PM IST

ಬ್ಯಾಚುಲರ್ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಲೂಸ್ ಮಾದ ಯೋಗಿ ತನ್ನ ಹೆಂಡತಿ ಮತ್ತು ಮಗಳ ಜೊತೆ ಹಿಮಾಚಲ ಪ್ರದೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.   

PREV
17
ಬ್ಯಾಚುಲರ್ ಪಾರ್ಟಿ ಬಳಿಕ ಹೆಂಡ್ತಿ, ಮಗಳ ಜೊತೆ ಮನಾಲಿಯಲ್ಲಿ ಯೋಗಿ ಮೋಜು ಮಸ್ತಿ

ದುನಿಯಾ ಸಿನಿಮಾದ ಬಳಿಕ ಲೂಸ್ ಮಾದ ಎಂದೇ ಖ್ಯಾತಿ ಪಡೆದಿರುವ ಯೋಗೀಶ್ (Yogesh) ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯಿಂದಲೇ ಗುರುತಿಸಿಕೊಂಡರು. ದುನಿಯಾದಿಂದ ಇಲ್ಲಿವರೆಗೂ ನಟ 50 ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

27

ಸಿದ್ಲಿಂಗು, ಅಂಬಾರಿ, ಹುಡುಗರು ನಂತರ ಬೆರಳೆಣಿಕೆಯಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಯೋಗಿ ಇದೀಗ ಬ್ಯಾಚುಲರ್ ಪಾರ್ಟಿ (Bachelor Party) ಮೂಲಕ ಸದ್ದು ಮಾಡ್ತಿದ್ದಾರೆ. ಈ ಕಾಮಿಡಿ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟನೆಯನ್ನು ಜನ ಇಷ್ಟಪಟ್ಟಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

37

ರಕ್ಷಿತ್ ಶೆಟ್ಟಿ (Rakshith Shetty) ನಿರ್ಮಾಣ ಮಾಡಿರುವ, ಹೊಸ ನಿರ್ದೇಶಕ ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಚಿತ್ರಪೂರ್ತಿ ಜನರನ್ನು ನಗೆಗಡಲಲ್ಲಿ ತೇಲಾಡಿಸುತ್ತೆ ಎಂದು ಸಿನಿ ರಸಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. 
 

47

ಸಖತ್ ಎಂಟರ್ ಟೈನ್ ಮೆಂಟ್ ಮೂಲಕ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿರುವ ಯೋಗಿ ಇದೀಗ ಪತ್ನಿ, ಮಗಳು ಮತ್ತು ಫ್ರೆಂಡ್ಸ್ ಜೊತೆ ಹಿಮಾಚಲ ಪ್ರದೇಶದಲ್ಲಿ ಟೂರ್ ಮಾಡ್ತಿದ್ದಾರೆ. 
 

57

ಯೋಗಿ ಪತ್ನಿ ಸಾಹಿತ್ಯ (Sahitya) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಿಮಾಚಲ ಪ್ರದೇಶ ಟೂರ್ ನ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪತಿ ಯೋಗೀಶ್ ಮತ್ತು ಮಗಳ ಜೊತೆ ವಿವಿಧ ರೀತಿಯಲ್ಲಿ ಹಿಮದ ನಡುವೆ ಫೋಸ್ ನೀಡುತ್ತಿರುವ ಪೋಟೋ ಪೋಸ್ಟ್ ಮಾಡಿದ್ದಾರೆ.
 

67

ಯೋಗಿ 2017 ನವೆಂಬರ್ 2ರಂದು ಸಾಹಿತ್ಯ ಜೊತೆ ಸಪ್ತಪದಿ ತುಳಿದಿದ್ದರು.2019 ರಲ್ಲಿ ಈ ಜೋಡಿಗೆ ಹೆಣ್ಣು ಮಗು ಜನಿಸಿತ್ತು. ಹಿಂದೊಮ್ಮೆ ಪತ್ನಿ ಸಾಹಿತ್ಯ ಯೋಗಿಯವರನ್ನು ಬಿಟ್ಟು ಹೋಗಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು, ಆದರೆ ಈ ಸುಳ್ಳು ಸುದ್ದಿಗೆ ಯೋಗಿ ಫುಲ್ ಸ್ಟಾಪ್ ಇಟ್ಟಿದ್ದರು. 
 

77

ಇನ್ನು ಯೋಗಿಯಂತೂ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೋಜಿ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿದೆ, ಕಂಸ, ಹೆಡ್ ಬುಶ್ 2, ಸಿಂದ್ಲಿಂಗು 2 ಕೂಡ ಶೂಟಿಂಗ್ ಹಂತದಲ್ಲಿದೆ. 
 

Read more Photos on
click me!

Recommended Stories